ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತನ್ನದೇ ವಕೀಲರ ವಿರುದ್ಧ ಕೇಸ್; ರಾಜೀವ್ ಗಾಂಧಿ ವಿವಿ ಕ್ರಮಕ್ಕೆ ಹೈಕೋರ್ಟ್ ತರಾಟೆ

By ಎಸ್ ಎಸ್ ಎಸ್
|
Google Oneindia Kannada News

ಬೆಂಗಳೂರು ಅ.10. ತನ್ನದೇ ವಿಶ್ವವಿದ್ಯಾಲಯ ವಕೀಲರ ಸಮಿತಿಯಲ್ಲಿದ್ದ ವಕೀಲರ ವಿರುದ್ಧ ವಂಚನೆಯ ಕ್ರಿಮಿನಲ್ ಮೊಕದ್ದಮೆ ಹೂಡಿದ್ದಕ್ಕಾಗಿ ಹೈಕೋರ್ಟ್, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯವನ್ನು ಮತ್ತು ಅದರ ರಿಜಿಸ್ಟ್ರಾರ್‌ ಅನ್ನು ತರಾಟೆಗೆ ತೆಗೆದುಕೊಂಡಿದೆ.

ವಿವಾದದಲ್ಲಿ ವಕೀಲರು ಕಕ್ಷಿದಾರರೊಂದಿಗೆ ಶಾಮೀಲಾಗಿದ್ದಾರೆ ಮತ್ತು ಅವರನ್ನು ಪ್ರತಿನಿಧಿಸುತ್ತಿದ್ದಾರೆ ಎಂದು ಆರೋಪಿಸುವ ಅಧಿಕಾರವು ವಿಶ್ವವಿದ್ಯಾಲಯಕ್ಕೆ ಇಲ್ಲ ಎಂದು ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ.

ಅಷ್ಟೇ ಅಲ್ಲದೆ, ಇಂತಹ ಅಜಾಗರೂಕ ದೂರುಗಳನ್ನು ದಾಖಲಿಸುವಾಗ ಎಚ್ಚರಿಕೆ ವಹಿಸುವಂತೆ ನ್ಯಾಯಪೀಠ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್‌ಜಿಯುಎಚ್‌ಎಸ್) ಮತ್ತು ಅದರ ರಿಜಿಸ್ಟ್ರಾರ್ ಎಂ,ಆರ್. ರವಿಕುಮಾರ್ ಅವರಿಗೆ ನಿರ್ದೇಶನ ನೀಡಿ, ಅಂತಹ ಯಾವುದೇ ಆತುರದ ಕ್ರಮ ಪುನರಾವರ್ತನೆಯಾದರೆ ಅದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ಸಹ ನೀಡಿದೆ.

RGUHS: ನಿಯಮ ಉಲ್ಲಂಘಿಸುವ ಮೌಲ್ಯಮಾಪಕರನ್ನು ಕಪ್ಪು ಪಟ್ಟಿಗೆ ಸೇರಿಸಲು ಹೈಕೋರ್ಟ್ ಆದೇಶRGUHS: ನಿಯಮ ಉಲ್ಲಂಘಿಸುವ ಮೌಲ್ಯಮಾಪಕರನ್ನು ಕಪ್ಪು ಪಟ್ಟಿಗೆ ಸೇರಿಸಲು ಹೈಕೋರ್ಟ್ ಆದೇಶ

ಧಾರವಾಡದ ವಕೀಲ ಶಿವಕುಮಾರ ಎಸ್‌.ಬಾಡವಾಡಗಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಅರ್ಜಿದಾರರ ವಿರುದ್ಧ ಆರ್‌ಜಿಎಚ್‌ಎಸ್‌ ಹೂಡಿದ್ದ ಎಫ್ ಐಆರ್ ಅನ್ನು ರದ್ದುಗೊಳಿಸಿತು.

HC came down heavily against RGUHS for filing case against his own panel of advocate

ಕೋರ್ಟ್ ಆದೇಶವೇನು?: ''ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯದ ಮುಂದೆ ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸುವ ಅರ್ಜಿದಾರರ ಕ್ರಮ ಮತ್ತು ಹಿಂದಿನ ತೀರ್ಪಿನ ನಂತರ ಅರ್ಜಿಗಳನ್ನು ಅನುಮತಿಸುವ ನ್ಯಾಯಾಲಯವು ಅಪರಾಧ ಕೇಸ್ ದಾಖಲಿಸಲು ಕಾರಣವಾಗುವುದಿಲ್ಲ" ಎಂದು ನ್ಯಾಯಾಲಯವು, ಆರ್‌ಜಿಯುಎಚ್‌ಎಸ್ ವಿರುದ್ಧ ಯಾವುದೇ ಪ್ರಾಥಮಿಕ ತನಿಖೆಯನ್ನು ನಡೆಸಲಿಲ್ಲ ಎಂದು ಸೂಚಿಸಿತು.

ಅರ್ಜಿದಾರರು ಅಥವಾ ಅವರ ವಿರುದ್ಧ ಹೊರಿಸಲಾದ ಆರೋಪಗಳಿಗೆ ಯಾವುದೇ ಮೆಟೀರಿಯಲ್ ಇಲ್ಲ ಎಂದು ಹೇಳಿದೆ.

ಆರ್‌ಜಿಯುಎಚ್‌ಎಸ್‌ನ ದೂರು ದುರುದ್ದೇಶದಿಂದ ಕೂಡಿದೆ, ಆರೋಪಗಳು ಅಸಂಬದ್ಧವಾಗಿದೆ ಮತ್ತು "ಇಂತಹ ಕ್ಷುಲ್ಲಕ ದೂರು, ಮುಂದುವರೆಯಲು ಅನುಮತಿ ನೀಡಿದರೆ, ಅದು ವಿವಿ ಸೃಷ್ಟಿಸಿದ ಕಿಡಿಗೇಡಿತನದ ಮೇಲೆ ಪ್ರೀಮಿಯಂ ವಿಧಿಸಿದಂತಾಗುತ್ತದೆ, ವಿಶ್ವವಿದ್ಯಾನಿಲಯ ಯುನಿವರ್ಸಿಟಿಯನ್ನು ಪ್ರತಿನಿಧಿಸುತ್ತಿರುವ ವಕೀಲರ ವಿರುದ್ಧ ಅಂತಹ ಆಧಾರರಹಿತ ಆರೋಪ ಮಾಡುವುದು ಸರಿಯಲ್ಲ ಎಂದು ಹೇಳಿತು.

HC came down heavily against RGUHS for filing case against his own panel of advocate

ಪ್ರಕರಣದ ಹಿನ್ನೆಲೆ: ಸುಮಾರು ಎರಡು ದಶಕಗಳ ಕಾಲ ಆರ್‌ಜಿಯುಎಚ್‌ಎಸ್ ಪರ ವಕೀಲರ ಸಮಿತಿಯ ಸದಸ್ಯರಾಗಿದ್ದ ಅರ್ಜಿದಾರರು, ಸ್ನಾತಕೋತ್ತರ ಪ್ರವೇಶ ಪರೀಕ್ಷೆ-2010ರ ಅವ್ಯವಹಾರದ ಪ್ರಕರಣದಲ್ಲಿ ಆರೋಪಿಗಳು ಸಲ್ಲಿಸಿದ ಅರ್ಜಿಗಳು ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಂದಿದ್ದಾಗ ಅದರಲ್ಲಿ ಭಾಗವಹಿಸಿದ್ದಾರೆ ಮತ್ತು ನ್ಯಾಯಾಲಯದ ಸೂಚನೆಯ ಮೇರೆಗೆ ಅವರು ಆರ್‌ಜಿಯುಎಚ್‌ಎಸ್ ಪರವಾಗಿ ನೋಟಿಸ್ ಸ್ವೀಕರಿಸಿದ್ದರು ಮತ್ತು ಇತರ ಆರೋಪಿಗಳು ಸಲ್ಲಿಸಿದ ಇದೇ ರೀತಿಯ ಅರ್ಜಿಯಲ್ಲಿ ಹಿಂದೆ ನೀಡಲಾದ ಆದೇಶದ ಪ್ರಕಾರ ನ್ಯಾಯಾಲಯವು ಆ ಅರ್ಜಿಗಳನ್ನು ವಿಲೇವಾರಿ ಮಾಡಿತ್ತು.

ಶಿವಕುಮಾರ್ ಅವರು ನ್ಯಾಯಾಲಯದ ಆದೇಶವನ್ನು ತಿಳಿಸಿದ ನಂತರ, ಆರ್‌ಜಿಯುಎಚ್‌ಎಸ್ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿತ್ತು. ಅವರು ಆರೋಪಿಗಳ ಜೊತೆ ಸೇರಿಕೊಂಡು ಅವರ ಅರ್ಜಿಗಳನ್ನು ವಿಲೇವಾರಿ ಮಾಡಲು ಸಹಾಯ ಮಾಡಿದ್ದಾರೆ ಎಂದು ಆರೋಪಿಸಿತ್ತು.

ಅಲ್ಲದೆ, ಅವರನ್ನು ವಿಶ್ವವಿದ್ಯಾಲಯದ ವಕೀಲರ ಸಮಿತಿಯಿಂದ ತೆಗೆದುಹಾಕಲಾಗಿದೆ ಮತ್ತು ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ಎಂದು ಆರ್‌ಜಿಯುಎಚ್‌ಎಸ್ ಪತ್ರಿಕೆಗಳಲ್ಲಿ ಹೇಳಿಕೆ ನೀಡಿತ್ತು. ಅದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.

English summary
Karnataka High Court came down heavily against RGUHS for filing case against his own panel of advocate
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X