ಮೋದಿ ಮೇಲಿನ ಗೌರವದಿಂದ ಕೃಷ್ಣ ಬಿಜೆಪಿ ಸೇರ್ಪಡೆ: ಯಡಿಯೂರಪ್ಪ
ಕಲಬುರಗಿ, ಫೆಬ್ರವರಿ 4: ಪ್ರಧಾನಿ ಮೋದಿಯವರ ಮೇಲಿನ ಗೌರವದಿಂದಾಗಿ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು, ಬಿಜೆಪಿ ಸೇರ್ಪಡೆಗೊಳ್ಳುತ್ತಿದ್ದಾರೆಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗಷ್ಟೇ ಕಾಂಗ್ರೆಸ್ಸನ್ನು ತೊರೆದಿರುವ ಕೃಷ್ಣ, ಪ್ರಧಾನಿ ಮೋದಿಯವರ ಬಗ್ಗೆ ಇರುವ ಗೌರವದಿಂದ ಅವರು ಬಿಜೆಪಿ ಸೇರುತ್ತಿದ್ದಾರೆ. ಅವರು ಬಂದರೆ ಬಿಜೆಪಿಯು ಮತ್ತಷ್ಟು ಶಕ್ತಿಶಾಲಿಯಾಗಲಿದೆ ಎಂದು ಆಶಿಸಿದ್ದಾರೆ.

ಗುರುವಾರವಷ್ಟೇ (ಫೆಬ್ರವರಿ 3) ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, ಎಸ್.ಎಂ. ಕೃಷ್ಣ ಅವರು ಬಿಜೆಪಿ ಸೇರ್ಪಡೆಗೊಳ್ಳುತ್ತಾರೆಂದು ಹೇಳಿದ್ದರು.












Click it and Unblock the Notifications