ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿವೈಎಸ್ಪಿ ಗಣಪತಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರೆ?

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಜುಲೈ, 08: ದಕ್ಷ ಅಧಿಕಾರಿಯೊಬ್ಬ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರೆ ಆತ ಅದೆಷ್ಟು ನೊಂದಿರಬಹುದು ಎಂಬುದು ಮನದಟ್ಟಾಗಿ ಬಿಡುತ್ತದೆ. ಆದರೆ ಗುರುವಾರ ಆತ್ಮಹತ್ಯೆ ಮಾಡಿಕೊಂಡ ಗಣಪತಿ ಅವರ ಸಾವಿನ ಹಿಂದೆ ಹತ್ತು ಹಲವು ನಿಗೂಢತೆಗಳಿದ್ದರೂ ಕೆಲವೊಂದು ಅಂಶಗಳನ್ನು ಉಲ್ಲೇಖ ಮಾಡಲೇ ಬೇಕಾಗುತ್ತದೆ.

ರಾಮನಗರದಲ್ಲಿ ಡಿವೈಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿರುವ ಗಣಪತಿ ಸಹೋದರ ಎಂ.ಕೆ.ತಮ್ಮಯ್ಯ ನೀಡಿರುವ ಹೇಳಿಕೆ ತನಿಖೆಯಲ್ಲಿ ಪ್ರಮುಖ ಅಂಶವಾಗುವುದರಲ್ಲಿ ಎರಡು ಮಾತಿಲ್ಲ. ಅಣ್ಣ ಗಣಪತಿ ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಒಂದು ವರ್ಷದ ಹಿಂದಿನಿಂದಲೇ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ನೀಡಿರುವ ಹೇಳಿಕೆ ತನಿಖೆಗೆ ಮತ್ತೊಂದು ಆಯಾಮವನ್ನು ತಂದು ಕೊಡುತ್ತದೆ.[ಸಮವಸ್ತ್ರದಲ್ಲೇ ನೇಣಿಗೆ ಶರಣಾದ ಡಿವೈಎಸ್ಪಿ ಗಣಪತಿ]

police

ಇನ್ನು ದಕ್ಷಿಣ ವಲಯ ಐಜಿಪಿ ಬಿ.ಕೆ.ಸಿಂಗ್ ಕೂಡ ಅದೇ ಮಾತನ್ನು ಮಾಧ್ಯಮದ ಮುಂದೆ ಹೇಳಿದ್ದಾರೆ ಗಣಪತಿ ಅವರು ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಗಣಪತಿ ಚಿಕಿತ್ಸೆ ಪಡೆಯುತ್ತಿದ್ದರು ಎಂದಿದ್ದಾರೆ.[ಡಿವೈಎಸ್‌ಪಿ ಆತ್ಮಹತ್ಯೆ : ಸಚಿವ ಜಾರ್ಜ್‌ ಹೇಳುವುದೇನು?]

ಬೆಳಿಗ್ಗೆ 10.30 ಗಂಟೆ ವೇಳೆಗೆ ಗಣಪತಿ ಅವರ ಮರಣೋತ್ತರ ಪರೀಕ್ಷೆಯನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ನಡೆಸಲಾಗಿದ್ದು, ಪಾರ್ಥೀವ ಶರೀರವನ್ನು ಗಣಪತಿ ಸ್ವಗೃಹದತ್ತ ಕೊಂಡೊಯ್ಯಲು ಮುಂದಾಗಲಾಗಿತ್ತು. ಆದರಡ ನ್ಯಾಯದೊರಕಿಸಿ ಕೊಡಬೇಕೆಂದು ಮಡಿಕೇರಿಯಲ್ಲಿ ಬಿಜೆಪಿ ಕಾರ್ಯಕರ್ತರು ಸೇರಿದಂತೆ ನಾಗರಿಕರು ಪ್ರತಿಭಟನೆ ನಡೆಸಿದರು.[ಆತ್ಮಹತ್ಯೆಗೂ ಮುನ್ನ ಎಂಕೆ ಗಣಪತಿ ಹೇಳಿದ್ದೇನು?]

ಸರ್ಕಾರ ಗಣಪತಿ ಆತ್ಮಹತ್ಯೆ ತನಿಖೆಯನ್ನು ಸಿಐಡಿಗೆ ವಹಿಸಿದ್ದು ಸಮರ್ಪಕ ತನಿಖೆಯಿಂದ ಮಾತ್ರ ನಿಜಾಂಶ ಹೊರಬರಲು ಸಾಧ್ಯವಿದೆ.

English summary
Mangaluru Deputy Superintendent of Police (DySP) M.K. Ganapathi committed suicide in Madikeri on July 7, 2016. 'He was Suffering from Depression' says DySP MK Ganapati's brother MK Tammayaah
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X