ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಕ್ಷಕರ ವರ್ಗಾವಣೆಗೆ ಕೊನೆಗೂ ಹೈಕೋರ್ಟ್‌ ಅಸ್ತು

By Nayana
|
Google Oneindia Kannada News

ಬೆಂಗಳೂರು, ಜೂನ್‌ 29: ರಾಜ್ಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್‌ ತೆರವುಗೊಳಿಸಿದೆ. ರಾಜ್ಯ ಸರ್ಕಾರ ಸಲ್ಲಿಸಿದ್ದ ತಡೆಯಾಜ್ಞೆ ತೆರವು ಕುರಿತಂತೆ ಮಧ್ಯಂತರ ಅರ್ಜಿಯನ್ನು ಹೈಕೋರ್ಟ್‌ ಮಾನ್ಯ ಮಾಡಿದೆ.

ನ್ಯಾ. ಎಚ್‌.ಜಿ. ರಮೇಶ್‌ ಮತ್ತು ನ್ಯಾ.ಪಿ.ಎಂ. ನವಾಜ್‌ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಬೆಂಗಳೂರು ರಾಜಾಜಿನಗರದ ಶಿಕ್ಷಕಿ ಪ್ರಭಾ ಅಡಿಗಲ್‌ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್‌ ಕಳೆದ ಮೇ 8 ರಂದು ಶಿಕ್ಷಕರ ವರ್ಗಾವಣೆಗೆ ತಡೆಯಾಜ್ಞೆ ನೀಡಿತ್ತು.

ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಜೂನ್ 18ರಿಂದ ಆರಂಭಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಜೂನ್ 18ರಿಂದ ಆರಂಭ

ಗುರುವಾರ ಮತ್ತೆ ಪ್ರಕರಣದ ವಿಚಾರಣೆಯನ್ನು ವಿಭಾಗೀಯಪೀಠ ಕೈಗೆತ್ತಿಕೊಂಡಾಗ ಅರ್ಜಿದಾರರ ಪರ ವಕೀಲ ಎ.ವಿ. ಅಮರನಾಥನ್‌, ಕರ್ನಾಟಕ ರಾಜ್ಯ ನಾಗರಿಕ ಸೇವಾ ಶಿಕ್ಷಕರ ವಗಾ್ಔನೆ ನಿಯಮದಪ್ರಕಾರ ಒಂದು ವಲಯದಿಂದ ಇನ್ನೊಂದು ವಲಯಕ್ಕೆ ವರ್ಗಾವಣೆ ಮಾಡುವಂತಿಲ್ಲ.

HC gives nod to govt teachers transfer

ಸರ್ಕಾರ 2018ರ ಜ.1ರಂದು ಹೊರಡಿಸಿರುವ ಶಿಕ್ಷಕರ ವರ್ಗಾವಣೆ ಮಾರ್ಗಸೂಚಿ ಅನ್ವಯ, ಒಂದು ವಲಯದಿಂದ ಇನ್ನೊಂದು ವಲಯಕ್ಕೆ ವರ್ಗಾವಣೆಗೆ ಅವಕಾಶ ಕಲ್ಪಿಸಲಾಗಿದೆ ಇದು ಕಾನೂನು ಬಾಹಿರ ಎಂದು ನ್ಯಾಯಪೀಠಕ್ಕೆ ವಿವರಿಸಲಾಗಿದೆ. ಸರ್ಕಾರದ ಪರ ವಾದ ಮಂಡಿಸಿದ ತಾರಾನಾಥ ಪೂಜಾರಿ, ಸರ್ಕಾರದ ಶಿಕ್ಷಕರ ವರ್ಗಾವಣೆಗೆ ನಿಯಮ ಸೆಕಷನ್‌ 5ಕ್ಕೆ 2017ರ ಏ.18ರಂದೇ ತಿದ್ದುಪಡಿ ಮಾಡಿ, ಅಂತರ ವಲಯ ವರ್ಗಾವಣೆಗೆ ಅವಕಾಶ ಕಲ್ಪಿಸಿದೆ.

English summary
High court on Thursday withdrawn stay on government school teachers transfer process and allowed to petitioner to file objection before the state government on amendment of teachers transfer act.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X