ವಾಹನ ಸವಾರರಿಗೆ ತಟ್ಟಿದ ಸಾಲಮನ್ನಾ ಬಿಸಿ, ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ
ಬೆಂಗಳೂರು, ಜುಲೈ 5: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಂದು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರದ 2018-19ನೇ ಸಾಲಿನ ಮುಂಗಡ ಪತ್ರವನ್ನು ವಿಧಾನಸಭೆಯಲ್ಲಿ ಮಂಡಿಸಿದರು.
ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಕುಮಾರಸ್ವಾಮಿಯವರು ರೈತರ ಸಾಲಮನ್ನಾಕ್ಕೆ ಕ್ರಮ ಕೈಗೊಂಡಿದ್ದು ಸರಕಾರದ ಬೊಕ್ಕಸ ತುಂಬಿಸಲು ಪೆಟ್ರೋಲ್, ಡೀಸೆಲ್, ವಿದ್ಯುತ್, ಮದ್ಯದ ಮೇಲಿನ ಸೆಸ್ ಹೆಚ್ಚಳ ಮಾಡಿದ್ದಾರೆ.
ಮುಖ್ಯವಾಗಿ ವಾಹನ ಸವಾರರ ಜೇಬಿಗೆ ಸಾಲಮನ್ನಾ ದುಬಾರಿಯಾಗಿ ಪರಿಣಮಿಸಿದ್ದು, ಬಜೆಟ್ ನಲ್ಲಿ ಪೆಟ್ರೋಲ್ ಮೇಲಿನ ಸೆಸ್ ಶೇಕಡಾ 30 ರಿಂದ 32ಕ್ಕೆ ಏರಿಕೆ ಮಾಡಲಾಗಿದೆ. ಇದರಿಂದ ಕರ್ನಾಟಕದಲ್ಲಿ ಪೆಟ್ರೋಲ್ ದರ 1.14 ರೂಪಾಯಿ ಹೆಚ್ಚಳವಾಗಲಿದೆ.

ಇನ್ನು ಡೀಸೆಲ್ ಮೇಲಿನ ಸೆಸ್ ನ್ನು ಕುಮಾರಸ್ವಾಮಿಯವರು ಶೇಕಡಾ 19 ರಿಂದ 21ಕ್ಕೆ ಏರಿಕೆ ಮಾಡಿದ್ದು, ಕರ್ನಾಟಕದಲ್ಲಿ ಡೀಸೆಲ್ ಬೆಲೆ 1.12 ರೂಪಾಯಿಯಷ್ಟು ಹೆಚ್ಚಳವಾಗ












Click it and Unblock the Notifications