Karnataka Rain: ಮಳೆ.. ಮಳೆ.. ಮುಂದಿನ 48 ಗಂಟೆ ಕಾಲ ಭರ್ಜರಿ ರಣಮಳೆ!

ಮಳೆ ಎಲ್ಲೆಲ್ಲೂ ಅಬ್ಬರಿಸುತ್ತಿದ್ದು, ಮುಂಗಾರು ಮಳೆ ಅಬ್ಬರಕ್ಕೆ ಜನ ಕೂಡ ಬೆಚ್ಚಿಬಿದ್ದಿದ್ದು ಪರದಾಟ ನೋಡಲು ಆಗುತ್ತಿಲ್ಲ. ಉತ್ತರ ಕರ್ನಾಟಕ ಟು ದಕ್ಷಿಣ ಕರ್ನಾಟಕ, ಮಲೆನಾಡು ಟು ಕರಾವಳಿ ಪ್ರದೇಶ ಹೀಗೆ ಕರ್ನಾಟಕದ ಪ್ರತಿಯೊಂದು ಜಾಗಕ್ಕೂ ಮಳೆಯ ಅಬ್ಬರ ಭಾರಿ ಸಮಸ್ಯೆ ಉಂಟು ಮಾಡಿದೆ. ಹೀಗಿದ್ದರೂ ಸೈಲೆಂಟ್ ಆಗದ ವರುಣದ ದೇವ ಮತ್ತಷ್ಟು ಅಬ್ಬರ ತೋರಲು ಸಿದ್ಧವಾಗಿದ್ದು, ಮುಂದಿನ 48 ಗಂಟೆ ಕಾಲ ಅಂದ್ರೆ 2 ದಿನ ಭರ್ಜರಿ ಮಳೆ ಬೀಳುವ ಮುನ್ನೆಚ್ಚರಿಕೆ ನೀಡಲಾಗಿದೆ.

ಕರ್ನಾಟಕದಲ್ಲಿ ಈಗಾಗಲೇ ಸಾಕು ಸಾಕು ಎನಿಸುವಷ್ಟು ಮಳೆ ಬಿದ್ದಿದೆ. ಹೀಗಾಗಿಯೇ, ಜನ ಕೂಡ ಮಳೆ ನಿಂತರೆ ಸಾಕಪ್ಪ ಅಂತಿದ್ದಾರೆ. ಒಂದು ಕಡೆ ಭಾರಿ ಮಳೆ ಪರಿಣಾಮ ಪ್ರಳಯ ಸೃಷ್ಟಿ ಆಗಿದ್ದರೆ, ಮತ್ತೊಂದು ಕಡೆ ಉತ್ತರ ಕರ್ನಾಟಕ ಭಾಗದಲ್ಲಿ ಮಹಾರಾಷ್ಟ್ರ ಮೂಲಕ ಹರಿದು ಬರುತ್ತಿರುವ ನದಿ ನೀರು ಪ್ರವಾಹ ಸೃಷ್ಟಿ ಮಾಡಿದೆ. ಇನ್ನು ಕರ್ನಾಟಕದ ಮಲೆನಾಡು & ಕರಾವಳಿ ಪ್ರದೇಶಗಳ ಪರಿಸ್ಥಿತಿ ಬಿಡಿಸಿ ಹೇಳಬೇಕಿಲ್ಲ. ಇಂತಹ ಪರಿಸ್ಥಿತಿ ಇದ್ದಾಗ ಕೂಡ, ಮಳೆರಾಯ ಸೈಲೆಂಟ್ ಆಗದೆ ಮತ್ತಷ್ಟು ವೈಲೆಂಟ್ ಆಗುತ್ತಿದ್ದಾನೆ. ಇದರ ಪರಿಣಾಮ ಮುಂದಿನ 2 ದಿನ ಈ ಭಾಗದಲ್ಲಿ ಮತ್ತಷ್ಟು ರಣಭೀಕರ ಮಳೆ ಬೀಳುವ ಎಚ್ಚರಿಕೆ ನೀಡಲಾಗಿದೆ.

Heavy Rain Alert Has Been Given To These Districts Of Karnataka For 30th Of July 2024

ಮಳೆ.. ಮಳೆ.. ಮುಂಗಾರು ಮಳೆ!

ಹೌದು, 2023 ರಲ್ಲಿ ಮಳೆ ಬಾರದೆ 2024ರ ಫೆಬ್ರವರಿ, ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಕರ್ನಾಟಕ ಪರದಾಡಿ ಹೋಗಿತ್ತು. ಇನ್ನೇನು ಹನಿ ಹನಿ ನೀರಿಗೂ ಕನ್ನಡಿಗರು ಪರದಾಡುವ ಸಮಯಕ್ಕೆ, ಅಂದ್ರೆ ಮೇ ತಿಂಗಳ ವೇಳೆಗೆ ಒಂದಷ್ಟು ಮಳೆ ಬಿದ್ದು ನೆಲವೂ ತಂಪಗಾಗಿತ್ತು. ಆ ನಂತರ, ನಿಧಾನವಾಗಿ ಕರ್ನಾಟಕದಲ್ಲಿ ಮಳೆ ಅಬ್ಬರ ಶುರುವಾಗಿತ್ತು. ಆದರೂ ಕರ್ನಾಟಕದಲ್ಲಿ ನದಿ & ಕೆರೆಗಳು ತುಂಬದೆ ಮತ್ತೆ ಬರದ ಭಯ ಆವರಿಸಿತ್ತು. ಹೀಗಿದ್ದಾಗಲೇ ಜುಲೈ ತಿಂಗಳ ಮೊದಲ ವಾರದಲ್ಲಿ ಬಿತ್ತು ನೋಡಿ ರಣಮಳೆ, ಆಗಲೇ ಕರ್ನಾಟಕದ ಬಹುತೇಕ ಎಲ್ಲಾ ಡ್ಯಾಂಗಳಿಗೆ ತುಂಬಿ ತುಳುಕುವಷ್ಟು ನೀರು ಬಂದಿದೆ. ಹೀಗಿದ್ದರೂ ಕರ್ನಾಟಕದ ಕರಾವಳಿ & ಮಲೆನಾಡು ಪ್ರದೇಶದಲ್ಲಿ ಮತ್ತೆ ಮಳೆರಾಯ ಅಬ್ಬರಿಸಲಿದ್ದು, ಮುಂದಿನ 48 ಗಂಟೆ ಮತ್ತಷ್ಟು ಮಳೆಯ ಆಗಮನ ಆಗಲಿದೆ.

ಈ ಜಿಲ್ಲೆಗಳಲ್ಲಿ ಭರ್ಜರಿ ಮಳೆ!

ಅಂದಹಾಗೆ ಈಗಿನ ಮಾಹಿತಿ ಪ್ರಕಾರ, ಉಡುಪಿ, ಶಿವಮೊಗ್ಗ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಭಾಗದಲ್ಲಿ ಹಾಗೇ ಉತ್ತರ ಕನ್ನಡ & ಹಾಸನದ ಮಲೆನಾಡು ಭಾಗದಲ್ಲಿ ಮಳೆರಾಯ ಅಬ್ಬರ ತೋರುವುದು ಪಕ್ಕಾ ಆಗಿದೆ. ಇದರ ಜೊತೆಗೆ ಉತ್ತರ ಒಳನಾಡು ಭಾಗದಲ್ಲೂ 2 ದಿನಗಳ ಕಾಲ ಭಾರಿ ಮಳೆ ಬೀಳುವ ಮುನ್ನೆಚ್ಚರಿಕೆ ಇದ್ದು, ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ ಕೂಡ ನೀಡಲಾಗಿದೆ. ಜೂನ್ 31 ರವರೆಗೆ ರಾಜ್ಯದಲ್ಲಿ ಭಾರಿ ಮಳೆ ಬೀಳಲಿದೆ ಹೀಗಾಗಿ ಮುಂದಿನ 2 ದಿನ ಕರ್ನಾಟಕದ ಕರಾವಳಿ ಭಾಗದಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ ಹವಾಮಾನ ಇಲಾಖೆ.

ರಾಜಧಾನಿ ಬೆಂಗಳೂರಲ್ಲೂ ಮಳೆ!

ಕರಾವಳಿ ಜಿಲ್ಲೆಗಳ ಬಹುತೇಕ ಸ್ಥಳಗಳಲ್ಲಿ ಗಾಳಿ ವೇಗ 30 ರಿಂದ 40 ಕಿಲೋ ಮೀಟರ್ ಇರಲಿದೆ. ಒಳನಾಡಿನ ಜಿಲ್ಲೆಗಳಲ್ಲೂ, ಬಹುತೇಕ ಇದೇ ರೀತಿಯ ವಾತಾವರಣ ಇರಲಿದೆ. ಮತ್ತೊಂದು ಕಡೆ ರಾಜಧಾನಿ ಬೆಂಗಳೂರಿನಲ್ಲಿ ಕೂಡ ಮಳೆರಾಯ ಅಬ್ಬರಿಸಲಿದ್ದಾನೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ. ಬೆಂಗಳೂರು ನಗರ & ಸುತ್ತಮುತ್ತ ಮೋಡ ಕವಿದ ವಾತಾವರಣ ಇರಲಿದ್ದು, ಈ ನಡುವೆ ಗಾಳಿ ವೇಗ 40 ರಿಂದ 50 kmph ಮುಟ್ಟುವ ಸಾಧ್ಯತೆ ಇದೆ. ಹಾಗೇ ಕನಿಷ್ಠ 20 ಡಿಗ್ರಿ ಹಾಗೂ ಗರಿಷ್ಠ 27 ಡಿಗ್ರಿ ಸೆಲ್ಸಿಯಸ್ ವಾತಾವರಣ ಇರಲಿದೆ. ಹಾಗೇ ಅಲ್ಲಿಲ್ಲಿ ಭಾರಿ ಮಳೆ ಬೀಳುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+