ಸಮ್ಮಿಶ್ರ ಸರ್ಕಾರದ ವೇಳೆ ಪ್ರತ್ಯೇಕ ಕಚೇರಿ ಬೇಕು ಎಂದು ಬೇಡಿಕೆ ಇಟ್ಟಿದ್ದು ಯಾರು?: ಸಿಎಂ ವಿರುದ್ದ ಹೆಚ್ಡಿಕೆ ಕಿಡಿ
ಬೆಂಗಳೂರು, ಜುಲೈ 20: ಸಮ್ಮಿಶ್ರ ಸರ್ಕಾರದ ಕಾಲದಲ್ಲಿ ಪ್ರತ್ಯೇಕ ಕಚೇರಿ ಬೇಕು ಎಂದು ಬೇಡಿಕೆ ಇಟ್ಟಿದ್ದು ಯಾರು? ನನ್ನ ಕೆಲಸಕ್ಕೆ ಅಧಿಕಾರಿಯನ್ನು ನಿಯೋಜನೆ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದು ಇದೆ ಸಿದ್ದರಾಮಯ್ಯನವರು ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, 2018ರಲ್ಲಿ ನನ್ನ ನೇತೃತ್ವದ ಮೈತ್ರಿ ಸರಕಾರ ಪ್ರಮಾಣ ವಚನ ಸ್ವೀಕರಿಸಿದ ವೇಳೆ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡಿಲ್ಲ. ನಾನು ಪ್ರಮಾಣವಚನ ಮಾಡಿದಾಗ ಯಾವ ಐಎಎಸ್ ಅಧಿಕಾರಿಯನ್ನು ಯಾರಿಗೂ ನಿಯೋಜನೆ ಮಾಡಿಲ್ಲ ಎಂದು ಹೇಳಿದರು.

ಯಾವುದೇ ಸಂದರ್ಭದಲ್ಲಿ ದಾನಿಶ್ ಅಲಿಯವರನ್ನು ಸರ್ಕಾರದ ಆತಿಥ್ಯ ಕೊಟ್ಟಿಲ್ಲ. ಅವರು ಬಂದಾಗ ಸರ್ಕಾರದ ಕಾರು ಕೊಟ್ಟಿಲ್ಲ, ನನ್ನ ಮೇಲೆ ಕಪ್ಪು ಚುಕ್ಕೆ ಇಡಲು ಹೊರಟಿದ್ದೀರಿ. ಯಾವುದೇ ಸಂದರ್ಭದಲ್ಲಿಯೂ ಅಧಿಕಾರಿಗಳಿಂದ ಯಾರಿಗೂ ಅಥಿತ್ಯ ಕೊಡಿಸಿಲ್ಲ. ಹೀಗೆ ಸುಳ್ಳು ಹೇಳುವುದಕ್ಕೆ ನಾಚಿಕೆ ಆಗಬೇಕು ನಾಚಿಕೆ, ಮಾನ,ಮಾರ್ಯಾದೆ ಇದರೆ ನನ್ನ ಕಾಲದಲ್ಲಿ ಏನಾಗಿದೆ ಸತ್ಯ ಹೊರಗಿಡಿ ಎಂದು ಸಿದ್ದರಾಮಯ್ಯ ಗೆ ಸವಾಲು ಹಾಕಿದ್ದಾರೆ.
ಈ ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯಪಾಲರ ಆದೇಶದ ಮೇರೆಗೆ ಮುಖ್ಯ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಎಲ್ಲಾ ವ್ಯವಸ್ಥೆಯನ್ನು ಮಾಡಿತ್ತು. ಆದರೆ, ಮೊನ್ನೆ ನಡೆದ ಸಭೆಗೆ ಸ್ವತಃ ಮುಖ್ಯಮಂತ್ರಿಗಳ ಅಧೀನದಲ್ಲಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯೇ ಅಧಿಕಾರಿಗಳಿಗೆ ಆದೇಶ ನೀಡಿದೆ. ತಪ್ಪು ತಪ್ಪೇ ಅಲ್ಲವೇ? ಇದನ್ನು ಒಪ್ಪಿಕೊಳ್ಳಲು ಪ್ರತಿಷ್ಠೆ ಏಕೆ? ಎಂದು ಪ್ರಶ್ನಿಸಿದ್ದಾರೆ.
ಸದನದಲ್ಲಿ ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವ ಔದಾರ್ಯತೆ ತೋರಬೇಕು. ಸ್ವೀಕರ್ ಏಕಪಕ್ಷೀಯವಾಗಿ ಕೆಲಸ ಮಾಡ್ತಾ ಇದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಸ್ಪೀಕರ್ ಅವರಿಗೆ ಸಿಎಂ ಅವರು ಸನ್ನೆ ಮೂಲಕ ಸೂಚನೆ ನೀಡಿದ್ದಾರೆ ಎಂದು ಸದನದ ಬಾವಿಯಲ್ಲಿ ಇದ್ದವರೇ ಹೇಳಿದರು ಎಂದು ಕುಮಾರಸ್ವಾಮಿ ತಿಳಿಸಿದರು.
ವಿಧಾನಸಭೆಯಲ್ಲಿ ನಡೆದ ಗೊಂದಲಕ್ಕೆ ರಾಜ್ಯ ಕಾಂಗ್ರೆಸ್ ಸರಕಾರವೇ ನೇರ ಕಾರಣ. ಸಭಾಧ್ಯಕ್ಷರ ಪೀಠವನ್ನು ದುರ್ಬಳಕೆ ಮಾಡಿಕೊಂಡಿದೆ. ಎರಡು ನಿಮಿಷದಲ್ಲಿ ಬಗೆಹರಿಸುವ ವಿಷಯವನ್ನು ಇಷ್ಟು ದೂರ ಎಳೆದು ತರಲಾಗಿದೆ ಎಂದು ಅವರು ಹೇಳಿದರು. ಸರಕಾರ ಗಂಭೀರ ಲೋಪ ಎಸಗಿದೆ. ಆಗಿರುವ ತಪ್ಪನ್ನು ಒಪ್ಪಿಕೊಳ್ಳುವುದು ಬಿಟ್ಟಿ ಭಂಡತನ ಪ್ರದರ್ಶನ ಮಾಡುತ್ತಿದೆ ಎಂದು ದೂರಿದರು.
ವಿಧಾನಸಭೆಯಲ್ಲಿ ನಡೆದಿರುವ ಬೆಳವಣಿಗೆಗೆ ಕಾಂಗ್ರೆಸ್ ಪಕ್ಷವೇ ನೇರ ಕಾರಣ. ಘಟಬಂಧನ್ ಸಭೆಗೆ ಬಂದಿದ್ದ ಹೊರರಾಜ್ಯದ ಗಣ್ಯರಿಗೆ ಉಪಚಾರ ಮಾಡಲು ಐಎಎಸ್ ಅಧಿಕಾರಿಗಳನ್ನು ಬಳಕೆ ಮಾಡಿಕೊಂಡಿದ್ದು ತಪ್ಪು. ಈ ಸದನದಲ್ಲಿ ಪ್ರಸ್ತಾಪ ಮಾಡಿದ ಪ್ರತಿಪಕ್ಷಗಳ ಮನವಿಯ ಬಗ್ಗೆ ಸರಕಾರ ಭಂಡತನ ತೋರಿದೆ. ಸ್ವೀಕರ್ ಕಚೇರಿಯಲ್ಲಿ ಸಂಧಾನ ಸಭೆ ನಡೆಸಿದ ವೇಳೆಯಲ್ಲೂ ಕಾಂಗ್ರೆಸ್ ನಾಯಕರು, ನಾವೇನೂ ಎನು ತಪ್ಪು ಮಾಡಿಲ್ಲವೆಂದು ಪ್ರತಿಷ್ಠೆ ತೋರಿದರು.
ಎರಡು ನಿಮಿಷಗಳ ಬಗೆಹರಿಸಬಹುದಾಗಿದ್ದ ವಿಷಯವನ್ನು ಇಷ್ಟು ದೂರ ಎಳೆದು ತಂದಿದ್ದಾರೆ. ಆಗಿದ್ದು ಆಯಿತು, ಮುಂದೆ ಈ ರೀತಿ ಆಗಲ್ಲ ಅಂತ ಹೇಳಿದ್ದರೆ ಸಾಕಿತ್ತು. ವಿಷಾದವನ್ನೂ ವ್ಯಕ್ತಪಡಿಸುವ ಅವಶ್ಯಕತೆಯೂ ಇರಲಿಲ್ಲ. ಆದರೆ, ಸ್ವೀಕರ್ ಪ್ರತಿಪಕ್ಷ ಶಾಸಕರನ್ನು ದೇಶದೋಹ್ರಿಗಳು ಎಂದರು. ಸಿಎಂ ಹೇಳಿದರೂ ಅಂತ ಶಾಸಕರನ್ನು ಕೊನೆಪಕ್ಷ ಊಟಕ್ಕೆ ಬಿಡದೆ ಎದ್ದು ಹೋದರು. ಇಂಥ ನಡವಳಿಕೆಯನ್ನು ಹಿಂದೆ ನಾನೆಂದೂ ನೋಡಿರಲಿಲ್ಲ ಎಂದು ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದರು.












Click it and Unblock the Notifications