ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕನ ಹೆಸರು ಘೋಷಿಸಿದ ಎಚ್‌ಡಿ ದೇವೇಗೌಡ?

ಬೆಂಗಳೂರು, ಜುಲೈ 25: ಕರ್ನಾಟದಲ್ಲಿ ಇನ್ನೂ ಭರ್ತಿಯಾಗದೆ ಉಳಿದಿರುವ ಬಿಜೆಪಿಯ ವಿರೋಧ ಪಕ್ಷದ ನಾಯಕ ಹಾಗೂ ರಾಜ್ಯಾಧ್ಯಕ್ಷರ ಹೆಸರುಗಳನ್ನು ಜೆಡಿಎಸ್‌ ವರಿಷ್ಠ ಎಚ್‌ಡಿ ದೇವೇಗೌಡ ಅವರು ಹೆಸರಿಸಿ ಆಶ್ಚರ್ಯ ಮೂಡಿಸಿದ್ದಾರೆ.

ವಿಧಾನಸಭಾ ಚುನಾವಣೆ ಮುಗಿದು ಕರ್ನಾಟಕದ ಇತಿಹಾಸದಲ್ಲಿ ಒಂದು ಅಧಿವೇಶನವೇ ವಿರೋಧ ಪಕ್ಷದ ನಾಯಕಿಲ್ಲದೆ ನಡೆದು ಹೋಗಿದ್ದು ಎರಡನೇ ಹೆಚ್ಚು ಸ್ಥಾನ ಪಡೆದಿರುವ ಪಕ್ಷ ಬಿಜೆಪಿಯಿಂದ ಕರ್ನಾಟಕದಲ್ಲಿ ವಿರೋಧ ಪಕ್ಷದ ನಾಯಕನ ಹೆಸರು ಘೋಷಣೆಯಾಗಿಲ್ಲ. ಇನ್ನು ಬಿಜೆಪಿ ರಾಜ್ಯಾಧ್ಯಕ್ಷರ ಹುದ್ದೆ ಹಾಲಿ ಇರುವ ಅಧ್ಯಕ್ಷ ಅವಧಿ ಮುಗಿದು ಹೊಸಬರ ಆಯ್ಕೆಯು ಬಾಕಿ ಉಳಿದಿದೆ.

bjp-state-president-and-leader-of-opposition

ಈ ಹಿನ್ನೆಲೆಯಲ್ಲಿ ಜೆಡಿಎಸ್‌ ವರಿಷ್ಠ ಎಚ್‌ಡಿ ದೇವೇಗೌಡ ಅವರು ಬಿಜೆಪಿಯ ವಿರೋಧ ಪಕ್ಷದ ನಾಯಕ ಹಾಗೂ ರಾಜ್ಯಾಧ್ಯಕ್ಷ ಹೆಸರನ್ನು ಹೇಳಿ ಮಾಧ್ಯಮಗಳಿಗೇ ಆಶ್ಚರ್ಯ ತಂದ ಘಟನೆ ಇಂದು ನಡೆದಿದೆ. ಎಚ್‌ಡಿ ದೇವೇಗೌಡರು ಇಂದು ಪ್ರತಿಕಾಗೋಷ್ಠಿಯಲ್ಲಿ ಮಾತನಾಡುವಾಗ ಮಾಜಿ ಶಾಸಕ ಸಿಟಿ ರವಿ ಹಾಗೂ ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೆಸರನ್ನು ಹೇಳಿ ಆಶ್ಚರ್ಯ ಮೂಡಿಸಿದರು.

ದೇವೇಗೌಡ ಅವರು ಮಾತನಾಡುವಾಗ ಪ್ರರ್ತಕರ್ತರು ಜೆಡಿಎಸ್‌ನ ಎಚ್‌ಡಿ ಕುಮಾರಸ್ವಾಮಿ ಅವರು ಬಿಜೆಪಿಯವರೊಂದಿಗೆ ಜೊತೆಯಾಗಿದ್ದಾರೆ. ಈ ಬಗ್ಗೆ ಏನು ಹೇಳುತ್ತೀರಿ ಎಂದು ಕೇಳಿದ್ದಕ್ಕೆ ದೇವೇಗೌಡರು, ನೋಡಿ ಬಿಜೆಪಿಯಲ್ಲಿ ವಿರೋಧ ಪಕ್ಷದ ನಾಯಕ ಹಾಗೂ ರಾಜ್ಯಾಧ್ಯಕ್ಷರ ಬಗ್ಗೆ ನಿನ್ನೆ ಒಂದು ಹಂತದ ಚರ್ಚೆ ನಡೆದಿದೆ. ಅದಕ್ಕೆ ಈಗಲೇ ಅಂತಿಮಗೊಂಡಿಲ್ಲ ಎಂದರು.

ಮುಂದುವರೆದು ಬಿಜೆಪಿಯಲ್ಲಿ ಚರ್ಚೆಯಲ್ಲಿ ಚಿಕ್ಕಮಗಳೂರಿನ ಸಿಟಿ ರವಿ ರಾಜ್ಯಾಧ್ಯಕ್ಷನಾಗಿ ಹಾಗೂ ವಿಜಯಪುರ ಶಾಸಕನಾಗಿ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ಹೆಸರು ನಿಂತಿದೆ. ಅವರ ಪಕ್ಷದಲ್ಲಿ ಏನು ನಡೆಯುತ್ತಿದೆ. ನಮಗ್ಯಾಕೆ ಅದರ ಬಗ್ಗೆ ಯಾವುದೇ ಗಮನ ಹರಿಸಿಲ್ಲ. ನಾವು ಯಾರ ಜೊತೆಯೂ ಕೈ ಜೋಡಿಸುವುದಿಲ್ಲ ಎಂದು ಹೇಳಿದರು.

ನಾನು ಸ್ಪಷ್ಟವಾಗಿ ಹೇಳುತ್ತೇನೆ. ಲೋಕಸಭಾ ಚುನಾವಣೆಗೆ ನಾವು ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ, ನಾವು ಸ್ವತಂತ್ರವಾಗಿ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ. ಆಡಳಿತರೂಢ ಕಾಂಗ್ರೆಸ್‌ ಸರ್ಕಾರ ತಮ್ಮ ವಿರುದ್ಧ ಯಾವುದೇ ಟೀಕೆಗಳಿಗೆ ಬಿಜೆಪಿಯವರಿಗೆ ನಿಮ್ಮಲ್ಲಿ ವಿರೋಧ ಪಕ್ಷದ ನಾಯಕನ ಆಯ್ಕೆಯೇ ಆಗಿಲ್ಲ. ಮೊದಲು ಅದು ಮಾಡಿ ಎಂದು ಕೌಂಟರ್‌ ಕೊಡುತ್ತಲೇ ಬಂದಿತ್ತು. ಹೀಗಾಗಿ ಈ ಬಗ್ಗೆ ಚರ್ಚೆ ಇನ್ನು ಇದ್ದೇ ಇದೆ.

bjp-state-president-and-leader-of-opposition

ಇನ್ನು ಬಿಜೆಪಿಯಲ್ಲಿ ಈ ಮೊದಲು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ, ಆರ್‌ ಅಶೋಕ, ಸುನೀಲ್‌ ಕುಮಾರ್, ಬಸನಗೌಡ ಪಾಟೀಲ್‌ ಯತ್ನಾಳ್‌, ಅಶ್ವತ್ಥ್‌ ನಾರಾಯಣ ಅವರ ಹೆಸರು ಕೇಳಿ ಬಂದಿತ್ತು. ಅದರಂತೆ ರಾಜ್ಯಾಧ್ಯಕ್ಷರ ಹುದ್ದೆಗೆ ಸಿಟಿ ರವಿ, ಬಿವೈ ವಿಜಯೇಂದ್ರ ಶೋಭಾ ಕರಂದ್ಲಾಜೆ, ಅಶ್ವತ್ಥ್‌ ನಾರಾಯಣ ಅವರ ಹೆಸರು ಕೇಳಿ ಬಂದಿತ್ತು. ಇದಲ್ಲದೆ ವಿ ಸೋಮಣ್ಣ ಕೂಡ ಹೈಕಮಾಂಡ್‌ಗೆ ಪತ್ರ ಬರೆದು ರಾಜ್ಯಾಧ್ಯಕ್ಷ ಹುದ್ದೆ ಕೊಡುವಂತೆ ಮನವಿ ಮಾಡಿದ್ದರು.

ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕರ ಹುದ್ದೆ ವಿಚಾರದಲ್ಲಿ ಬಿಎಸ್‌ ಯಡಿಯೂರಪ್ಪ ಹಾಗೂ ಬಿಎಲ್ ಸಂತೋಷ್ ಬಣದ ಮೈಲುಗೈನಂತೆಯೂ ಇದು ಕಂಡು ಬರುತ್ತಿದೆ ಎಂದು ವಿಶ್ಲೇಷಣೆಗಳು ನಡೆಯುತ್ತಿವೆ. ಇತ್ತೀಚೆಗೆ ರಾಜ್ಯಾಧ್ಯಕ್ಷರ ಹುದ್ದೆ ಹೆಸರಿಸುವಾಗ ಬಿಎಸ್ ಯಡಿಯೂರಪ್ಪ ಅವರು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಹೆಸರು ಸೂಚಿಸಿದ್ದರು ಎನ್ನಲಾಗಿತ್ತು, ಇದಕ್ಕೆ ಕಾರಣ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಲಿಂಗಾಯತರಿಗೆ ನೀಡಿದರೆ ರಾಜ್ಯಾಧ್ಯಕ್ಷರ ಹುದ್ದೆಯನ್ನು ಒಕ್ಕಲಿಗರಿಗೆ ಕೊಡಬೇಕು ಎನ್ನುವುದು ಬಿಎಸ್‌ ಯಡಿಯೂರಪ್ಪ ಅವರ ಸಲಹೆಯಾಗಿತ್ತು ಎಂದು ವರದಿಗಳು ತಿಳಿಸಿದ್ದವು.

ಆದರೆ ಕ್ರಮೇಣ ಸರ್ಕಾರ ರಚೆನೆಯಾಗಿ ಒಂದು ಅಧಿವೇಶನ ಮುಗಿದರೂ ವಿರೋಧ ಪಕ್ಷದ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರ ಹುದ್ದೆ ಭರ್ತಿಯಾಗದಿರುವುದು ಚರ್ಚೆಯಾಗೇ ಉಳಿದಿತ್ತು. ಬಳಿಕ ಬಿಜೆಪಿಯವರೇ ಅಲ್ಲದ ಜೆಡಿಎಸ್‌ ನಾಯಕರಾದ ಹಿರಿಯ ರಾಜಕಾರಣಿ ಎಚ್‌ಡಿ ದೇವೇಗೌಡ ಅವರು ಹೇಳಿರುವುದು ಈ ಬಗ್ಗೆ ಮತ್ತಷ್ಟು ಕುತೂಹಲವನ್ನು ಕೆರಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+