ಗೌರಿಗದ್ದೆಯ ವಿನಯ್ ಗುರೂಜಿ ಭೇಟಿ ಮಾಡಿದ ಕುಮಾರಸ್ವಾಮಿ

Recommended Video

      ಎಚ್ ಡಿ ಕುಮಾರಸ್ವಾಮಿ ಬಗ್ಗೆ ವಿನಯ್ ಗುರೂಜಿ ನುಡಿದಿದ್ದ ಭವಿಷ್ಯ ಕೊನೆಗೂ ನಿಜವಾಯ್ತಾ?

      ಬೆಂಗಳೂರು, ಮೇ 23 : ನಿಯೋಜಿತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿವಿಧ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ಗೌರಿಗದ್ದೆಯ ಶ್ರೀ ವಿನಯ್ ಗುರೂಜಿ ಅವರನ್ನು ಎಚ್.ಡಿ.ದೇವೇಗೌಡ ಮತ್ತು ಕುಮಾರಸ್ವಾಮಿ ಭೇಡಿ ಮಾಡಿದ್ದಾರೆ.

      ಮಂಗಳವಾರ ರಾತ್ರಿ ಗೌರಿಗದ್ದೆ ಮಠದ ಶ್ರೀ ವಿನಯ್ ಗುರೂಜಿ ಅವರನ್ನು ಕುಮಾರಸ್ವಾಮಿ ಅವರು ಭೇಟಿ ಮಾಡಿದರು. ಪದ್ಮನಾಭನಗರದ ದೇವೇಗೌಡರ ನಿವಾಸಕ್ಕೆ ವಿನಯ್ ಗುರೂಜಿ ಭೇಟಿ ನೀಡಿದ್ದರು. ದೇವೇಗೌಡರೇ ಸ್ವತಃ ಕರೆ ಮಾಡಿ ವಿನಯ್ ಗುರೂಜಿ ಅವರನ್ನು ಮನೆಗೆ ಕರೆಸಿಕೊಂಡಿದ್ದರು.

      ಕಿರಿಯ ವಯಸ್ಸಿಗೆ ಅತ್ಯಂತ ಪ್ರಸಿದ್ಧಿಯನ್ನು ವಿನಯ್ ಗುರೂಜಿ ಪಡೆದಿದ್ದಾರೆ. ಅವರು ನೀಡಿದರು ಹೇಳಿಕೆಗಳು ಬಹುತೇಕ ಸತ್ಯವಾಗಿವೆ. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಾರೆ ಎಂದು ವಿನಯ್ ಗುರೂಜಿ ಅವರು 2 ವರ್ಷದ ಹಿಂದೆಯೇ ಹೇಳಿದ್ದು, ಶಲ್ಯವನ್ನು ಕಳಿಸಿಕೊಟ್ಟಿದ್ದರು.

      HD Kumaraswamy meets Vinay Guruji Koppa

      ವಿನಯ್ ಗುರೂಜಿ ಅವರಿಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಕ್ತರಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿರುವ ಗೌರಿಗದ್ದೆಗೆ ಹಲವಾರು ಭಕ್ತರು ಆಗಮಿಸುತ್ತಾರೆ. ವಿನಯ್ ಗೂರೂಜಿ ಅವರು ಹೇಳಿದ್ದ ಮಾತು ನಿಜವಾದ ಹಿನ್ನಲೆಯಲ್ಲಿ ಅವರನ್ನು ಕರೆದು ಆಶೀರ್ವಾದವನ್ನು ಪಡೆದುಕೊಳ್ಳಲಾಗಿದೆ.

      HD Kumaraswamy meets Vinay Guruji Koppa

      ದೇವೇಗೌಡರ ಮನಗೆ ಆಗಮಿಸಿದ್ದ ವಿನಯ್ ಗೂರೂಜಿ ಅವರನ್ನು ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ರೇವಣ್ಣ ಭೇಟಿ ಮಾಡಿ ಆಶೀರ್ವಾದ ಪಡೆದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+