ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಕ್ಕಳ ನಾಪತ್ತೆ ಪ್ರಕರಣ: ಡಿಜಿಪಿಯಿಂದ ಸಮಗ್ರ ವರದಿ ಕೇಳಿದ ಹೈಕೋರ್ಟ್

By Nayana
|
Google Oneindia Kannada News

ಬೆಂಗಳೂರು, ಜು.17: ರಾಜ್ಯದಲ್ಲಿ ಹೆಚ್ಚುತ್ತಿರುವ ಮಕ್ಕಳು ಕಣ್ಮರೆಯಾಗುತ್ತಿರುವ ಪ್ರಕರಣಗಳ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್ 2015ರಿಂದ ಈ ವರೆಗೆ ರಾಜ್ಯದಲ್ಲಿ ಕಾಣೆಯಾಗಿರುವ ಮಕ್ಕಳ ಕುರಿತಂತೆ ಸಮಗ್ರ ವಿವರ ನೀಡುವಂತೆ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರಿಗೆ ಸೂಚನೆ ನೀಡಿದೆ.

ರಾಜ್ಯದಲ್ಲಿ ಮಕ್ಕಳ ಅಪಹರಣ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಅದನ್ನು ನಿಯಂತ್ರಿಸಲು ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೈಕೋರ್ಟ್ ಪ್ರಶ್ನಿಸಿದೆ, ರಾಜ್ಯದಲ್ಲಿ 2015ರಿಂದ ಈವರೆಗೂ ಎಷ್ಟು ಮಕ್ಕಳು ಕಾಣೆಯಾಗಿದ್ದಾರೆ, ಎಷ್ಟು ಪ್ರಕರಣ ದಾಖಲಾಗಿವೆ, ಅವುಗಳ ಪೈಕಿ ಎಷ್ಟು ಮಕ್ಕಳನ್ನು ಪತ್ತೆ ಹೆಚ್ಚಲಾಗಿದೆ ಎಂಬುದರ ಕುರಿತು ವಿವರ ಒದಗಿಸಬೇಕು ಎಂದು ಸೂಚನೆ ನೀಡಿದೆ.

HC asks DGP about children missing in state

ಬೆಂಗಳೂರು: ಮಹಿಳೆ ಅಪಹರಣಕ್ಕೆ ಯತ್ನ: ಓಲಾ ಚಾಲಕನ ಬಂಧನಬೆಂಗಳೂರು: ಮಹಿಳೆ ಅಪಹರಣಕ್ಕೆ ಯತ್ನ: ಓಲಾ ಚಾಲಕನ ಬಂಧನ

ಮಧ್ಯಪ್ರದೇಶ ಮೂಲದ ಬಾಲಕ ರಾಮ್ ಲಖನ್ ನಾಪತ್ತೆ ಪ್ರಕರಣದ ಸಂಬಂಧ ಹೈಕೋರ್ಟ್ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಹೆಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, 2017ರಲ್ಲಿ ನಾಪತ್ತೆಯಾಗಿರುವ ಬಾಲಕನನ್ನು ಹುಡುಕಲು ವಿಫಲರಾಗಿರುವ ಪೊಲೀಸರಿಗೆ ತರಾಟೆ ತೆಗೆದುಕೊಂಡಿತು. ಮಂತ್ರಿಗಳ ಮಕ್ಕಳು ನಾಪತ್ತೆಯಾದರೆ 24 ಗಂಟೆಯಲ್ಲಿ ಹುಡುಕುತ್ತೀರಿ. ಕಾರ್ಮಿಕರ ಮಕ್ಕಳಿಗೆ ನಿರ್ಲಕ್ಷ್ಯ ತೋರುತ್ತೀರಿ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು.

English summary
High court has sought detailed report from Director General of Police on children missing in various districts of the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X