ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಂಡತಿಗೆ ವಿಚ್ಛೇದನ ನೀಡಿ ಮಗನತ್ತ ಕಣ್ಣೆತ್ತಿಯೂ ನೋಡದ ಪತಿ!

ಇಲ್ಲೊಬ್ಬ ಪತಿರಾಯ ಕೋರ್ಟ್ ಅವಕಾಶ ನೀಡಿದರೂ ವಿಚ್ಛೇದನದ ಬಳಿಕ ಎಂಟು ವರ್ಷ ಕಳೆದರೂ ಮಗುವನ್ನು ಭೇಟಿ ಮಾಡಿಲ್ಲ. ಅಷ್ಟೇ ಅಲ್ಲ ಈ ಸಂಬಂಧ ದಾಖಲಾದ ಪ್ರಕರಣದಲ್ಲಿ ಕೋರ್ಟ್‌ಗೂ ಹಾಜರಾಗಿಲ್ಲ.

By ಎಸ್ ಎಸ್ ಎಸ್
|
Google Oneindia Kannada News

ಬೆಂಗಳೂರು, ಜನವರಿ 29; ಸಾಮಾನ್ಯವಾಗಿ ವೈವಾಹಿಕ ಭಿನ್ನಾಭಿಪ್ರಾಯಗಳ ಪ್ರಕರಣಗಳಲ್ಲಿ ಪತಿ ಹೆಂಡತಿಯ ಜೊತೆ ಸಂಬಂಧ ಕಡಿದುಕೊಂಡರೂ ಮಕ್ಕಳ ಜತೆ ಸಂಬಂಧ ಮುಂದುವರಿಸಿಕೊಂಡು ಬಾಂಧವ್ಯ ಕಾಯ್ದುಕೊಳ್ಳುತ್ತಾರೆ.

ಆದರೆ ಇಲ್ಲೊಬ್ಬ ಪತಿರಾಯ, ವಿಚ್ಛೇದನದ ಬಳಿಕ ಎಂಟು ವರ್ಷ ಕಳೆದರೂ ಮಗುವನ್ನು ಭೇಟಿ ಮಾಡಿಲ್ಲ. ಅಷ್ಟೇ ಅಲ್ಲ ಈ ಸಂಬಂಧ ದಾಖಲಾದ ಪ್ರಕರಣದಲ್ಲಿ ಕೋರ್ಟ್‌ಗೂ ಹಾಜರಾಗಿಲ್ಲ.

ಅಪ್ರಾಪ್ತೆ ಕಾರಣಕ್ಕೆ ಮದುವೆ ರದ್ದಾಗದು; ಕರ್ನಾಟಕ ಹೈಕೋರ್ಟ್ ಅಪ್ರಾಪ್ತೆ ಕಾರಣಕ್ಕೆ ಮದುವೆ ರದ್ದಾಗದು; ಕರ್ನಾಟಕ ಹೈಕೋರ್ಟ್

ಆದರೆ ನ್ಯಾಯಾಲಯ ಈ ಅಂಶಗಳನ್ನು ಪರಿಗಣಿಸಿ, ಎರಡನೇ ಮದುವೆ ಆಗಿರುವ ಆ ಮಹಿಳೆ ಮಗುವಿನೊಂದಿಗೆ ಆಸ್ಟ್ರೇಲಿಯಾದಲ್ಲಿ ನೆಲೆಸಲು ಹೈಕೋರ್ಟ್ ಅವಕಾಶ ನೀಡಿದೆ.

ವಿಚ್ಛೇದನ ಪ್ರಕರಣ: ಪತ್ನಿಯ ಜೀವನಾಂಶ ₹40 ಲಕ್ಷಕ್ಕೆ ಹೆಚ್ಚಿಸಿದ ಹೈಕೋರ್ಟ್‌ವಿಚ್ಛೇದನ ಪ್ರಕರಣ: ಪತ್ನಿಯ ಜೀವನಾಂಶ ₹40 ಲಕ್ಷಕ್ಕೆ ಹೆಚ್ಚಿಸಿದ ಹೈಕೋರ್ಟ್‌

child

ವಿಚ್ಛೇದನದ ಬಳಿಕ ಎರಡನೇ ವಿವಾಹವಾಗಿ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದು, ತಾನೂ ಮತ್ತು ತನ್ನ ಮಗುವಿಗೆ ಅಲ್ಲಿಯೇ ನೆಲೆಸಲು ಶಾಶ್ವತ ವೀಸಾ ಪಡೆಯಲು ಅನುಮತಿಸುವಂತೆ ಕೋರಿ ಆ ಮಹಿಳೆಯ ಪರ ಅವರ ತಂದೆ ಸಲ್ಲಿಸಿದ್ದ ಅರ್ಜಿಯನ್ನು ಮದ್ದೂರಿನ ಸಿವಿಲ್ ನ್ಯಾಯಾಲಯ ವಜಾಗೊಳಿಸಿತ್ತು.

''ರಾಯಲ್ ವಿಚ್ಛೇದನ'' ದುಬೈ ಶೇಖ್‌ಗೆ 728 ಮಿಲಿಯನ್ USD ಹೊರೆ''ರಾಯಲ್ ವಿಚ್ಛೇದನ'' ದುಬೈ ಶೇಖ್‌ಗೆ 728 ಮಿಲಿಯನ್ USD ಹೊರೆ

ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಅರ್ಜಿಯನ್ನು ಪುರಸ್ಕರಿಸಿದ್ದು, ಮಗುವಿನೊಂದಿಗೆ ತಾಯಿ ಆಸ್ಟ್ರೇಲಿಯಾದಲ್ಲಿ ನೆಲೆಸಲು ಅವಕಾಶ ನೀಡಿದೆ.

ಅಲ್ಲದೆ, ವಿಚ್ಛೇದನದ ಬಳಿಕ ಎಂಟು ವರ್ಷ ಕಳೆದರೂ ತಂದೆ ಮಗುವನ್ನು ನೋಡಲು ಆಗಮಿಸಿಲ್ಲ. ಮಗು ಆಸ್ಟ್ರೇಲಿಯಾ ವೀಸಾ ಪಡೆಯುವ ಸಂಬಂಧ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಗೂ ಹಾಜರಾಗಿಲ್ಲ. ಈ ಅಂಶ ಗಮನಿಸಿದರೆ, ಪತಿ ಮುಂದಿನ ದಿನಗಳಲ್ಲಿ ಮಗುವನ್ನು ನೋಡುವ ಕುರಿತು ಆಸಕ್ತಿ ಕಳೆದುಕೊಂಡಿದ್ದಾರೆ ಎಂಬುದು ಸ್ಪಷ್ಟವಾಗಿ ಸೂಚಿಸುತ್ತದೆ.

ಜತೆಗೆ, ಪತಿ ಈವರೆಗೂ ವಿಚಾರಣೆಗೆ ಹಾಜರಾಗಿಲ್ಲ. ಪರಿಣಾಮ ಮತ್ತಷ್ಟು ದಾವೆಗಳು ದಾಖಲಿಸುವುದನ್ನು ತಪ್ಪಿಸುವುದಕ್ಕಾಗಿ ಅರ್ಜಿಯನ್ನು ಪುರಸ್ಕರಿಸಲಾಗುತ್ತಿದೆ ಎಂದು ನ್ಯಾಯಪೀಠ ಹೇಳಿದೆ. ಅಲ್ಲದೆ, ಮಗುವನ್ನು ಆಸ್ಟ್ರೇಲಿಯಾ ವೀಸಾ ಪಡೆಯಲು ಅನುಮತಿ ನೀಡಿದೆ.

ಪ್ರಕರಣದ ಹಿನ್ನೆಲೆ?; ಮದ್ದೂರಿನ ಆಕೆ ಮತ್ತು ಕುಣಿಗಲ್‌ನ ಆತ 2006ರಲ್ಲಿ ವಿವಾಹವಾಗಿದ್ದು, ಅವರಿಗೆ ಗಂಡು ಮಗು ಜನಿಸಿತ್ತು. ಕೆಲ ದಿನಗಳ ಬಳಿಕ ಇಬ್ಬರ ನಡುವಿನ ವಿರಹದಿಂದ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಅಪ್ರಾಪ್ತ ವಯಸ್ಸಿನ ಮಗನನ್ನು ತಾಯಿಯ ಆರೈಕೆಯಲ್ಲಿರಲು ಅವಕಾಶ ನೀಡಿತ್ತು. ಜತೆಗೆ, ತಿಂಗಳಿಗೆ ಒಮ್ಮೆ ಮಗುವನ್ನು ಭೇಟಿ ಮಾಡಲು ತಂದೆಗೆ ಅವಕಾಶ ನೀಡಿ ವಿಚ್ಛೇದನ ಮಂಜೂರು ಮಾಡಿತ್ತು. ಆದರೆ, ವಿಚ್ಛೇದನದ ಬಳಿಕ ಪತಿ ಒಮ್ಮೆಯೂ ಮಗನ ಭೇಟಿಗೆ ಆಗಮಿಸಿರಲಿಲ್ಲ.

ಆ ನಂತರ ಮಗುವನ್ನು ನೋಡಲು ಪತಿ ಬಾರದ ಹಿನ್ನೆಲೆ ತಿಂಗಳಿಗೊಮ್ಮೆ ಭೇಟಿ ಮಾಡುವುದಕ್ಕೆ ನೀಡಿರುವ ಷರತ್ತನ್ನು ಸಡಿಲಗೊಳಿಸುವಂತೆ ಆಕೆ 2022ರ ಫೆಬ್ರವರಿ 19ರಂದು ಮದ್ದೂರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಸಂಬಂಧಿಸಿದಂತೆ ಮೊದಲ ಪತಿಗೆ ನೋಟಿಸ್ ಜಾರಿಯಾದರೂ ಹಾಜರಾಗಲಿಲ್ಲ. ಹೀಗಾಗಿ ಮಗುವಿನ ಭೇಟಿಗೆ ನೀಡಿದ್ದ ಅವಕಾಶವನ್ನು ನ್ಯಾಯಾಲಯ ರದ್ದುಗೊಳಿಸಿತ್ತು.

ಪ್ರವಾಸಿ ವೀಸಾದೊಂದಿಗೆ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದ ಆಕೆ ಮಗನಿಗೆ ಶಾಶ್ವತವಾಗಿ ನೆಲೆಸಲು ವಿಸಾ ಕೋರಿ ಅರ್ಜಿ ಸಲ್ಲಿಸಬೇಕಾಗಿತ್ತು. ಆದರೆ, ಅಪ್ರಾಪ್ತ ಮಕ್ಕಳನ್ನು ಆಸ್ಟ್ರೇಲಿಯಾದಲ್ಲಿ ನೆಲೆಸಲ ಅವಕಾಶ ಪಡೆಯಬೇಕಾದರೆ ಅಲ್ಲಿನ ವಲಸೆ ನಿಯಮಗಳ ಪ್ರಕಾರ ಮೂಲ ದೇಶದ ನ್ಯಾಯಾಲಯದ ಅನುಮತಿ ಕಡ್ಡಾಯವಾಗಿದೆ.

ಹೀಗಾಗಿ ಆಕೆ ತನ್ನ ತಂದೆಯ ಮೂಲಕ ಅನುಮತಿ ಪಡೆಯಲು ಮತ್ತೆ ಮದ್ದೂರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಅನುಮತಿ ನೀಡಲು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

English summary
Karnataka high court granted permission to divorced woman to settle down at Australia along with son.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X