ಕುಮಾರಸ್ವಾಮಿ ಸರ್ಕಾರದಲ್ಲಿ ಯಾರು ಯಾರು ಸಚಿವರಿದ್ದಾರೆ? ಇಲ್ಲಿದೆ ಪಟ್ಟಿ

ಬೆಂಗಳೂರು, ಡಿಸೆಂಬರ್ 22: ಸುದೀರ್ಘ ಕಾಲದ ಹಗ್ಗ ಜಗ್ಗಾಟದ ಬಳಿಕ ರಾಜ್ಯ ಮೈತ್ರಿ ಸರ್ಕಾರದ ಸಚಿವ ಸಂಪುಟ ಕೊನೆಗೂ ವಿಸ್ತರಣೆಯಾಗಿದೆ.

ಕಾಂಗ್ರೆಸ್‌ನ ಎಂಟು ಶಾಸಕರು ರಾಜಭವನದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜೂಭಾಯಿ ವಾಲಾ ಅವರಿಂದ ಪ್ರಮಾಣವಚನ ಸ್ವೀಕರಿಸಿದರು.

ಕಾಂಗ್ರೆಸ್‌ನಲ್ಲಿರುವ ಸಚಿವ ಸ್ಥಾನ ಆಕಾಂಕ್ಷಿಗಳ ಒತ್ತಾಯಕ್ಕೆ ಮಣಿದು ಹೈಕಮಾಂಡ್ ಕೊನೆಗೂ ಸಂಪುಟ ವಿಸ್ತರಣೆಗೆ ಮುಂದಾಗಿತ್ತು. ಈಗಲೂ ಅತೃಪ್ತ ಶಾಸಕರ ಅಸಮಾಧಾನ ಗೊಂದಲಗಳ ನಡುವೆಯೇ ಎಂಟು ಶಾಸಕರು ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ.

ಸಂಪುಟದಲ್ಲಿದ್ದ ರಮೇಶ್ ಜಾರಕಿಹೊಳಿ ಮತ್ತು ಪಕ್ಷೇತರ ಶಾಸಕ ಆರ್. ಶಂಕರ್ ಅವರನ್ನು ಕೈಬಿಡಲಾಗಿದೆ. ಹೀಗಾಗಿ ಒಟ್ಟು ಆರು ಸ್ಥಾನಗಳಿಗೆ ಸಚಿವರನ್ನು ಸೇರ್ಪಡೆ ಮಾಡಿಕೊಂಡಂತಾಗಿದೆ.

hd kumaraswamy coalition government cabinet ministers portfolio after cabinet expansion

ಜೆಡಿಎಸ್ ಕಡೆಯಿಂದ ಇನ್ನೂ ಎರಡು ಸಚಿವ ಸ್ಥಾನಗಳು ಖಾಲಿ ಇವೆ. ಧನುರ್ಮಾಸ ಕಳೆದ ಬಳಿಕ ಸಂಪುಟ ವಿಸ್ತರಣೆ ನಡೆಸಲು ವರಿಷ್ಠರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ಕುಮಾರಸ್ವಾಮಿ ಅವರ ಸರ್ಕಾರದಲ್ಲಿ ಇರುವ ಸಚಿವರು ಮತ್ತು ಖಾತೆಯ ಪಟ್ಟಿ ಇಲ್ಲಿದೆ.

ಸಚಿವರ ಹೆಸರು ಕ್ಷೇತ್ರ ಖಾತೆ
ಎಚ್ ಡಿ ಕುಮಾರಸ್ವಾಮಿ
ಚನ್ನಪಟ್ಟಣ
ಮುಖ್ಯಮಂತ್ರಿ, ಹಣಕಾಸು, ಡಿಪಿಎಆರ್, ಇಂಧನ,ಅಬಕಾರಿ, ಜವಳಿ, ವಾರ್ತಾ ಮತ್ತು ಪ್ರಸಾರ, ಯೋಜನೆ ಮತ್ತು ಸಾಂಖ್ಯಿಕ, ಮೂಲ ಸೌಕರ್ಯ ಅಭಿವೃದ್ಧಿ, ಸಾರ್ವಜನಿಕ ಉದ್ದಿಮೆ ಹಾಗೂ ಬಾಕಿ ಉಳಿದ ಎಲ್ಲಾ ಖಾತೆಗಳು
ಜಿ ಪರಮೇಶ್ವರ ಕೊರಟಗೆರೆ ಬೆಂಗಳೂರು ನಗರ, ಕಾನೂನು ಮತ್ತು ನ್ಯಾಯ ಹಾಗೂ ಮಾನವ ಹಕ್ಕು, ಸಂಸದೀಯ ವ್ಯವಹಾರ, ಐಟಿ ಮತ್ತು ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ
ಎಚ್ ಡಿ ರೇವಣ್ಣ ಹೊಳೆನರಸೀಪುರ ಲೋಕೋಪಯೋಗಿ (ಬಂದರು ಖಾತೆ ಹೊರತುಪಡಿಸಿ)
ಬಂಡೆಪ್ಪ ಕಾಶೆಂಪುರ ಬೀದರ್ (ದಕ್ಷಿಣ) ಸಹಕಾರ
ಜಿ.ಟಿ ದೇವೇಗೌಡ ಚಾಮುಂಡೇಶ್ವರಿ ಉನ್ನತ ಶಿಕ್ಷಣ
ಸಿ.ಎಸ್ ಪುಟ್ಟರಾಜು ಮೇಲುಕೋಟೆ ಸಣ್ಣ ನೀರಾವರಿ
ಎಂ. ಸಿ ಮನಗೂಳಿ ಸಿಂಧಗಿ ತೋಟಗಾರಿಕೆ(ರೇಷ್ಮೆ ಹೊರತುಪಡಿಸಿ)
ಗುಬ್ಬಿ ಶ್ರೀನಿವಾಸ್ ಗುಬ್ಬಿ ಸಣ್ಣ ಕೈಗಾರಿಕೆ
ವೆಂಕಟರಾವ್ ನಾಡಗೌಡ ಸಿಂಧನೂರು ಪಶು ಸಂಗೋಪನೆ ಮತ್ತು ಮೀನುಗಾರಿಕೆ
ಸಾ.ರ ಮಹೇಶ್ ಕೆ.ಆರ್ ನಗರ ಪ್ರವಾಸೋದ್ಯಮ, ರೇಷ್ಮೆ
ಡಿ.ಸಿ ತಮ್ಮಣ್ಣ ಮದ್ದೂರು ಸಾರಿಗೆ
ಆರ್ ವಿ ದೇಶಪಾಂಡೆ ಹಳಿಯಾಳ ಕಂದಾಯ ಇಲಾಖೆ
ಕೆ.ಜೆ ಜಾರ್ಜ್ ಸರ್ವಜ್ಞ ನಗರ ದೊಡ್ಡ ಮತ್ತು ಮಧ್ಯಮ ಕೈಗಾರಿಕೆ ಖಾತೆ
ಡಿ.ಕೆ ಶಿವಕುಮಾರ್ ಕನಕಪುರ ಜಲಸಂಪನ್ಮೂಲ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ, ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ
ಕೃಷ್ಣ ಭೈರೇಗೌಡ ಬ್ಯಾಟರಾಯನಪುರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
ಶಿವಶಂಕರ ರೆಡ್ಡಿ ಗೌರಿಬಿದನೂರು ಕೃಷಿ
ಪ್ರಿಯಾಂಕ್ ಖರ್ಗೆ ಚಿತ್ತಾಪೂರ ಸಮಾಜ ಕಲ್ಯಾಣ
ಯು.ಟಿ ಖಾದರ್ ಮಂಗಳೂರು ನಗರಾಭಿವೃದ್ಧಿ(ಬಿಬಿಎಂಪಿ ಹೊರತುಪಡಿಸಿ) ಹಾಗೂ ವಸತಿ
ಜಮೀರ್ ಅಹ್ಮದ್ ಖಾನ್ ಚಾಮರಾಜಪೇಟೆ ಆಹಾರ, ನಾಗರಿಕ ಪೂರೈಕೆ
ಶಿವಾನಂದ ಪಾಟೀಲ್ ಬಸವನ ಬಾಗೇವಾಡಿ ಆರೋಗ್ಯ, ಕುಟುಂಬ ಕಲ್ಯಾಣ
ವೆಂಕಟರಮಣಪ್ಪ ಪಾವಗಡ ಕಾರ್ಮಿಕ ಇಲಾಖೆ
ರಾಜಶೇಖರ ಪಾಟೀಲ್ ಹುಮ್ನಾಬಾದ್ ಗಣಿ, ಭೂವಿಜ್ಞಾನ
ಪುಟ್ಟರಂಗಶೆಟ್ಟಿ ಚಾಮರಾಜನಗರ ಹಿಂದುಳಿದ ವರ್ಗಗಳ ಕಲ್ಯಾಣ
ಜಯಮಾಲಾ ಎಂಎಲ್ಸಿ ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ
ಎಂಬಿ ಪಾಟೀಲ್
ಬಬಲೇಶ್ವರ
ಗೃಹಖಾತೆ
ಆರ್ ಬಿ ತಿಮ್ಮಾಪುರ
ವಿಧಾನಪರಿಷತ್ ಸದಸ್ಯ (ಬಾಗಲಕೋಟೆ)
ಬಂದರು, ಒಳನಾಡು ಸಾರಿಗೆ, ಸಕ್ಕರೆ ಖಾತೆ
ಸತೀಶ್ ಜಾರಕಿಹೊಳಿ
ಯಮಕನಮರಡಿ
ಅರಣ್ಯ ಮತ್ತು ಪರಿಸರ ಇಲಾಖೆ
ಎಂಟಿಬಿ ನಾಗರಾಜ್
ಹೊಸಕೋಟೆ
ವಸತಿ
ಸಿ.ಎಸ್. ಶಿವಳ್ಳಿ
ಕುಂದಗೋಳ
ಪೌರಾಡಳಿತ
ಪರಮೇಶ್ವರ್ ನಾಯ್ಕ್
ಹೂವಿನ ಹಡಗಲಿ
ಮುಜರಾಯಿ, ಕೌಶಲಾಭಿವೃದ್ಧಿ
ರಹೀಂ ಖಾನ್
ಬೀದರ್ ಉತ್ತರ
ಯುವಜನ, ಕ್ರೀಡೆ
ಇ. ತುಕಾರಾಂ
ಸಂಡೂರು
ವೈದ್ಯಕೀಯ ಶಿಕ್ಷಣ, ಕುಟುಂಬ ಕಲ್ಯಾಣ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+