ರೇವಣ್ಣ ಮನೆಯವರನ್ನ ಅಭ್ಯರ್ಥಿ ಮಾಡಲ್ಲ ಎಂದು ಕುಮಾರಸ್ವಾಮಿ ಶಪಥ: ಪ್ರೀತಂ ಗೌಡ
ಕುಮಾರಣ್ಣ ಬಿಜೆಪಿಗೆ ಬಂದರೆ ಸ್ವಾಗತ, ಯಾರು ಬೇಡ ಅಂತಾರೆ? ಕುಮಾರಣ್ಣನನ್ನು ನಾನು ಭಾರತೀಯ ಜನತಾ ಪಾರ್ಟಿಗೆ ಕರೆಯುತ್ತಿದ್ದೇನೆ ಎಂದು ಪ್ರೀತಂ ಗೌಡ ಹೇಳಿದರು.
ಹಾಸನ,ಮಾರ್ಚ್4: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹಾಸನ ವಿಧಾನಸಭಾ ಕ್ಷೇತ್ರ ಸಾಕಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಒಂದು ಕಡೆ ದಳಪತಿಗಳಿಗೆ ಟಿಕೆಟ್ ವಿಚಾರವೇ ದೊಡ್ಡ ತಲೆನೋವಾಗಿತ್ತು. ಇತ್ತ ಬಿಜೆಪಿ ಹಾಲಿ ಶಾಸಕ ಪ್ರೀತಂ ಗೌಡ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ವಿರುದ್ದ ಕಿಡಿಕಾರಿದ್ದಾರೆ.
ಹೌದು, ಶನಿವಾರ ಹಾಸನದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಯಾವುದೇ ಕಾರಣಕ್ಕೂ ಹಾಸನದಲ್ಲಿ ರೇವಣ್ಣ ಅವರ ಮನೆಯವರಿಗೆ ಟಿಕೆಟ್ ಕೊಡಲ್ಲ ಎಂದು ಶಪಥ ಮಾಡಿದ್ದಾರೆ ಹೊರೆತು ನನ್ನನ್ನು ಚುನಾವಣೆಯಲ್ಲಿ ಸೋಲಿಸುತ್ತೇನೆ ಎಂದು ಶಪಥ ಮಾಡಿಲ್ಲ ಎಂದು ಹೇಳಿದ್ದಾರೆ.

ಕುಮಾರಸ್ವಾಮಿ ಅವರು ಸಾಮಾನ್ಯ ಕಾರ್ಯಕರ್ತನನ್ನು ಅಭ್ಯರ್ಥಿ ಮಾಡುತ್ತೇನೆ ಎಂದು ಹೇಳಿದ್ದಾರೆ. ಸಾಮಾನ್ಯ ಕಾರ್ಯಕರ್ತನನ್ನು ಶಾಸಕನಾಗಿ ಮಾಡುತ್ತೇನೆ ಎಂದು ಅವರು ಹೇಳಿದ್ದಾರಾ? ಅವರು ಹಾಗೆ ಹೇಳಲ್ಲ, ಪಾಪ ಅವರು ನನ್ನ ಹಿತೈಷಿ ಎಂದು ಪ್ರೀತಂ ಗೌಡ ತಿರುಗೇಟು ನೀಡಿದ್ದಾರೆ.
ನಿಮ್ಮ ಕುಟುಂಬದಲ್ಲಿ ಆಗುತ್ತಿರುವಂತಹ ಒತ್ತಡವನ್ನು ನನ್ನಿಂದ ನೋಡಲು ಆಗುತ್ತಿಲ್ಲ. ಆ ಒತ್ತಡವನ್ನು ಕುಮಾರಸ್ವಾಮಿ ಅವರಿಂದ ಸಹಿಸಲು ಆಗುತ್ತಿಲ್ಲ ಎಂದರೆ ದಯಮಾಡಿ ಭಾರತೀಯ ಜನತಾ ಪಾರ್ಟಿಗೆ ಬಂದು ಸೇರಿಕೊಳ್ಳಿ , ಕುಮಾರಣ್ಣ ಬಿಜೆಪಿಗೆ ಬಂದರೆ ಸ್ವಾಗತ, ಯಾರು ಬೇಡ ಅಂತಾರೆ? ಕುಮಾರಣ್ಣನನ್ನು ನಾನು ಭಾರತೀಯ ಜನತಾ ಪಾರ್ಟಿಗೆ ಕರೆಯುತ್ತಿದ್ದೇನೆ ಎಂದು ಟಾಂಗ್ ನೀಡಿದ್ದಾರೆ.

50 ಸಾವಿರ ಲೀಡ್‌ನಿಂದ ಗೆಲ್ತೀನಿ ಅಂತ ಚಾಲೆಂಜ್ ಹಾಕ್ತಾನೆ ಎಂಬ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ವಿಚಾರವಾಗಿ ಮಾತನಾಡಿದ ಅವರು ಕುಮಾರಣ್ಣ ನನ್ನ ಹಿತೈಷಿ, ಯಾವಾಗಲೂ ನನ್ನ ಒಳಿತನ್ನೇ ಅವರು ಬಯಸುತ್ತಾರೆ. ಅವರು ಏನು ಹೇಳಿದರೂ ಆಶೀರ್ವಾದ ಅನ್ಕೊತೀನಿ ಎಂದು ಹೇಳಿದರು.












Click it and Unblock the Notifications