ಎಚ್ ಡಿ ಕುಮಾರಸ್ವಾಮಿ ಆಲ್ ಮೋಸ್ಟ್ ವಿಪಕ್ಷ ನಾಯಕ ಆಗಿಬಿಟ್ಟಿದ್ದಾರೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು, ಅಕ್ಟೋಬರ್ 14: ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆಲ್ ಮೋಸ್ಟ್ ವಿಪಕ್ಷ ನಾಯಕ ಆಗಿಬಿಟ್ಟಿದ್ದಾರೆ, ಅದಕ್ಕೆ ಮಾತಾಡ್ತಿದ್ದಾರೆ. ಘಟಾನುಘಟಿ ಲೀಡರ್ ಗಳು ಮಾತಾಡಬೇಕಾದ್ರೆ ತೂಕ ಇರಬೇಕು. ಹುಡುಗರ ರೀತಿ ಮಾತಾಡಬಾರದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಈ ಕುರಿತು ಬೆಂಗಳೂರಿನಲ್ಲಿ ಶನಿವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಎಚ್ ಡಿ ಕುಮಾರಸ್ವಾಮಿ ಬಿಜೆಪಿ ಜೊತೆ ವಿಲೀನ ಆಗಿಬಿಟ್ಟಿದ್ದಾರೆ. ಕುಮಾರಸ್ವಾಮಿ ಅವರು ನೇರವಾಗಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರನ್ನು ಭೇಟಿ ಮಾಡ್ತಾರೆ.ಡೈರಿ, ಪೆನ್ ಡ್ರೈವ್ ಎಲ್ಲಾ ಕೊಡಿ ಅವರಿಗೆ ಎಂದು ತಿರುಗೇಟು ನೀಡಿದರು.

ವಿಪಕ್ಷದಲ್ಲಿರೋರನ್ನು ಟಾರ್ಗೆಟ್ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಗುಜರಾತ್ ಸೇರಿ ಎಲ್ಲಾ ಕಡೆ ವಿಪಕ್ಷಗಳ ಮೇಲೆ ರೇಡ್ ಮಾಡ್ತಿದ್ದಾರೆ. ಎಷ್ಟು ಜನ ಬಿಜೆಪಿಯವರ ಮೇಲೆ ರೇಡ್ ಆಗಿದೆ? ಈ ಬಗ್ಗೆ ಲೆಕ್ಕ ತಗೆದುಕೊಳ್ಳಿ. ಯಾಕೆ ಅದಾನಿ ಮೇಲೆ ರೇಡ್ ಅಗ್ತಿಲ್ಲ? ಐಟಿ, ಇಡಿ ರೇಡ್ ಗೆಲ್ಲಾ ನಾವು ಬಗ್ಗೋರಲ್ಲ, ಜಗ್ಗೋರಲ್ಲ ಎಂದು ಹೇಳಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಇದಕ್ಕೂ ಅಪಾಯಿಂಟ್ಮೆಂಟ್ ಕೊಡಲ್ವಾ?ವಿಪಕ್ಷ ನಾಯಕನ ಆಯ್ಕೆಗಂತೂ ಅಪಾಯಿಂಟ್ಮೆಂಟ್ ಕೊಡಲ್ಲ. ಬಿಜೆಪಿ ಮನೆ ಒಂದು ಬಾಗಿಲು ನೂರಾಗಿದೆ. ಯಾರು ಲೀಡರ್ ಅಂತಾ ಗೊತ್ತಾಗ್ತಾನೇ ಇಲ್ಲ ಅವರಿಗೆ. ಅಲ್ಲಿ ಮೈತ್ರಿ ಆಗುತ್ತೆ, ಒಬ್ಬ ಲೀಡರ್ ಆದ್ರೂ ಇದ್ರೇನ್ರೀ? ಎಂದು ಪ್ರಶ್ನಿಸಿದ ಅವರು, ಜನತಾದಳ ಜನತೆ ಜೊತೆಯೂ ಇಲ್ಲ, ದಳವಾಗಿಯೂ ಉಳಿದಿಲ್ಲ. ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳೋದನ್ನ ಬಿಟ್ರೆ, ಬೇರೆ ಏನಾದ್ರೂ ಬಿಜೆಪಿಯವರಿಗೆ ಬರುತ್ತಾ? ಎಂದು ವಾಗ್ದಾಳಿ ನಡೆಸಿದ್ದಾರೆ.

ಯಾವುದಾದ್ರೂ ಹತ್ತು ಯೋಜನೆಗಳನ್ನ ಹೇಳಲಿ ನೋಡೋಣ. ಸದಾನಂದಗೌಡರು ಹೇಳಿದ್ದಾರೆ, ಕೇಂದ್ರ ಸಚಿವರು ಆಗಿದ್ರು. ರಾಜ್ಯ ನಾಯಕರಿಗೆ ಶಿಪ್ ಗೆ ಬೆನ್ನೆಲುಬೇ ಇಲ್ಲ. ಕಮಿಷನ್, ಕಲೆಕ್ಷನ್ ಗೆಲ್ಲಾ ದಾಖಲೆ ಕೊಡಿ ಸರ್. ನಾವು ದಾಖಲೆ ಇಟ್ಟೇ 40% ಕಮಿಷನ್ ಆರೋಪ ಮಾಡಿದ್ದು.ಪೆನ್ ಡ್ರೈವ್ ಎಲ್ಲೋಯ್ತು ಸರ್ ? ಎಂದು ಪ್ರಶ್ನಿಸಿದರು.
ಇನ್ನೂ ಜನವರಿ ಒಳಗೆ ಕಾಂಗ್ರೆಸ್ ಸರ್ಕಾರ ಬೀಳುತ್ತೆ, ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಸಿಎಂ ಆಗುತ್ತಾರೆ ಎನ್ನುವ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಅವರ ಸರ್ಕಾರ ಉಳಿಸಿಕೊಳ್ಳೋದಕ್ಕೇ ಆಗಲಿಲ್ಲ. ನಮ್ಮ ಸರ್ಕಾರ ಎಲ್ಲಿ ಬೀಳಿಸ್ತಾರೆ. ಅವರಿಗೊಬ್ಬರಿಗೇ ಬರುತ್ತಾ ರಾಜಕೀಯ ಮಾಡೋಕೆ. ಸರ್ಕಾರ ಬೀಳಿಸಿ ನೋಡಲಿ. ಆಪರೇಶನ್ ಹಸ್ತ ನಮಗೆ ಅವಶ್ಯಕತೆಯೇ ಇಲ್ಲ. ಅವ್ರೇ ಬಿಟ್ಟು ಬರ್ತಾ ಇದ್ದಾರೆ. ಸರ್ಕಾರ ಬೀಳಿಸಲು ಸರ್ಕಸ್ ಮಾಡ್ತಿರಬಹುದು. ತೆಲಂಗಾಣದಲ್ಲಿ ಬಿಜೆಪಿ ಅಡ್ರೆಸ್ ಇಲ್ಲ ಎಂದು ಕಿಡಿಕಾರಿದರು.
ಇನ್ನೂ ಬೆಂಗಳೂರಿನಲ್ಲಿ ಐಟಿ ದಾಳಿ ವಿಚಾರವಾಗಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರ ಆರೋಪಕ್ಕೆ ತಿರುಗೇಟು ನೀಡಿದ ಪ್ರಿಯಾಂಕ್ ಖರ್ಗೆ, ಗುತ್ತಿಗೆದಾರರಿಂದ ಕಲೆಕ್ಷನ್ ಮಾಡಿದ್ದಾರೆ ಅನ್ನೋದು ಹಾಸ್ಯಾಸ್ಪದ ಹೇಳಿಕೆ. ಐಟಿ ಇಲಾಖೆಯಲ್ಲಿ ಸೆಲೆಕ್ಟಿವ್ ರೇಡ್ ಯಾಕಾಗ್ತಿದೆ? ಐಟಿ, ಇಡಿ ಎಲ್ಲಾ ಬಿಜೆಪಿಯವರ ಕೈಯಲ್ಲೇ ಇದೆ, ತನಿಖೆ ಮಾಡಲಿ ಎಂದು ಸವಾಲು ಹಾಕಿದರು.
ಚೈತ್ರಾ ಕುಂದಾಪುರ ಕೇಸ್ ನಲ್ಲಿ ಐಟಿ ರೇಡ್ ಯಾಕ್ ಆಗಿಲ್ಲ? ಹಣ ವರ್ಗಾವಣೆ ನಡೆದಿತ್ತಲ್ಲಾ ರೇಡ್ ಯಾಕ್ ಆಗ್ಲಿಲ್ಲ. ರಾಜಕೀಯ ಪ್ರೇರಿತ ರೇಡ್ ಮಾಡ್ತಿದ್ದಾರೆ. ತನಿಖೆ ಆಗಲಿ, ಉಪ್ಪು ತಿಂದೋರು ನೀರು ಕುಡಿಯಲೇಬೇಕು. ಕಲೆಕ್ಷನ್ ಮಾಡಲಾಗಿದೆ ಎಂದು ಆರೋಪ ಮಾಡುವ ಬಿಜೆಪಿಯರಿಗೆ ಮೇಲೆ ಬಾಸ್ ಗಳಿದ್ದಾರಲ್ಲ, ಹೋಗಿ ಸಾಕ್ಷಿ ಕೊಡಲಿ ಎಂದು ತಿರುಗೇಟು ನೀಡಿದರು.












Click it and Unblock the Notifications