HD Kumaraswamy: ಅಗತ್ಯ ಬಿದ್ದರೆ ಜನರಿಗಾಗಿ ಯುದ್ದ ಮಾಡಲೂ ಸಿದ್ದ: ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ಯಾರಿಗೆ?
ಬೆಂಗಳೂರು, ಜೂನ್ 06: ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ ಕೆ ಶಿವಕುಮಾರ್ ಅವರು ಸ್ನೇಹಕ್ಕೂ ಸಿದ್ದ,ಯುದ್ದಕ್ಕೂ ಸಿದ್ದ ಅಂದಿದಾರೆ. ನಾವು ಇಲ್ಲಿ ಕೂತಿರೋದು ಸ್ನೇಹ ಮಾಡೋಕಲ್ಲ
ಅಗತ್ಯ ಬಿದ್ದರೆ ಜನರಿಗಾಗಿ ಯುದ್ದ ಮಾಡಲೂ ಸಿದ್ದ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.
ಈ ಕುರಿತು ನಗರದ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರು ಇಡೀ ರಾಜ್ಯದಲ್ಲಿ ಧರಣಿ ಮಾಡ್ತಾ ಇದಾರೆ. ಯಾವ ಕಾರಣಕ್ಕಾಗಿ ಧರಣಿ ಮಾಡ್ತಾ ಇದೀರಾ?
ನಿಮ್ಮ ಕಾಲದಲ್ಲೇ ದರ ಹೆಚ್ಚಳಕ್ಕೆ ಅರ್ಜಿ ಹಾಕಿದ್ದು ನೀವೇ. ಎರಡು ರಾಷ್ಟ್ರೀಯ ಪಕ್ಷಗಳ ಈ ನಡವಳಿಕೆ ಗಮನಿಸಿ ಅಂತಲೇ ರಾಜ್ಯದ ಜನಕ್ಕೆ ನಾನು ಮನವಿ ಮಾಡೋದು, ನೋಡಿ ತೀರ್ಮಾನ ಮಾಡಿ ಅಂತ. ಎಲ್ಲದಕ್ಕೂ ದೆಹಲಿಗೆ ಅರ್ಜಿ ಹಿಡಿದುಕೊಂಡು ದೆಹಲಿಗೆ ಹೋಗಬೇಕಿದೆ ಎಂದರು.

ಐದು ಗ್ಯಾರಂಟಿ ಗಳ ಬಗ್ಗೆ ನಾನು ಈಗಲೇ ಚರ್ಚೆ ಮಾಡಲ್ಲ. ನಾನು ಕಾಯುತ್ತೇನೆ, ಗ್ಯಾರಂಟಿ ಕೊಟ್ಟಿದ್ದು ತಪ್ಪಲ್ಲ ಆದರೆ, ಈಡೇರಿಸಬೇಕು ಎಂದ ಅವರು, ನಮ್ಮ ಪಕ್ಷದ ಸಂಘಟನೆ ಬಗ್ಗೆ ರಾಷ್ಟ್ರೀಯ ಅಧ್ಯಕ್ಷ ರಾದ ಎಚ್ ಡಿ ದೇವೇಗೌಡರು ತಿಳಿಸಿದ್ದಾರೆ. ಈಗಾಗಲೇ ನಾವು ನೀರಿನ ವಿಚಾರದಲ್ಲಿ ಜಲಧಾರೆ ಕಾರ್ಯಕ್ರಮ ದ ಮೂಲಕ ಜಾಗೃತಿ ಮೂಡಿಸಿದ್ದೇವೆ. ಭದ್ರಾ ಮೇಲ್ದಂಡೆ, ಮೇಕೆದಾಟು ಸೇರಿದಂತೆ ನೀರಾವರಿ ವಿಚಾರಗಳ ಬಗ್ಗೆ ಜನರ ಮುಂದೆ ಹೋಗಿದ್ದೆವು. ನೀರಾವರಿ ಗೆ ಸಂಬಂಧಿಸಿದಂತೆ ಈ ಸರ್ಕಾರ ಮುಂದಿನ ಐದು ವರ್ಷಗಳ ಕಾಲ ಯಾವ ರೀತಿ ಕೆಲಸ ಮಾಡುತ್ತೆ ನೋಡೋಣ ಎಂದರು.
ಮೇಕೆದಾಟು, ಮಹಾದಾಯಿ ಯೋಜನೆಗಳನ್ನು ಸಂಪೂರ್ಣ ಗೊಳಿಸುತ್ತಿವಿ ಅಂತ ಹೇಳಿದ್ದಾರೆ. ಇದಕ್ಕೆ ನಮ್ಮ ಬೆಂಬಲ ಇದೆ, ಬರೀ ಹೇಳಿಕೆಗೆ ಸೀಮಿತ ಆದರೆ ನಾವು ಮತ್ತೆ ಜನರನ್ನು ಜಾಗೃತ ಗೊಳಿಸುವ ಬಗ್ಗೆ ಹೋರಾಟ ಮಾಡಬೇಕಾಗುತ್ತದೆ. ನಿನ್ನೆ(ಸೋಮವಾರ) ಮುಖ್ಯಮಂತ್ರಿ ಗಳ ಹೇಳಿಕೆ ಗಮನಿಸಿದ್ದೇನೆ, ವಿರೋಧ ಪಕ್ಷಗಳು ಗ್ಯಾರಂಟಿ ಯೋಜನೆಗಳ ಬಗ್ಗೆ ಜನರನ್ನು ಎತ್ತಿಕಟ್ಟುತ್ತಿವೆ ಅಂತಾ ಹೇಳಿದ್ದಾರೆ. ಇದಕ್ಕೆ ವೇದಿಕೆ ಸಿದ್ದ ಮಾಡಿದ್ದೇ ನೀವು ಎಂದು ಹೇಳಿದ್ದಾರೆ.

ರಾಜ್ಯದ ಜನಕ್ಕೆ ಗ್ಯಾರಂಟಿ ಬಗ್ಗೆ ಸಹಿ ಮಾಡಿ ಕೊಟ್ಟಿದ್ದೀರಾ. ಈಗ ನಿಮಗೆ ಅದರ ಸಾಧಕ ಭಾದಕ ಅರ್ಥ ಆಯ್ತಾ? ಮೊದಲೇ ಈ ಬಗ್ಗೆ ಯೋಚನೆ ಮಾಡಿರಲಿಲ್ಲವಾ.? ನಿಮಗೆ ಪರಿಜ್ಞಾನ ಇರಲಿಲ್ಲವಾ
ಈಗ ಷರತ್ತು ಹಾಕ್ತಿದೀರಲ್ಲ.? ಈಗ ಬಾಡಿಗೆದಾರರ ಕಥೆ ಏನು.? ಎಲ್ಲರಿಗೂ ಉಚಿತ,ನಿಶ್ಚಿತ, ಖಚಿತ ಅಂದವರು ನೀವು ಎಂದು ಕಿಡಿಕಾರಿದ್ದಾರೆ.












Click it and Unblock the Notifications