Bajrang Dal News: ಬಜರಂಗದಳ ಬ್ಯಾನ್‌; ಕೈ ಕಮಲ ನಡುವೆ ಗುದ್ದಾಟ: ಎಚ್‌ ಡಿ ಕುಮಾರಸ್ವಾಮಿ ಹೇಳಿದ್ದೇನು?

ಕೊಪ್ಪಳ, ಮೇ 3: ರಾಜ್ಯ ರಾಜಕಾರಣದ ಚುನಾವಣಾ ಭರಾಟೆಯಲ್ಲಿ ಭರಪೂರ ಪ್ರಣಾಳಿಕೆಯಿಂದ ಮತದಾರರ ಓಲೈಕೆಗೆ ಮೂರು ರಾಜಕೀಯ ಪಕ್ಷಗಳು ಮುಂದಾಗಿದೆ. ಕಾಂಗ್ರೆಸ್‌ ಪ್ರಣಾಳಿಕೆ ಮಂಗಳವಾರ ಬಿಡುಗಡೆಯಾಗಿದ್ದು, ಬಜರಂಗದಳ ಬ್ಯಾನ್ ಭರವಸೆ ಸಾಕಷ್ಟು ಸದ್ದು ಮಾಡುತ್ತಿದೆ.

ಕಾಂಗ್ರೆಸ್‌ ಚುನಾವಣಾ ಪ್ರಣಾಳಿಕೆಯಲ್ಲಿ ಬಜರಂಗದಳ ಹಾಗೂ ಪಿ ಎಫ್‌ ಐ ಬ್ಯಾನ್‌ ಮಾಡುವುದಾಗಿ ಭರವಸೆಯನ್ನ ನೀಡಿದ್ದು, ಬಿಜೆಪಿ ಹಾಗೂ ಹಿಂದೂ ನಾಯಕರು ಕಾಂಗ್ರೆಸ್‌ ವಿರುದ್ದ ಕಿಡಿಕಾರಿದ್ದು, ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ದ ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

HD Kumaraswamy

ಈ ಕುರಿತು ಕೊಪ್ಪಳದಲ್ಲಿ ಜೆಡಿಎಸ್‌ ನಾಯಕ ಎಚ್‌ ಡಿ ಕುಮಾರಸ್ವಾಮಿ ಮಾತನಾಡಿ, ರಾಷ್ಟ್ರೀಯ ಪಕ್ಷಗಳಿಗೆ ಹೇಳಿಕೊಳ್ಳುವುದಕ್ಕೆ ಪರ್ಯಾಯ ಯೋಜನೆ ಇಲ್ಲ. ಹೀಗಾಗಿ ವಿಷಕನ್ಯೆ, ವಿಷ ಸರ್ಪ ಎಂದು ಹೇಳುತ್ತಾರೆ. ಜೆಡಿಎಸ್ ಪಕ್ಷಕ್ಕೆ ಅದೃಷ್ಠಗಿಂತ ಶ್ರಮವಿದೆ.ಹೀಗಾಗಿ ಅಧಿಕಾರಕ್ಕೆ ಬರುತ್ತೇವೆ ಎಂಬ ವಿಶ್ವಾಸವಿದೆ ಎಂದರು.

ಕಾಂಗ್ರೆಸ್ ಬಜರಂಗ ದಳ ಹಾಗೂ ಪಿಎಫ್ ಐ ಬ್ಯಾನ್‌ ಭರವಸೆ ಕುರಿತು ಮಾತನಾಡಿ, ಜನಪರ ಕೆಲಸಗಳ ಹೇಳಿಕೊಳ್ಳುವುದಕ್ಕೆ ಏನು ಇಲ್ಲ. ಹೀಗಾಗಿ ಹೇಳುತ್ತಿದ್ದಾರೆ. ಈ ಬಾರಿ ರಾಜಕೀಯ ಪಕ್ಷಗಳಲ್ಲಿ ಫ್ರೀ ಯೋಜನೆಗಳ ಘೋಷಣೆ ಮಾಡುತ್ತಿದ್ದಾರೆ.ಈ ಬಗ್ಗೆ ರಾಜಕೀಯ ಪಕ್ಷಗಳಲ್ಲಿ ಕಾಂಪಿಟೇಷನ್ ಇದೆ. ಏನಾಗುತ್ತೊ ನೋಡೋಣ ಎಂದು ಹೇಳಿದರು.

ಇನ್ನೂ ಚುನಾವಣಾ ಪೂರ್ವ ಸಮೀಕ್ಷೆ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು,ನಾನು ಸಮೀಕ್ಷೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ, ಎರಡು ರಾಷ್ಟ್ರೀಯ ಪಕ್ಷಗಳು ಸಮೀಕ್ಷೆ ನಡೆಸುವ ಖಾಸಗಿ ಸಂಸ್ಥೆಗಳಿಗೆ ಹೆಚ್ಚಿನ ಹಣವನ್ನು ನೀಡಿ, ಅವರಿಗೆ ಬೇಕಾದ ಹಾಗೆ ಸಮೀಕ್ಷೆ ಮಾಡಿಸಿ, ನಂತರ ಖಾಸಗಿ ಸುದ್ದಿವಾಹಿನಿಗಳಿಗೆ ಹಣ ಕೊಟ್ಟು ಪ್ರಸಾರ ಮಾಡುತ್ತಾರೆ, ಇದು ಹಣ ನೀಡಿ ಸಮೀಕ್ಷೆ ಮಾಡಿರಿಸುವ ಸಮೀಕ್ಷೆ, ಇದು ವಾಸ್ತವಾಂಶ ಅಲ್ಲಿ ಬರುವಂತಹ ಸಮೀಕ್ಷೆಗೂ ನೆಲದ ವಾಸ್ತವಕ್ಕೂ ಬಹಳ ವ್ಯತ್ಯಾಸ ಇದೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+