ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಮಾರಪರ್ವ ಯಾತ್ರೆ : ಗ್ರಾಮ ವಾಸ್ತವ್ಯ ಆರಂಭಿಸಿದ ಎಚ್ಡಿಕೆ

|
Google Oneindia Kannada News

ಚಿಕ್ಕಮಗಳೂರು, ನವೆಂಬರ್ 8 : 'ಕುಮಾರಪರ್ವ' ಯಾತ್ರೆ ಮೂಲಕ ರಾಜ್ಯ ಪ್ರವಾಸ ನಡೆಸುತ್ತಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಆರಂಭಿಸಿದ್ದಾರೆ. ಕುಮಾರಪರ್ವ ಯಾತ್ರೆ ಮೂಲಕ ಕುಮಾರಸ್ವಾಮಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ.

ಮ್ಯಾಜಿಕ್‌ ನಂಬರ್‌ಗಾಗಿ ಮೈಸೂರಿನಲ್ಲಿ ಕುಮಾರಣ್ಣನ ರಣಕಹಳೆ!ಮ್ಯಾಜಿಕ್‌ ನಂಬರ್‌ಗಾಗಿ ಮೈಸೂರಿನಲ್ಲಿ ಕುಮಾರಣ್ಣನ ರಣಕಹಳೆ!

ಚಿಕ್ಕಮಗಳೂರು ಜಿಲ್ಲೆಯಿಂದ ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಆರಂಭಿಸಿದರು. ಚಿಕ್ಕಮಗಳೂರು ತಾಲೂಕು ಮುಗುಳವಳ್ಳಿಯ ಧರ್ಮಪಾಲ ಅವರ ಮನೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ವಾಸ್ತವ್ಯ ಹೂಡಿದ್ದರು.

ಚಾಮುಂಡಿ ಸನ್ನಿಧಿಯಲ್ಲಿ 'ಕುಮಾರಪರ್ವ'ಕ್ಕೆ ಮುನ್ನುಡಿ ಬರೆದ ಜೆಡಿಎಸ್ಚಾಮುಂಡಿ ಸನ್ನಿಧಿಯಲ್ಲಿ 'ಕುಮಾರಪರ್ವ'ಕ್ಕೆ ಮುನ್ನುಡಿ ಬರೆದ ಜೆಡಿಎಸ್

ಬುಧವಾರ ಬೆಳಗ್ಗೆ ಮುಗುಳವಳ್ಳಿಯಲ್ಲಿಯ ಧರ್ಮಪಾಲ ಅವರ ಮನೆಯಲ್ಲಿ ಉಪಹಾರ ಸೇವಿಸಿದ ಕುಮಾರಸ್ವಾಮಿ ಅವರು, ಗ್ರಾಮಸ್ಥರ ಜೊತೆ ಮಾತುಕತೆ ನಡೆಸಿದರು, ಅಹವಾಲು ಸ್ವೀಕರಿಸಿದರು. ನಂತರ ಯಾತ್ರೆಯನ್ನು ಮುಂದುವರೆಸಿದರು. ಗ್ರಾಮಸ್ಥರು ಮಾಜಿ ಮುಖ್ಯಮಂತ್ರಿಗಳನ್ನು ಸನ್ಮಾನಿಸಿ ಬೀಳ್ಕೊಟ್ಟರು.

ಚಿತ್ರಗಳು : ಕುಮಾರಸ್ವಾಮಿ ರಾಜ್ಯ ಪ್ರವಾಸದ ಬಸ್ ವಿಶೇಷತೆಗಳುಚಿತ್ರಗಳು : ಕುಮಾರಸ್ವಾಮಿ ರಾಜ್ಯ ಪ್ರವಾಸದ ಬಸ್ ವಿಶೇಷತೆಗಳು

ಬುಧವಾರ ಕುಮಾರಪರ್ವ ಯಾತ್ರೆ ಕಡೂರು, ಬೀರೂರು ಮಾರ್ಗವಾಗಿ ತರೀಕೆರೆಗೆ ತಲುಪಲಿದೆ. ತರೀಕೆರೆಯಲ್ಲಿ ಸಮಾವೇಶ ನಡೆಯಲಿದ್ದು, ಅಲ್ಲಿಂದ ಶಿವಮೊಗ್ಗಕ್ಕೆ ತೆರಳಲಿದೆ. ಇಂದು ರಾತ್ರಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಜೆಡಿಎಸ್ ನಡೆಸುತ್ತಿರುವ ಪಾದಯಾತ್ರೆಯೂ ಇಂದು ಅಂತ್ಯಗೊಳ್ಳಲಿದೆ..

ಮೈಸೂರಿನಿಂದ ಯಾತ್ರೆ ಆರಂಭ

ಮೈಸೂರಿನಿಂದ ಯಾತ್ರೆ ಆರಂಭ

ಮಂಗಳವಾರ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಲಿಂಗದೇವರಕೊಪ್ಪ ಮೈದಾನದಲ್ಲಿ ಕುಮಾರಸ್ವಾಮಿ ಅವರು 'ಕುಮಾರಪರ್ವ' ರಾಜ್ಯ ಪ್ರವಾಸಕ್ಕೆ ಚಾಲನೆ ನೀಡಿದರು. ನಂತರ ಹಾಸನ ಜಿಲ್ಲೆ ಹೊಳೆನರಸೀಪುರಕ್ಕೆ ಯಾತ್ರೆ ಆಗಮಿಸಿತು.

1.30ಕ್ಕೆ ಹಾಸನದಲ್ಲಿ ಭವ್ಯ ಸ್ವಾಗತ

1.30ಕ್ಕೆ ಹಾಸನದಲ್ಲಿ ಭವ್ಯ ಸ್ವಾಗತ

ಕುಮಾರಪರ್ವ ಯಾತ್ರೆ ಜೆಡಿಎಸ್ ಪ್ರಾಬಲ್ಯವಿರುವ ಹಾಸನ ಜಿಲ್ಲೆಗೆ ಆಗಮಿಸುವಾಗ ಮಧ್ಯರಾತ್ರಿ 1.30 ಆಗಿತ್ತು. ಆ ಸಮಯದಲ್ಲೂ ನೂರಾರು ಕಾರ್ಯಕರ್ತರು ಕುಮಾರಸ್ವಾಮಿ ಅವರನ್ನು ಸ್ವಾಗತಿಸಿದರು.

ಗ್ರಾಮ ವಾಸ್ತವ್ಯ

ಗ್ರಾಮ ವಾಸ್ತವ್ಯ

ಹಾಸನದಿಂದ ಕುಮಾರಸ್ವಾಮಿ ಅವರು ಚಿಕ್ಕಮಗಳೂರು ಜಿಲ್ಲೆಗೆ ಆಗಮಿಸಿದರು. ಚಿಕ್ಕಮಗಳೂರು ತಾಲೂಕು ಮುಗುಳವಳ್ಳಿಯ ಧರ್ಮಪಾಲ ಅವರ ಮನೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ವಾಸ್ತವ್ಯ ಹೂಡಿದ್ದರು.

ಉಪಹಾರ ಸೇವನೆ, ಅಹವಾಲು ಸ್ವೀಕಾರ

ಉಪಹಾರ ಸೇವನೆ, ಅಹವಾಲು ಸ್ವೀಕಾರ

ಧರ್ಮಪಾಲ ಅವರ ಮನೆಯಲ್ಲಿ ಬುಧವಾರ ಬೆಳಗ್ಗೆ ಉಪಹಾರ ಸೇವಿಸಿದ ಕುಮಾರಸ್ವಾಮಿ ಅವರು, ಕುಟುಂಬ ಸದಸ್ಯರ ಜೊತೆ ಫೋಟೋ ತೆಗೆಸಿಕೊಂಡರು. ಗ್ರಾಮಸ್ಥರ ಅಹವಾಲುಗಳನ್ನು ಸ್ವೀಕರಿಸಿದರು.

ನೋಟು ಮುದ್ರಿಸಲು ಎಷ್ಟು ಖರ್ಚಾಯಿತು?

ನೋಟು ಮುದ್ರಿಸಲು ಎಷ್ಟು ಖರ್ಚಾಯಿತು?

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮ್ಮ ಸಂಪುಟ ಸಹೋದ್ಯೋಗಿಗಳನ್ನು ಗಣನೆಗೆ ತೆಗೆದುಕೊಳ್ಳದೇ ನೋಟು ಅಮಾನ್ಯೀಕರಣ ಮಾಡಿದ್ದಾರೆ. ದೇಶದ ಭ್ರಷ್ಟ ಜನರು, ಭಯೋತ್ಪಾದಕರ ಬಳಿ ಇರುವ ಹಣ ತಂದು ಬಡವರಿಗೆ ಹಂಚುತ್ತೇನೆ ಎಂದು ಹೇಳಿದ್ದರು. 2 ಸಾವಿರ ರೂಪಾಯಿಗಳ ನೋಟುಗಳನ್ನು ಮುದ್ರಿಸಲು ಸರ್ಕಾರದ ಖಜಾನೆಗೆ ಎಷ್ಟು ನಷ್ಟವಾಗಿದೆ ಎಂಬುದನ್ನು ತಿಳಿಸಲಿ ಎಂದರು.

English summary
Janata Dal (Secular) state president H.D.Kumaraswamy launched the Kumara parva Yatra in Mysuru on November 7, 2017. In his state tour he begins grama vasthavya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X