ನೂತನ ಪೊಲೀಸ್ ಮಹಾ ನಿರ್ದೇಶಕರಾಗಿ ಕಿಶೋರ್ ಚಂದ್ರ ನೇಮಕ ಸಾಧ್ಯತೆ

Subscribe to Oneindia Kannada

ಬೆಂಗಳೂರು, ಅಕ್ಟೋಬರ್ 12: ರಾಜ್ಯದ ನೂತನ ಪೊಲೀಸ್ ಮಹಾ ನಿರ್ದೇಶಕ ಮತ್ತು ನಿರೀಕ್ಷಕರಾಗಿ (ಡಿಜಿ ಐಜಿಪಿ) ಹಿರಿಯ ಪೊಲೀಸ್ ಅಧಿಕಾರಿ ಎಚ್.ಸಿ ಕಿಶೋರ್ ಚಂದ್ರ ನೇಮಕವಾಗುವ ಸಾಧ್ಯತೆ ಇದೆ.

ಹಾಲಿ ಡಿಜಿಪಿ ರೂಪಕ್ ಕುಮಾರ್ ದತ್ತಾ ಈ ತಿಂಗಳ ಅಂತ್ಯಕ್ಕೆ ನಿವೃತ್ತರಾಗಲಿದ್ದು ಅವರ ಸ್ಥಾನಕ್ಕೆ ಹೊಸಬರನ್ನು ನೇಮಕ ಮಾಡಬೇಕಾಗಿದೆ.

 HC Kishor Chandra likely to succeed R K Dutta as DG-IGP

ಹಾಲಿ ಸಿಐಡಿ ಡಿಜಿಪಿ ಕಿಶೋರ್ ಚಂದ್ರ ಪರ ಸರಕಾರದ ಹೆಚ್ಚಿನ ಸಚಿವರು ಒಲವು ವ್ಯಕ್ತಪಡಿಸಿದ್ದು, ಅವರೇ ಡಿಜಿ-ಐಜಿಪಿಯಾಗಲಿದ್ದಾರೆ ಎನ್ನಲಾಗಿದೆ.

ಡಿಜಿಪಿ ಸ್ಥಾನಕ್ಕೆ ನೀಲಮಣಿ ರಾಜು, ಎಸಿಬಿ ಡಿಜಿಪಿ ಎಂ.ಎನ್ ರೆಡ್ಡಿ ಕೂಡಾ ರೇಸಿನಲ್ಲಿದ್ದರು. ಕೇಂದ್ರ ಸೇವೆಗೆ ತೆರಳುವುದಾಗಿ ನೀಲಮಣಿ ರಾಜು ಮನವಿ ಸಲ್ಲಿಸಿದ್ದಾರೆ.

ಹೀಗಾಗಿ ಡಿಜಿಪಿ ಸ್ಥಾನಕ್ಕೆ ಎಂ.ಎನ್. ರೆಡ್ಡಿ ಮತ್ತು ಕಿಶೋರ್ ಚಂದ್ರ ಸ್ಪರ್ಧೆ ಇದೆ. ಸರಕಾರ ಕಿಶೋರ್ ಚಂದ್ರ ಪರ ಒಲವು ಹೊಂದಿರುವುದರಿಂದ ಅವರೇ ಡಿಜಿಪಿ ಹುದ್ದೆ ಅಲಂಕರಿಸುವುದು ಬಹುತೇಕ ಖಚಿತವಾಗಿದೆ.

ಕಿಶೋರ್ ಚಂದ್ರ ಕರ್ನಾಟಕದವರು ಎನ್ನುವುದು ಅವರಿಗೆ ಪ್ಲಸ್ ಪಾಯಿಂಟ್ ಆಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kishor Chandra may succeed Rupak Kumar Dutta as Director General and Inspector General of Police, Karnataka.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ