ವೈರಲ್ ವಿಡಿಯೋ: ವಿವಾದದ ಸುಳಿಯಲ್ಲಿ ಯಡಿಯೂರಪ್ಪ

Written By:
Subscribe to Oneindia Kannada

ಬೆಂಗಳೂರು, ಜೂನ್, 14: 'ಮಾತು ಮನೆ ಕೆಡಿಸಿತು ತೂತು ಒಲೆ ಕೆಡಿಸಿತು' ಎಂಬ ಗಾದೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರಮನ್ನು ಸದ್ಯ ಕಾಡಲು ಆರಂಭಿಸಿದೆ. ದೂರವಾಣಿಯಲ್ಲಿ ಬಿಎಸ್ ವೈ ಮಾತನಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

"ಈಗಾಗಲೇ 14-15 ಹಿಂದೂ ಯುವಕರನ್ನು ಬಂಧಿಸಿದ್ದೀರಿ, ಕೆಲವರಿಗೆ ಕಿರುಕುಳ ನೀಡಿದ ದಾಖಲೆನೂ ಇದೆ, ಆದರೆ ಮುಂದೆ ಇಂಥ ಸಾಹಸಕ್ಕೆ ಕೈ ಹಾಕಬೇಡಿ, ಅರಸೀಕೆರೆಯಲ್ಲಿ ಪರಿಸ್ಥಿತಿ ನೆಟ್ಟಗಿರಲ್ಲ. ಶಾಂತಿ ಕದಡಿದರೆ ನಾವು ಜವಾಬ್ದಾರರಲ್ಲ" ಎಂದು ಯಡಿಯೂರಪ್ಪ ಹೇಳುತ್ತಿರುವುದು ವಿಡಿಯೋದಲ್ಲಿ ನೀಡಲು ಮತ್ತು ಕೇಳಲು ಸಿಗುತ್ತದೆ. [ಛಿ...ನೇರ ಪ್ರಸಾರದಲ್ಲಿ ಪಾಕ್ ಮುಖಂಡ ಆಡಿದ ಮಾತೇನು?]

bsy

ಬಿಎಸ್ ವೈ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪುರವಾಡ್ ಅವರಿಗೆ ಕರೆ ಮಾಡಿ ಈ ಬಗೆಯಾಗಿ ಮಾತನಾಡಿದ್ದಾರೆ ಎಂಬುದು ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಕಾಳಪ್ಪ ಆರೋಪ.

ಆರ್‌ಎಸ್‌ಎಸ್‌ ಕಾರ್ಯಕರ್ತರೊಬ್ಬರ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿ ಬಿಎಸ್ ವೈ ಹೀಗೆ ಮಾತನಾಡಿದ್ದಾರೆ ಎಂಬುದು ಚರ್ಚೆಯ ವಸ್ತು. ಹಿಂದೂ ಪರ ಸಂಘಟನೆಗಳು ಸಾಮಾಜಿಕ ತಾಣದಲ್ಲಿ ಬಿಎಸ್ ವೈಗೆ ಜೈ ಎಂದಿದ್ದರೆ ಕೆಲವರು ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುವ ವಿಚಾರ ಎಂದು ಕಟುಕಿದ್ದಾರೆ.

ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಹುಲ್ ಕುಮಾರ್ ಶಹಾಪುರವಾಡ್ ಬಿಎಸ್ ವೈ ನನ್ನನ್ನು ದೂರವಾಣಿಯಲ್ಲಿ ಸಂಪರ್ಕಿಸಿಲ್ಲ ಎಂದು ಹೇಳಿದ್ದಾರೆ.[ಲಂಡನ್ ನಲ್ಲಿ ಮಗನ ಜತೆ ಮ್ಯಾಚ್ ನೋಡಿದ ಮಲ್ಯ]

ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಕಾಳಪ್ಪ ಈ ವಿಡಿಯೋವನ್ನು ತಮ್ಮ ಫೇಸ್ ಬುಕ್ ನಲ್ಲಿ ಹಾಕಿದ್ದು ವೈರಲ್ ಆಗಿದೆ. ಇದು ನಿಜಕ್ಕೂ ಬಿಎಸ್ ಯಡಿಯುರಪ್ಪ ಮಾತನಾಡಿದ್ದೋ ? ಅಥವಾ ನಕಲಿ ವಿಡಿಯೋ ಆಗಿರಬಹುದಾ ಎಂಬುದು ಸರಿಯಾದ ತನಿಖೆಯಿಂದ ಮಾತ್ರ ಗೊತ್ತಾಗಲು ಸಾಧ್ಯ.

ಬಿಎಸ್ ವೈ ಬಂಧನ ಮಾಡಿ
ಪ್ರಕರಣಕ್ಕೆ ಸಂಬಂಧಿಸಿ ಹೋರಾಟಕ್ಕೆ ಮುಂದಾಗಿರುವ ಆಮ್ ಆದ್ಮಿ ಪಾರ್ಟಿ ಬೆದರಿಕೆ ಹಾಕಿದ ಆರೋಪದಲ್ಲಿ ಬಿ ಎಸ್ ಯಡಿಯೂರಪ್ಪ ಅವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ಡಿಐಜಿ ಓಂಪ್ರಕಾಶ್ ಅವರಿಗೆ ಮನವಿ ಸಲ್ಲಿಕೆ ಮಾಡಿದೆ. ಅಲ್ಲದೇ ಮಂಗಳವಾರ ಸಂಜೆ ಮಲ್ಲೇಶ್ವರಂ ಬಿಜೆಪಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BJP Karnataka President, MP B S Yeddyurappa has landed in a controversy after a video purportedly showing him telling a police official not to harass some Hindu youths in a murder case in Hassan district went viral. Congress Spokesperson Brijesh Kalappa, who posted the video on his Facebook, has accused Yeddyurappa of trying to "influence" the course of investigation into the murder case.
Please Wait while comments are loading...