ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಪಿಸಿಸಿ ಅಧ್ಯಕ್ಷ ಸ್ಥಾನ; ಎಚ್. ಸಿ. ಮಹದೇವಪ್ಪ ಸ್ಪಷ್ಟನೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 11 : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಯಾರಾಗಲಿದ್ದಾರೆ? ಎಂಬ ಚರ್ಚೆ ರಾಜ್ಯ ರಾಜಕೀಯದಲ್ಲಿ ನಡೆಯುತ್ತಿದೆ. ಡಿ. ಕೆ. ಶಿವಕುಮಾರ್ ಸೇರಿದಂತೆ ಹಲವರ ಹೆಸರು ಕೇಳಿ ಬರುತ್ತಿದೆ. ಆದರೆ, ಹೈಕಮಾಂಡ್ ಇನ್ನೂ ಯಾವ ತೀರ್ಮಾನವನ್ನು ತೆಗೆದುಕೊಂಡಿಲ್ಲ.

ಮಾಜಿ ಸಚಿವ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಪ್ತರಾದ ಡಾ. ಎಚ್. ಸಿ. ಮಹದೇವಪ್ಪ ಹೆಸರು ಸಹ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬರುತ್ತಿದೆ. ಫೇಸ್ ಬುಕ್ ಮೂಲಕ ಅವರು ಈ ಕುರಿತು ಸ್ಪಷ್ಟನೆಯನ್ನು ನೀಡಿದ್ದಾರೆ.

ಅಚ್ಚರಿ ಬೆಳವಣಿಗೆ; ಡಿ. ಕೆ. ಶಿವಕುಮಾರ್‌ಗೆ ಹೈಕಮಾಂಡ್‌ ಬುಲಾವ್! ಅಚ್ಚರಿ ಬೆಳವಣಿಗೆ; ಡಿ. ಕೆ. ಶಿವಕುಮಾರ್‌ಗೆ ಹೈಕಮಾಂಡ್‌ ಬುಲಾವ್!

"ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಷಯಕ್ಕೆ ಸಂಬಂಧಿಸಿದಂತೆ ಬೆಳಗಿನಿಂದ ಬಹಳಷ್ಟು ಕರೆಗಳು ಬರುತ್ತಿದ್ದು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಎಲ್ಲರ ಪ್ರೀತಿ ಅಭಿಮಾನಕ್ಕೆ ಶಿರಬಾಗಿ ವಂದಿಸುತ್ತೇನೆ" ಎಂದು ಫೇಸ್‌ ಬುಕ್‌ ಪೋಸ್ಟ್‌ ಮೂಲಕ ಅವರು ಹೇಳಿದ್ದಾರೆ.

ಕಾಂಗ್ರೆಸ್ ನಾಯಕರ ಹೈಡ್ರಾಮ, ಸಿದ್ದರಾಮಯ್ಯ ರಾಜೀನಾಮೆ ಕಾಂಗ್ರೆಸ್ ನಾಯಕರ ಹೈಡ್ರಾಮ, ಸಿದ್ದರಾಮಯ್ಯ ರಾಜೀನಾಮೆ

15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಎರಡು ಸ್ಥಾನದಲ್ಲಿ ಮಾತ್ರ ಜಯಗಳಿಸಿತ್ತು. ಫಲಿತಾಂಶ ಪ್ರಕಟವಾದ ಬಳಿಕ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಸಿದ್ದರಾಮಯ್ಯ ಹಾದಿ ಹಿಡಿದ ದಿನೇಶ್ ಗುಂಡೂರಾವ್, ಅಧ್ಯಕ್ಷಗಿರಿಗೆ ರಾಜೀನಾಮೆಸಿದ್ದರಾಮಯ್ಯ ಹಾದಿ ಹಿಡಿದ ದಿನೇಶ್ ಗುಂಡೂರಾವ್, ಅಧ್ಯಕ್ಷಗಿರಿಗೆ ರಾಜೀನಾಮೆ

ಎಚ್. ಸಿ. ಮಹದೇವಪ್ಪ ಸ್ಪಷ್ಟನೆ

ಎಚ್. ಸಿ. ಮಹದೇವಪ್ಪ ಸ್ಪಷ್ಟನೆ

ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಷಯಕ್ಕೆ ಸಂಬಂಧಿಸಿದಂತೆ ಬೆಳಗಿನಿಂದ ಬಹಳಷ್ಟು ಕರೆಗಳು ಬರುತ್ತಿದ್ದು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಎಲ್ಲರ ಪ್ರೀತಿ ಅಭಿಮಾನಕ್ಕೆ ಶಿರಬಾಗಿ ವಂದಿಸುತ್ತೇನೆ. ಆದರೆ, ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನಿರ್ಧಾರದ ಅನುಸಾರವಾಗಿ ಪಕ್ಷದ ನಾಯಕರ ಆಯ್ಕೆ ನಡೆಯಲಿದ್ದು, ಯಾರೂ ಊಹಾಪೋಹಗಳಿಗೆ ಕಿವಿಗೊಡಬಾರದು ಎಂದು ವಿನಮ್ರತೆಯಿಂದ ಕೇಳಿಕೊಳ್ಳುತ್ತೇನೆ ಎಂದು ಎಚ್‌. ಸಿ. ಮಹದೇವಪ್ಪ ಹೇಳಿದ್ದಾರೆ.

ನನ್ನ ಕರ್ತವ್ಯವಾಗಿದೆ

ನನ್ನ ಕರ್ತವ್ಯವಾಗಿದೆ

ಒಂದು ವೇಳೆ ಪಕ್ಷಕ್ಕಾಗಿ ಕೆಲಸ ಮಾಡು ಎಂದು ಹೈಕಮಾಂಡ್ ಸೂಚಿಸಿದರೆ ಅದರಂತೆಯೇ ನಡೆದುಕೊಂಡು ಕೆಲಸ ಮಾಡಬೇಕಾದ್ದು ನನ್ನ ಕರ್ತವ್ಯವೂ ಆಗಿರುತ್ತದೆ. ಅದೇನಾದರೂ ಆಗಲಿ ದೇಶದ ಸಮಗ್ರತೆಯಲ್ಲಿ ನಂಬಿಕೆಯಿಟ್ಟ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಲು ಎಲ್ಲರೂ ಒಗ್ಗಟ್ಟಾಗಿ ಶ್ರಮಿಸೋಣ, ಮನುವಾದಿಗಳ ಸಮಾಜ ವಿರೋಧಿ ನಿಲುವುಗಳನ್ನು ಹಿಮ್ಮೆಟ್ಟಿಸಿ ಬಾಬಾ ಸಾಹೇಬರ ಆಶಯವನ್ನು ಕಾಪಾಡೋಣ ಎಂದು ಕರೆ ನೀಡಿದ್ದಾರೆ.

ಸಿದ್ದರಾಮಯ್ಯ ಆಪ್ತರು

ಸಿದ್ದರಾಮಯ್ಯ ಆಪ್ತರು

ಡಾ. ಎಚ್. ಸಿ. ಮಹದೇವಪ್ಪ ಪ್ರತಿಪಕ್ಷ ನಾಯಕ ಎಚ್. ಸಿ. ಮಹದೇವಪ್ಪ ಆಪ್ತರು. ದಿನೇಶ್ ಗುಂಡೂರಾವ್ ರಾಜೀನಾಮೆ ಬಳಿಕ ಮಹದೇವಪ್ಪ ಕೆಪಿಸಿಸಿ ಅಧ್ಯಕ್ಷರಾಗಬಹುದು ಎಂಬ ಸುದ್ದಿಗಳು ಹಬ್ಬಿವೆ. ಮಾಧ್ಯಮಗಳಲ್ಲೂ ಈ ಕುರಿತು ವರದಿಗಳು ಬಂದಿವೆ. ಆದ್ದರಿಂದ, ಮಹದೇವಪ್ಪ ಸ್ಪಷ್ಟನೆ ನೀಡಿದ್ದಾರೆ.

ಹುಣಸೂರು ಉಪ ಚುನಾವಣೆ

ಹುಣಸೂರು ಉಪ ಚುನಾವಣೆ

15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಎರಡು ಸ್ಥಾನಗಳಲ್ಲಿ ಜಯಗಳಿಸಿದೆ. ಕಾಂಗ್ರೆಸ್ ಗೆದ್ದ ಸ್ಥಾನಗಳಲ್ಲಿ ಹುಣಸೂರು ಸಹ ಒಂದು. ಹುಣಸೂರು ಕ್ಷೇತ್ರದ ಉಪ ಚುನಾವಣೆ ಉಸ್ತುವಾರಿಯನ್ನು ಎಚ್. ಸಿ. ಮಹದೇವಪ್ಪ ವಹಿಸಿಕೊಂಡಿದ್ದರು. ಅವರ ತಂತ್ರದ ಫಲವಾಗಿಯೇ ಕಾಂಗ್ರೆಸ್‌ ಗೆದ್ದಿತ್ತು.

English summary
Former minister Dr.H.C.Mahadevappa clarification on Karnataka Pradesh Congress Committee president post. H.C.Mahadevappa name also rounding for the post that vacant after Dinesh Gundu Rao resignation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X