'ನಾನ್ಯಾಕೆ ಕಾಂಗೆಸ್ಸಿಗೆ ಹೋಗ್ಲಿ ನನಗಂತಾ ದರ್ದೇನಿದೆ'

ಹಾಸನ, ಮಾ.14: ಇತ್ತೀಗಷ್ಟೇ ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಅಶ್ವಮೇಧ ಯಾಗದ ಕುದುರೆ ಇದ್ದಂತೆ ಹಾಡಿ ಹೊಗಳಿದ್ದ ಮಾಜಿ ಸಚಿವ ಎಚ್ ಡಿ ರೇವಣ್ಣ ಅವರು ಈಗ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಎದ್ದಿರುವ ಗಾಳಿ ಸುದ್ದಿಯ ರೆಕ್ಕೆ ಪುಕ್ಕಗಳನ್ನು ಕತ್ತರಿಸಿದ್ದಾರೆ.

'ನಾನ್ಯಾಕೆ ಕಾಂಗ್ರೆಸ್ಸಿಗೆ ಹೋಗ್ಲಿ, ನನಗೆ ಅಂತಾ ದರ್ದೇನಾಗಿದೆ. ಆ ರೀತಿ ಮಾತನಾಡುವವರೇ ಹಿಂದೆ ಬಿಜೆಪಿ ಬಾಗಿಲು ತಟ್ಟಿದ್ದರು. 50 ಕೋಟಿ ದುಡ್ಡನ್ನು ಕೇಳಿದ್ರು, ಅದ್ಯಾಕೋ ಸೇರಲಿಲ್ಲ ಎಂದು ಹೆಸರು ಪ್ರಸ್ತಾಪಿಸದೇ ಮಾಜಿ ಸಚಿವ ಬಿ.ಶಿವರಾಂ ವಿರುದ್ಧ ಎಚ್ ಡಿ ರೇವಣ್ಣ ಅವರು ವ್ಯಂಗ್ಯವಾಡಿದರು. ನಾನು ರಾಜಕೀಯ ಜೀವನ ಪೂರ್ತಿ ಜೆಡಿಎಸ್ ನಲ್ಲೇ ಇರುತ್ತೇನೆ. ಇಲ್ಲಾಂದ್ರೆ ಮನೆಗೆ ಹೋಗ್ತೀನಿ ಬೇರೆ ಪಕ್ಷದ ಬಾಗಿಲು ಬಡಿಯುವ ಜಾಯಮಾನ ನನ್ನದಲ್ಲ ಎಂದರು.[ದೇವೇಗೌಡರು ಅಶ್ವಮೇಧದ 'ಕುದುರೆ']

ಎಚ್ ಎಂ ವಿಶ್ವನಾಥ್ ಅವರದ್ದು ಹೊಟ್ಟೆಪಾಡಿನ ರಾಜಕಾರಣ. ದೇವೇಗೌಡ್ರು ಜೊತೆ ಇದ್ರು, ಯಡಿಯೂರಪ್ಪ ಜೊತೆ ಹೋದ್ರು, ಈಗ ಕಾಂಗ್ರೆಸ್ ಬಾಲ ಹಿಡಿದಿದ್ದಾರೆ. ಅವರ ಮಾತಿಗೆಲ್ಲಾ ತಲೆ ಕೆಡಿಸಿಕೊಳ್ಳಲ್ಲ. ಕಾಂಗ್ರೆಸ್ ಅಭ್ಯರ್ಥಿ ಎ. ಮಂಜು ಗೆಲ್ಲೋಕ್ಕಾಗಿ ನಿಂತಿಲ್ಲ. ಚುನಾವಣೆ ಸಮಯದಲ್ಲಿ ಎಷ್ಟು ಹಣ ಗೆಬರಕ್ಕಾಗುತ್ತಾ ಅಂತ ನಿಂತಿದ್ದಾರೆ ಅಂದ್ರು.. ರೇವಣ್ಣ.

HD Revanna denies report about him joining Congress

ಹೆಚ್ಚಿನ ಭದ್ರತೆಗೆ ಆಗ್ರಹ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಮಾಧ್ಯಮಗಳ ಮೇಲೆ ಪ್ರಭಾವಿ ಸಚಿವರುಗಳಿಂದಲೇ ಹಲ್ಲೆ ನಡೆಯುತ್ತಿದೆ. ದಿನನಿತ್ಯ ಕೊಲೆ ಸುಲಿಗೆಯಂಥ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಪೊಲೀಸರು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸದ ವಾತಾವರಣ ಇರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಹೆಚ್ಚುವರಿ ಭದ್ರತೆ ಹಾಗೂ ವೀಕ್ಷಕರನ್ನು ನಿಯೋಜಿಸಬೇಕು ಎಂದು ಶಾಸಕ ಎಚ್ ಡಿ ರೇವಣ್ಣ ಆಗ್ರಹಿಸಿದರು.

ಹೆಚ್ಚಿನ ಭದ್ರತೆಗೆ ಆಗ್ರಹ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಮಾಧ್ಯಮಗಳ ಮೇಲೆ ಪ್ರಭಾವಿ ಸಚಿವರುಗಳಿಂದಲೇ ಹಲ್ಲೆ ನಡೆಯುತ್ತಿದೆ. ದಿನನಿತ್ಯ ಕೊಲೆ ಸುಲಿಗೆಯಂಥ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಪೊಲೀಸರು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸದ ವಾತಾವರಣ ಇರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಹೆಚ್ಚುವರಿ ಭದ್ರತೆ ಹಾಗೂ ವೀಕ್ಷಕರನ್ನು ನಿಯೋಜಿಸಬೇಕು ಎಂದು ಶಾಸಕ ಎಚ್ ಡಿ ರೇವಣ್ಣ ಆಗ್ರಹಿಸಿದರು.

ಜೆಡಿಎಸ್ ಪಕ್ಷವನ್ನು ಟೀಕಿಸುವ ಕಾಂಗ್ರೆಸ್ ನವರು ಸುಮಾರು 17 ವರ್ಷಗಳ ಕಾಲ ಹಾಸನ-ಬೆಂಗಳೂರು ರೈಲು ಮಾರ್ಗ ಪೂರ್ಣಗೊಳಿಸದೇ ವಿಳಂಬ ಮಾಡಿದ್ದಾದರೂ ಏಕೆ? ಹಾಸನ-ಮಂಗಳೂರು ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಚಾಲನೆ ಏಕೆ ನೀಡಿಲ್ಲ. ಕುಡಿಯುವ ನೀರಿಗೆ ಶಾಶ್ವತ ಪರಿಹಾರಗಳನ್ನು ಏಕೆ ರೂಪಿಸಿಲ್ಲ ಎಂಬ ವಿಚಾರಗಳಿಗೆ ಮೊದಲು ಉತ್ತರ ನೀಡಲಿ. ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರು ಗೆದ್ದರೆ ತೃತೀಯರಂಗ ಒಗ್ಗೂಡುತ್ತದೆ. ರಾಷ್ಟ್ರ ರಾಜಕಾರಣದಲ್ಲಿ ಕಾಂಗ್ರೆಸ್ಸಿನವರು ಹೇಳ ಹೆಸರಿಲ್ಲದ್ದಂತೆ ಮಾಡುತ್ತಾರೆ ಎಂದರು.

ದೇವೇಗೌಡರ ಪ್ರಶ್ನೆ:
ಇದೇ ಸಂದರ್ಭದಲ್ಲಿ ಇನ್ನೊಂದೆಡೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಮಾತನಾಡಿ, ನಾನು ಮತ್ತೆ ಪ್ರಧಾನಿಯಾಗಲು ಹೊರಾಟ ನಡೆಸುತ್ತಿಲ್ಲ. ದೇಶದ ಪ್ರಧಾನಿಯಾಗುವವನು ದೇಶದ ಸಮಗ್ರತೆ, ಐಕ್ಯತೆ ಕಾಪಾಡುವುದು ಮೊದಲ ಗುರಿಯಾಗಬೇಕು. ದೇಶದ ಎಲ್ಲಾ ಜಾತಿ, ವರ್ಗ, ಧರ್ಮಗಳನ್ನು ಕಾಪಾಡುವ ಹೃದಯ ವೈಶಾಲ್ಯತೆ ಹೊಂದಿರಬೇಕು.

ಜಿಲ್ಲೆಯಲ್ಲಿ ದೇವೇಗೌಡನನ್ನು ಮುಗಿಸಲು ಬಿ.ಬಿ ಶಿವಪ್ಪನವರ ಮನೇಲಿ ರೋಷನ್ ಬೇಗ್, ಜಗದೀಶ್ ಶೆಟ್ಟರ್ ಸೇರಿ ಮಾತುಕತೆಗಳನ್ನಾಡಿ ಎರಡು ಪಕ್ಷಗಳು ಒಂದಾಗಿವೆ ಎಂಬುದರ ಬಗ್ಗೆ ಪತ್ರಿಕೆಗಳಲ್ಲಿ ಬಂದಿರುವುದನ್ನು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ ದೇವೇಗೌಡರು ಇದಕ್ಕೆ ಸೋನಿಯಾ ಗಾಂಧಿ, ಮೋದಿಯವರು ನೀಡುತ್ತಾರಾ ಎಂದು ಪ್ರಶ್ನಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+