HD Kumara Swamy: ಕರ್ನಾಟಕದಲ್ಲಿ, ಕನ್ನಡಿಗರೇ 'ಸಾರ್ವಭೌಮ' ಪೋಸ್ಟ್ ಡಿಲೀಟ್: ರೀಪೋಸ್ಟ್ ಮಾಡಿದ್ಯಾಕೆ ಎಚ್‌ಡಿಕೆ ?!
HD Kumara Swamy: ಕರ್ನಾಟಕದಲ್ಲಿ, ಕನ್ನಡಿಗರೇ 'ಸಾರ್ವಭೌಮ' ಹಾಗೂ ಹಿಂದಿ ಹೇರಿಕೆಯನ್ನು ವಿರೋಧಿಸಿ ಪೋಸ್ಟ್ ಮಾಡಿದ್ದ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಅದನ್ನು ಆ ಮೇಲೆ ಡಿಲೀಟ್ ಮಾಡಿರುವುದು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್‌ಗೆ ಕಾರಣವಾಗಿದೆ. ಎಚ್.ಡಿ ಕುಮಾರಸ್ವಾಮಿ ಅವರು ಹಳೆಯ ಪೋಸ್ಟ್ ಡಿಲೀಟ್ ಮಾಡಿ ಹೊಸದಾಗಿ ಪೋಸ್ಟ್ ಮಾಡಿದ್ದಾರೆ ಎನ್ನಲಾಗಿರುವ ಸ್ಕ್ರೀನ್ ಶಾಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇಷ್ಟಕ್ಕೂ ಎಚ್.ಡಿ ಕುಮಾರಸ್ವಾಮಿ ಅವರು ಏನು ಪೋಸ್ಟ್ ಮಾಡಿದ್ದರು ಎನ್ನುವ ವಿವರ ಇಲ್ಲಿದೆ.
ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರ ಮೊದಲ ಪೋಸ್ಟ್ ಈ ರೀತಿ ಇದೆ. ಚಂದಾಪುರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ
ಅಧಿಕಾರಿಯೊಬ್ಬರು ಕನ್ನಡ ಮಾತನಾಡಲು ನಿರಾಕರಿಸಿದ್ದನ್ನು ನಾನು ಬಲವಾಗಿ ಖಂಡಿಸುತ್ತೇನೆ. ಕನ್ನಡ ಭಾಷೆಗೆ ಗೌರವ ನೀಡುವುದು ಕನ್ನಡಿಗರಿಗೆ ಗೌರವ ನೀಡುವುದಕ್ಕೆ ಸಮಾನವಾಗಿದೆ. ಈ ದುರ್ವತ್ರನೆಗೆ ಕಾರಣರಾದ ಅಧಿಕಾರಿಯನ್ನು ವರ್ಗಾಯಿಸಿದ ಎಸ್‌ಬಿಐನ ಕ್ರಮವನ್ನು ನಾವು ಸ್ವಾಗತಿಸುತ್ತೇವೆ. ಇಂತಹ ಘಟನೆ ಮತ್ತೆ ಮರುಕಳಿಸಬಾರದು.

ಬ್ಯಾಂಕ್ ನೌಕರರು ತಾವು ಸೇವೆ ಸಲ್ಲಿಸುವ ಕಚೇರಿಯಲ್ಲಿ ಭಾಷೆ ಮತ್ತು ಸಂಸ್ಕೃತಿಯನ್ನು ಗೌರವಿಸುವುದು ಬಹಳ ಮುಖ್ಯ. ಸ್ಥಳೀಯ ಭಾಷೆಯನ್ನು ಅಗೌರವಿಸುವುದು ಸಾರ್ವಜನಿಕ ಸೇವೆಯ ಮನೋಭಾವವನ್ನು ಉಲ್ಲಂಘಿಸುತ್ತದೆ. ಬ್ಯಾಂಕ್ ನೌಕರರು ತಾವು ಸೇವೆ ಸಲ್ಲಿಸುವ ಕಚೇರಿಯಲ್ಲಿ ಭಾಷೆ ಮತ್ತು ಸಂಸ್ಕೃತಿಯನ್ನು ಗೌರವಿಸುವುದು ಬಹಳ ಮುಖ್ಯ. ಸ್ಥಳೀಯ ಭಾಷೆಯನ್ನು ಅಗೌರವಿಸುವುದು ಸಾರ್ವಜನಿಕ ಸೇವೆಯ ಮನೋಭಾವವನ್ನು ಉಲ್ಲಂಘಿಸುತ್ತದೆ.
ಸಾರ್ವಜನಿಕರೊಂದಿಗೆ ವ್ಯವಹರಿಸುವ ನೌಕರರು ಪ್ರಜಾಪ್ರಭುತ್ವದಲ್ಲಿ, ಗ್ರಾಹಕರು ಸರ್ವೋಚ್ಚರು ಮತ್ತು ಸ್ಥಳೀಯ ಭಾಷೆಯಲ್ಲಿ ಸಂವಹನ ನಡೆಸುವುದು ಕೇವಲ ಸೌಜನ್ಯವಲ್ಲ - ಅದು ಒಂದು ಜವಾಬ್ದಾರಿ ಎಂಬುದನ್ನು ನೆನಪಿನಲ್ಲಿಡಬೇಕು. ಇಂತಹ ಘಟನೆಗಳನ್ನು ಹಗುರವಾಗಿ ಪರಿಗಣಿಸಬಾರದು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್ ಗಳು ಭಾಷಾ ಗೌರವವನ್ನು ಎತ್ತಿಹಿಡಿಯಲು ಮತ್ತು ಅಂತಹ ನಡವಳಿಕೆ ಪುನರಾವರ್ತನೆಯಾಗದಂತೆ ತಮ್ಮ ಸಿಬ್ಬಂದಿಗೆ ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಬೇಕೆಂದು ನಾನು ಒತ್ತಾಯಿಸುತ್ತೇನೆ. ಕರ್ನಾಟಕದಲ್ಲಿ, ಕನ್ನಡಿಗರೇ 'ಸಾರ್ವಭೌಮ'.. ಎಂದು ಪೋಸ್ಟ್ ಮಾಡಿದ್ದರು. ಆದರೆ, ಕೆಲವೇ ಕ್ಷಣಗಳಲ್ಲಿ ಈ ಪೋಸ್ಟ್ ಕಣ್ಮರೆಯಾಗಿದೆ. ಇದಾದ ಮೇಲೆ ಅವರು ಮತ್ತೊಂದು ಪೋಸ್ಟ್ ಮಾಡಿದ್ದಾರೆ ಎನ್ನಲಾಗಿದೆ.
ಎಚ್.ಡಿ ಕುಮಾರಸ್ವಾಮಿ ಹೊಸ ಪೋಸ್ಟ್‌ನಲ್ಲಿ ಏನಿದೆ ?
ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆ. ಕನ್ನಡವೇ ಸಾರ್ವಭೌಮ ಭಾಷೆ. "ಕನ್ನಡದಲ್ಲಿ ಸೇವೆ" ಕೇಳುವುದು ಗ್ರಾಹಕರ ಹಕ್ಕು. ಸರಕಾರಿ ನೌಕರರು ಅತ್ಯಂತ ಸೂಕ್ಷ್ಮ, ಸಂಯಮದಿಂದ ವರ್ತಿಸಬೇಕು. ಬ್ಯಾಂಕುಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಕೂಡ ಹೊರತಲ್ಲ. ಕನ್ನಡ ಭಾಷೆ ವಿಚಾರಕ್ಕೆ ದುರ್ವರ್ತನೆ ತೋರಿದ ವ್ಯವಸ್ಥಾಪಕಿ ವಿರುದ್ಧ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆಡಳಿತ ಕ್ರಮ ಕೈಗೊಂಡಿರುವುದು ಶ್ಲಾಘನೀಯ. ಭಾಷೆಗೆ ಅಪಮಾನ ಮಾಡುವುದು ಅಕ್ಷಮ್ಯ.
ಒಕ್ಕೂಟ ವ್ಯವಸ್ಥೆಯಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು. ಸಾರ್ವಜನಿಕರ ಜತೆ ಸಜ್ಜನಿಕೆಯಿಂದ ವರ್ತಿಸಬೇಕು. ಈ ನಿಟ್ಟಿನಲ್ಲಿ ಬ್ಯಾಂಕುಗಳು ದೃಢ ನಿಯಮಗಳನ್ನು ರೂಪಿಸಬೇಕು ಎಂದು ಹೇಳಿದ್ದಾರೆ. ಈ ಎರಡೂ ಪೋಸ್ಟ್‌ಗಳ ನಡುವಿನ ವ್ಯತ್ಯಾಸವನ್ನು ಕನ್ನಡಿಗರು ಖಂಡಿಸಿದ್ದಾರೆ.












Click it and Unblock the Notifications