ಬಿಜೆಪಿ ಕೊಟ್ಟಿರೋ ಆಫರ್ ಕೇಳಿದ್ರೆ ಶಾಕ್ ಆಗುತ್ತೆ : ಕುಮಾರಸ್ವಾಮಿ

Recommended Video

      ಬಿಜೆಪಿ ಕೊಟ್ಟಿರುವ ಆಫರ್ ಕೇಳಿ ಕುಮಾರಸ್ವಾಮಿಗೆ ಶಾಕ್ ಆಗುತ್ತಂತೆ | Oneindia Kannada

      ಬೆಂಗಳೂರು, ಫೆಬ್ರವರಿ 04 : 'ಅವರಿಗೆ ಎಲ್ಲಿಂದ ಅಷ್ಟು ದುಡ್ಡು ಬರುತ್ತದೆ. ಅವರು ಕೊಟ್ಟಿರುವ ಆಫರ್ ಕೇಳಿದರೆ ಶಾಕ್ ಆಗುತ್ತೆ' ಎಂದು ಆಪರೇಷನ್ ಕಮಲದ ಬಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

      ಸೋಮವಾರ ಮಧ್ಯಾಹ್ನ ಎಚ್.ಡಿ.ಕುಮಾರಸ್ವಾಮಿ ಅವರು ಎಚ್.ಡಿ.ದೇವೇಗೌಡರನ್ನು ಪದ್ಮನಾಭನಗರದ ನಿವಾಸದಲ್ಲಿ ಭೇಟಿ ಮಾಡಿ ಸುಮಾರು 1 ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು. ಫೆ.6ರಿಂದ ಬಜೆಟ್ ಅಧಿವೇಶನ ಆರಂಭವಾಗುತ್ತಿರುವುದರಿಂದ ಈ ಭೇಟಿ ಮಹತ್ವ ಪಡೆದಿತ್ತು.

      ದೇವೇಗೌಡರ ಭೇಟಿ ಬಳಿಕ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ ಅವರು, 'ನಾನು ಆಪರೇಷನ್ ಕಮಲದ ಬಗ್ಗೆ ಮಾತನಾಡೋಲ್ಲ. ಆದರೆ, ಪ್ರತಿನಿತ್ಯ, ಪ್ರತಿ ಗಂಟೆಯೂ ಸಹ ಆಪರೇಷನ್ ಕಮಲ ನಡೆಯುತ್ತಿದೆ' ಎಂದರು.

      HD Kumaraswamy meets Deve Gowda ahead of Budget session

      'ಯಾರು, ಯಾರನ್ನು ಸಂಪರ್ಕ ಮಾಡಿದ್ದಾರೆ. ಏನು ಏನು ಆಫರ್ ನೀಡಿದ್ದಾರೆ ಎಂಬುದು ಗೊತ್ತಿದೆ. ಅವರಿಗೆ ಅಷ್ಟೊಂದು ಹಣ ಎಲ್ಲಿಂದ ಬರುತ್ತದೆ?. ಅವರು ಕೊಟ್ಟಿರುವ ಆಫರ್ ಕೇಳಿದರೆ ಶಾಕ್ ಆಗುತ್ತೆ' ಎಂದು ಕುಮಾರಸ್ವಾಮಿ ಹೇಳಿದರು.

      'ನಾನು ಉತ್ತಮ ಬಜೆಟ್ ಮಂಡಿಸುತ್ತಿದ್ದೇನೆ. ನರೇಂದ್ರ ಮೋದಿ ತರಹ ಡೋಂಗಿ ಬಜೆಟ್ ಮಂಡಿಸೋಲ್ಲ. ಎಲ್ಲರ ಪರವಾದ ಬಜೆಟ್ ಮಂಡಿಸುತ್ತೇನೆ. ನನ್ನ ಕಡೆಯಿಂದ ಆಪರೇಷನ್ ಕಮಲಕ್ಕೆ ಯಾವುದೇ ಆಕ್ಷೇಪಣೆ ಇಲ್ಲ. ಅವರು ಸಂತೋಷವಾಗಿ ಮಾಡಿಕೊಳ್ಳಲಿ' ಎಂದು ಕುಟುಕಿದರು.

      ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, 'ಜನರಿಗೆ ಏನು ಬೇಕು ಎಂಬುದು ಗೊತ್ತಿಗೆ. 15 ದಿನದಿಂದ ಬಜೆಟ್‌ಗಾಗಿ ಕಷ್ಟಪಟ್ಟು ಕೆಲಸ ಮಾಡುತ್ತಿದ್ದೇನೆ. ಡೋಂಗಿ ಬಜೆಟ್ ಮಂಡಿಸುವುದಿಲ್ಲ' ಎಂದು ತಿರುಗೇಟು ನೀಡಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+