Heat Wave Karnataka: ಕರಾವಳಿ ಬಿಸಿ ಕಾವಲಿಯ ಮೇಲೆ ಮಾಲಿನ್ಯದ ಥಡ್ಕಾ: ರಾಜಾರಾಂ ತಲ್ಲೂರು ಬರಹ
Heat Wave Karnataka: ಕರಾವಳಿ ಬಿಸಿ ಕಾವಲಿಯ ಮೇಲೆ, ಮಾಲಿನ್ಯದ ಥಡ್ಕಾ: ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರ ಬರಹ ಇಲ್ಲಿದೆ.
ಉಡುಪಿಯಲ್ಲಿ ಬೆಳಗ್ಗೆ ಐದೂವರೆಗೆಲ್ಲ ತಡೆಯಲಾರದ ಸೆಖೆ. ಏನಿದು ಕಥೆ ಎಂದು ಹುಡುಕಿದರೆ ಬೆಳ್ಳಂಬೆಳಗ್ಗೆ ಉಷ್ಣತೆ 31ಡಿಗ್ರಿ (Feels like 36 Degree). ಈಗ 10 ಗಂಟೆ ಹೊತ್ತಿಗೆ 32ಡಿಗ್ರಿ (Feels like 38 degree.) ಈ "ಫೀಲ್ಸ್ ಲೈಕ್" ಅರ್ಥ ಏನೆಂದರೆ, ಕರಾವಳಿ ವಾತಾವರಣದಲ್ಲಿ ತೇವಾಂಶ (humidity) ಇರುವುದರಿಂದ 32 ಡಿಗ್ರಿ ಕೂಡ 38 ಡಿಗ್ರಿಯಲ್ಲಿರುವ ಬಿಸಿಯ ಅನುಭವ ನಿಡುತ್ತದೆ.

ಹಾಗಿದ್ರೆ, ಕರ್ನಾಟಕದ ಬಿಸಿಲೂರು ಕಲಬುರಗಿಯಲ್ಲಿ ಎಷ್ಟು ಉಷ್ಣಾಂಶ ಎಂದು ಹುಡುಕಿದರೆ, ಇನ್ನೂ 37 ಡಿಗ್ರಿ. ನಮ್ಮದು ಅವರಿಗಿಂತಲೂ feels like ಒಂದು ಡಿಗ್ರಿ ಹೆಚ್ಚು! ಇದಲ್ಲವೇ ಬುದ್ಧಿವಂತರ ಜಿಲ್ಲೆಯ ಸಾಧನೆ. ವಾತಾವರಣವೋ ಇನ್ನೊಂದೋ ಏನೋ ಬದಲಾವಣೆ ಆಗಿಬಿಟ್ಟಿದೆ. ಇರಲಿ ಬಿಡಿ ಬಿಸಿ ಸಹಿಸಿಕೊಳ್ಳೋಣ ಎಂದರೆ, ಗಾಳಿಯಲ್ಲಿರುವ ಮಾಲಿನ್ಯದ ಗುಣಮಟ್ಟ ಬೆಳ್ಳಂಬೆಳಗ್ಗೆ AQI - 118. ಈ ಮಟ್ಟ 100ಕ್ಕಿಂತ ಕೆಳಗಿದ್ದರೆ, ಉಸಿರಾಡುವ ಗಾಳಿ ಆರೋಗ್ಯಕರ ಎಂದು ಲೆಕ್ಕಾಚಾರ.
ಕರಾವಳಿಯಲ್ಲಿ ಸಾಮಾನ್ಯವಾಗಿ ಇದು ಆರೋಗ್ಯಕರ ಮಟ್ಟದಲ್ಲಿರಬೇಕು. ಆದರೆ, ಅದು ಈ ಕಾವಲಿಯ ಮೇಲಿನ ದೇಹಗಳಿಗೆ ಪರಿಸರ ಮಾಲಿನ್ಯ ಥಡ್ಕಾ ಹಚ್ಚುತ್ತಿದೆ. ನಮ್ಮ ಆನಿಗಳೆಲ್ಲ "ನರಮಾಂಸ ಭಕ್ಷಣೆ ಶುರು ಮಾಡಿದ ಮೇಲೆ" ಹೀಗೆಲ್ಲ ಆಗತೊಡಗಿದೆ. ಈ AQI ಕೂಡ ನಿಖರವಾಗಿದೆ ಎಂದುಕೊಳ್ಳಬೇಡಿ! ಇದನ್ನು ಮಾನಿಟರ್ ಮಾಡುವ "ಮಾಲಿನ್ಯ ಮಂಡಳಿ" ಯವರು (ಏಕೆಂದರೆ ಅವರೀಗ ಮಾಲಿನ್ಯ ನಿಯಂತ್ರಿಸುವ ಮಂಡಳಿ ಆಗಿ ಉಳಿದಿಲ್ಲ!) ಈಗ ಈ ಆನಿ ಕಾರ್ಖಾನೆಗಳಿಗೆ ಗೇಟ್ ಕೀಪರುಗಳು. ಅವರ ಮಾಲಿನ್ಯ ಪತ್ತೆ ಪರಿಕರಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿವೆಯೇ? ಅವುಗಳ ಥರ್ಡ್ ಪಾರ್ಟಿ ಆಡಿಟ್ ಆಗಿದೆಯೆ? ಇಂತಹದನ್ನೆಲ್ಲ ಕೇಳಲು ಹೊರಟರೆ ನಮಗೆ ಏನೇನೋ ಎಲ್ಲ ಪಟ್ಟ ಸಿಕ್ಕಿಬಿಡುತ್ತದೆ.
ನಾವಿನ್ನು ಇರುವಷ್ಟು ದಿನ ಇದೇ ವಿಷ ಉಸಿರಾಡಿ, ಹೋಗುವ ದಿನ ವಿಷಕಂಠರಾಗಿ ಎದ್ದು ಹೋಗ್ತಾ ಇರಬೇಕು ಅಷ್ಟೇ. ನಾವು ಹೋದಷ್ಟೂ "ವಿಕಾಸ" ಜಾಸ್ತಿ. ತಗ್ಗಿ ಬಗ್ಗಿ ಅಭ್ಯಾಸ ಆಗಿಬಿಟ್ಟಿರುವ ನಮ್ಮ ಡಿಯರ್ ಮೀಡಿಯಾ ಹಾಳಾದ ಚರಂಡಿ, ರಸ್ತೆ ದಾಟಿ ಮುಂದೆ ಕಣ್ಣು ಹಾಯಿಸೋದೇ ಇಲ್ಲ.
Heat Wave Karnataka: ನೆಟ್ಟಿಗರು ಹೇಳಿದ್ದೇನು
ಶಶಿಧರ ಹಾಲಾಡಿ ಎನ್ನುವವರು, ಬೆಂಗಳೂರಿನಲ್ಲಿ ಇವತ್ತು ಗರಿಷ್ಠ ತಾಪಮಾನವು 36 ಡಿಗ್ರಿ ಸೆಲ್ಸಿಯಸ್ ಇದೆ. ಬೆಳಿಗ್ಗೆ ಬೆಂಗಳೂರಿನ ಸೆಕೆ ನೋಡಿ, ಉಡುಪಿ ಮತ್ತು ಬೆಂಗಳೂರಿನ ತಾಪಮಾನಗಳನ್ನು ಹೋಲಿಸಲಾಗುತ್ತಿದೆ. ಇವತ್ತು ಬೆಳಿಗ್ಗೆ ಉಡುಪಿಯಲ್ಲಿ 32 ಬೆಂಗಳೂರಿನಲ್ಲಿ 33 (ಬೆಳಿಗ್ಗೆ ತಾಪಮಾನ, ವೆಬ್‌ಸೈಟ್ ಪ್ರಕಾರ!).. ಅಂದರೆ ಬೆಂಗಳೂರು ಮತ್ತು ಉಡುಪಿಯಲ್ಲಿ ಇವತ್ತು ಸಮಾನ ಉಷ್ಣತೆ! ವಾತಾವರಣ ಕೆಟ್ಟು ಹೋಗಿದೆಯಾ ಅಂತ ಎಂದು ಪ್ರಶ್ನೆ ಮಾಡಿದ್ದಾರೆ. ಎಂ ಜೆ ನಂದನ್ ಅವರು ಇನ್ನೂ ವಿಪರೀತ ಮಟ್ಟಕ್ಕೆ ಹೋಗಿದೆ ನಮ್ ಮಲೆನಾಡ ಕಡೆ.. ಇಂದು ಬೆಳಿಗ್ಗೆನೇ ಹಣೆ ಮೆಲ್ ಬೆವರು ಬರೋವಷ್ಟು ಎಂದಿದ್ದಾರೆ.
ಬರಹ: ರಾಜಾರಾಂ ತಲ್ಲೂರು
-
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
ಗಂಡ-ಹೆಂಡತಿ ಜಗಳ ಇಡೀ ದಿನ ತೋರಿಸಿದರೆ ಸಮಾಜಕ್ಕೆ ಏನು ಪ್ರಯೋಜನ: ಮಾಧ್ಯಮಗಳಿಗೆ ಸಿಎಂ ಪ್ರಶ್ನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
'ಕೋಟಿಗೊಬ್ಬ' ರೀರಿಲೀಸ್: ವಿಷ್ಣುದಾದಾ ಅಭಿಮಾನಿಗಳಿಂದ ಸಂಭ್ರಮ, ಪ್ರಸನ್ನ ಥಿಯೇಟರ್ನಲ್ಲಿ ನಾಳೆ 10,000 ಮಂದಿಗೆ ನಾನ್ವೆಜ್ ಊಟ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Smriti Mandhana: ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್ ಮತ್ತೆ ಒಂದಾಗ್ತಾರಾ? ಇಬ್ಬರ ಕುಟುಂಬಗಳ ಸೀಕ್ರೆಟ್ ಮೀಟಿಂಗ್ ವಿಡಿಯೋ ವೈರಲ್ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Government Schools: ಈ ವರ್ಷದಿಂದಲೇ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ನೀತಿ: ಎಲ್ಲ ಶಿಕ್ಷಕರಿಗೆ ಇಂಗ್ಲಿಷ್ ಟ್ರೈನಿಂಗ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಏಪ್ರಿಲ್ 11ರ ದರಪಟ್ಟಿ












Click it and Unblock the Notifications