Karnataka Rain: ಮಳೆ ಅಬ್ಬರಕ್ಕೆ ಬೆಚ್ಚಿಬಿದ್ದ ಕನ್ನಡಿಗರು, ಕರ್ನಾಟಕದ ಈ ಜಿಲ್ಲೆಗಳಿಗೆ ಮತ್ತಷ್ಟು ಮಳೆ!
ಮಳೆ ಆರ್ಭಟಕ್ಕೆ ಕರ್ನಾಟಕದ ಜನರು ಮತ್ತೊಮ್ಮೆ ಟೆನ್ಷನ್ ಮಾಡಿಕೊಂಡು ಕೂರುವ ಸ್ಥಿತಿ ಇದೀಗ ಎದುರಾಗಿದೆ. ಬಿಟ್ಟೂ ಬಿಡದೆ ಸುರಿಯುತ್ತಿರುವ ಮಳೆಯ ಹಿನ್ನೆಲೆ ಹೊಸ ಟೆನ್ಷನ್, ಆತಂಕದ ವಾತಾವರಣ ಇದೀಗ ಕರ್ನಾಟಕದ ರೈತರಲ್ಲಿ ನಿರ್ಮಾಣ ಆಗಿದೆ. ಈ ಬಾರಿ ಮಳೆ ಅಂದ್ರೆ ಮುಂಗಾರು ಮಳೆ ಅದ್ಭುತವಾಗಿ ಬಂದಿತ್ತು, ಹೀಗಾಗಿ ಕನ್ನಡಿಗರು ಫುಲ್ ಖುಷಿಯಾಗಿ ಕುಣಿದಾಡಿದ್ದರು. ಆದರೆ ಹೀಗೆ ಮುಂಗಾರು ಮಳೆ ಉತ್ತಮವಾಗಿ ಬಂದು, ಉತ್ತಮ ಬೆಳೆಯನ್ನು ಕಟಾವು ಮಾಡುವ ರೈತರ ನಿರೀಕ್ಷೆಗೆ ಇದೀಗ ಹಿಂಗಾರು ಮಳೆ ಮಣ್ಣು ಸುರಿಯುತ್ತಿದೆ.
ಮಳೆ ಆರ್ಭಟ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿದ್ದು, ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಮಳೆ ಆರ್ಭಟಿಸುತ್ತಿದೆ. ಚಳಿಗಾಲ ಇನ್ನೇನು ಆರಂಭ ಆಗುತ್ತಿದೆ. ಹೀಗೆ ಚಳಿಗಾಲದ ಆರಂಭದಲ್ಲೂ ಮಳೆ ಬರುತ್ತಿದೆ ಅಂದ್ರೆ ಜನರಿಗೆ ಕೂಡ ನಂಬಲು ಆಗುತ್ತಿಲ್ಲ. ಈ ರೀತಿ ಜನರನ್ನು ಕೂಡ ಭಾರಿ ಮಳೆ ಗೊಂದಲಕ್ಕೆ ದೂಡಿರುವ ಸಮಯದಲ್ಲೇ ಮತ್ತಷ್ಟು ಜಿಲ್ಲೆ & ತಾಲೂಕುಗಳಿಗೆ ಇದೀಗ ಭಾರಿ ಮಳೆ ಎಂಟ್ರಿ ಆಗಲಿದೆ ಎಂದು ವಾರ್ನಿಂಗ್ ಕೊಡಲಾಗಿದೆ.

ಮಳೆ ಬೀಳುವ ಜಿಲ್ಲೆಗಳು ಇವು
ಭಾರಿ ಮಳೆ ಬಗ್ಗೆ IMD ಎಚ್ಚರಿಕೆ ನೀಡಿರುವ ಪ್ರಕಾರ, ನವೆಂಬರ್ 15 ರಂದು ಅಂದ್ರೆ ಇಂದು ಚಿಕ್ಕಮಗಳೂರು, ಶಿವಮೊಗ್ಗ, ತುಮಕೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಗುಡುಗು ಸಹಿತವಾದ ಮಳೆ ಬೀಳಲಿದೆ ಅಂತ ವಾರ್ನಿಂಗ್ ಕೊಡಲಾಗಿದೆ. ಚಿಕ್ಕಮಗಳೂರು, ಶಿವಮೊಗ್ಗ, ತುಮಕೂರು ಮತ್ತು ಹಾಸನ ಜಿಲ್ಲೆಗಳು ಮಾತ್ರವಲ್ಲದೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಕೂಡ ಮಳೆರಾಯ ಅಬ್ಬರಿಸುವುದು ಗ್ಯಾರಂಟಿ ಆಗಿದೆ.
ನಾಳೆ ಕೂಡ ಭಾರಿ ಭರ್ಜರಿ ಮಳೆ!
ಅಂದಹಾಗೆ ಬೆಂಗಳೂರು ಸೇರಿ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಕೂಡ ಇಂದು ಭಾರಿ ಮಳೆ ಬೀಳಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಮತ್ತೊಂದು ಕಡೆಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲೂ ಹಲವು ಜಿಲ್ಲೆಗಳಿಗೆ ಇಂದು ಮಳೆಯ ಎಂಟ್ರಿ ಆಗಲಿದೆ. ಈ ರೀತಿ ಮಳೆ ಅಬ್ಬರ ಇಂದಿಗೆ ಮಾತ್ರ ಸೀಮಿತವಾಗಿ ಇಲ್ಲ, ನವೆಂಬರ್ 16 ಅಂದ್ರೆ ನಾಳೆ ಕೂಡ ಮಳೆ ಅಬ್ಬರಿಸಲಿದೆ.
ನವೆಂಬರ್ 16ಕ್ಕೆ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಯ ಹಲವು ಭಾಗದಲ್ಲಿ ಮಳೆ ಅಬ್ಬರಿಸಲಿದ್ದು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಮೈಸೂರು & ಕೊಡಗು ಜಿಲ್ಲೆಗಳಲ್ಲು ಭಾರಿ ಮಳೆ ಬೀಳುವ ಮುನ್ನೆಚ್ಚರಿಕೆ ನೀಡಲಾಗಿದೆ. ಹಾಗೇ ಉತ್ತರ ಕರ್ನಾಟಕ ಭಾಗ ಸೇರಿ, ಬೆಂಗಳೂರು ಹಾಗೂ ದಕ್ಷಿಣ ಕರ್ನಾಟಕ ಭಾಗದಲ್ಲೂ ಮಳೆ ಅಬ್ಬರಿಸುವುದು ಗ್ಯಾರಂಟಿ ಆಗಿದೆ.
ಒಟ್ನಲ್ಲಿ ಮಳೆ ಕಾಟ ನಿಲ್ಲುತ್ತಿಲ್ಲ, ಇದು ಕನ್ನಡಿಗರ ಚಿಂತೆ ಹೆಚ್ಚು ಮಾಡುತ್ತಿದೆ. ಇದರೊಂದಿಗೆ ಮುಂದಿನ ಒಂದು ವಾರಗಳ ಕಾಲ ಇದೇ ರೀತಿಯ ಪರಿಸ್ಥಿತಿ ಇರಲಿದೆ ಎಂಬ ಎಚ್ಚರಿಕೆಯನ್ನ ಕೂಡ ನೀಡಲಾಗಿದೆ. ಯಾಕಂದ್ರೆ ಚಂಡಮಾರುತ ಅಂದ್ರೆ ವಾಯುಭಾರ ಕುಸಿತದ ಪರಿಣಾಮ ಈ ರೀತಿಯ ಮಳೆ ವಾತಾವರಣ ಇದೀಗ ನಿರ್ಮಾಣ ಆಗಿದೆ.












Click it and Unblock the Notifications