ದೇಶದ ಅತಿ ತೂಕದ ಮಗು ಹೆತ್ತ ಹಾಸನದ ತಾಯಿ!

By: ನಮ್ಮ ಪ್ರತಿನಿಧಿ
Subscribe to Oneindia Kannada

ಹಾಸನ, ಮೇ 24:ಯಾವುದೇ ಮಗು ಹುಟ್ಟಿದ ಕೂಡಲೆ ಕೇಳುವ ಸಾಮಾನ್ಯ ಪ್ರಶ್ನೆ ಇದು - "ಮಗು ಎಷ್ಟು ಕೆಜಿ (ಪೌಂಡ್) ಇದೆ? ತಾಯಿ ಮಗು ಹುಷಾರಾಗಿದ್ದಾರೆ ತಾನೆ?" "ಎರಡೂ ಮುಕ್ಕಾಲು ಕೇಜಿ." "ಓಹೋ, ಎರಡೂ ಮುಕ್ಕಾಲು ಕೆಜೀನಾ, ಪರವಾಗಿಲ್ಲ ನಾರ್ಮಲ್ ಆಗಿದೆ."

ಹೀಗೆ ಸಾಗುತ್ತದೆ ಮಾತುಕತೆ. ಆದರೆ ಇಲ್ಲೊಬ್ಬ ಮಹಾತಾಯಿಯೊಬ್ಬಳು ಎರಡೂ ಮುಕ್ಕಾಲಲ್ಲ, ಏಳುಕಾಲು ಕೆಜಿ ತೂಕದ ಮಗುವಿಗೆ ಜನ್ಮ ನೀಡಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾಳೆ! ಹಾಗೆಯೆ, ದಾಖಲೆಯನ್ನೂ ಸೃಷ್ಟಿಸಿದ್ದಾಳೆ. ಇದೇ ಮೊದಲಿಗೆ ದೇಶದಲ್ಲಿ ಜನಿಸಿದ ಅತಿ ಹೆಚ್ಚು ಭಾರದ ಮಗು ಇದಾಗಿದೆಯಂತೆ.

ಬೇಲೂರು ತಾಲೂಕು ದೊಡ್ಡಿಹಳ್ಳಿ ಗ್ರಾಮದ ಅರುಣ್ ಅವರ ಪತ್ನಿ ನಂದಿನಿ ಮಗುವಿಗೆ ಜನ್ಮ ನೀಡಿದ ಮಹಾತಾಯಿ. ಸೋಮವಾರ ಬೆಳಗ್ಗೆ ತನ್ನ ದ್ವಿಚಕ್ರ ವಾಹನದಲ್ಲೇ ಹೆರಿಗೆಗಾಗಿ ಹಾಸನದ ಸರ್ಕಾರಿ ಆಸ್ಪತ್ರೆಗೆ ಕರೆ ತರಲಾಗಿತ್ತು.

Hassan : A Woman gives birth to a 7.5 kilogram baby girl, both mother and baby are fine.

ಹೆಚ್ಚಿನ ನೋವು ಕಾಣಿಸಿದ್ದರಿಂದ ವೈದ್ಯರು ನಾರ್ಮಲ್ ಹೆರಿಗೆ ಮಾಡಲು ಸಾಧ್ಯವಿಲ್ಲ ಸಿಜರಿನ್ ಮೂಲಕ ಮಗುವನ್ನು ಹೊರತೆಗೆಯಬೇಕಾಗುತ್ತದೆ ಎಂದು ಹೇಳಿದ್ದಾರೆ.[ಪುಟ್ಟಬಸಮ್ಮನ ಜಗಳದಿಂದ ಅಂಗನವಾಡಿ ಕೂಸು ಬಡ!]

ಅದರಂತೆ ಸಂಜೆ 7 ಗಂಟೆಗೆ ಮಗುವನ್ನು ಸಿ ಸೆಕ್ಷನ್ ಮೂಲಕ ಹೊರತೆಗೆಯಲಾಗಿದ್ದು, ಮಗು ಹೆಣ್ಣಾಗಿದ್ದು, ತೂಕವನ್ನು ನೋಡಿ ವೈದ್ಯರೇ ಅಚ್ಚರಿಗೊಂಡಿದ್ದಾರೆ.

Hassan : A Woman gives birth to a 7.5 kilogram baby girl, both mother and baby are fine.

ಹುಟ್ಟಿದಾಗ 7 ಕೆ.ಜಿ. 250 ಗ್ರಾಂ ಇತ್ತಾದರೂ ಇದೀಗ 6 ಕೆ.ಜಿ. 800 ಗ್ರಾಂಗೆ ಇಳಿದಿದೆ. ವಿಶ್ವದಲ್ಲಿಯೇ ಆಗತಾನೆ ಹುಟ್ಟಿದ ಮಗುವಿನ ತೂಕ 10 ಕೆ.ಜಿ. 200 ಗ್ರಾಂ ಇದ್ದಿದ್ದು, ಗಿನ್ನಿಸ್ ದಾಖಲೆಯಲ್ಲಿದೆ. ಇಷ್ಟೊಂದು ತೂಕದ ಮಗು ಜನ್ಮ ತಾಳಿರುವುದು ದೇಶದಲ್ಲೆ ಇದೆ ಮೊದಲಂತೆ. ಇದೀಗ ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ.

Hassan : A Woman gives birth to a 7.5 kilogram baby girl, both mother and baby are fine.

ಮಗುವಿನ ತಂದೆ ಅರುಣ್ ಮಾತನಾಡಿ, ದೇಶದಲ್ಲೆ ಅತ್ಯಂತ ತೂಕದ ಮಗುವೆಂದು ತಿಳಿದು ಬಂದಿರುವುದು ನನಗೆ ಸಂತೋಷ ತಂದಿದೆ. ವೈದ್ಯರಾದ ಕುಮಾರ್ ಅತ್ಯಂತ ಜಾಗರೂರುಕತೆಯಿಂದ ಚಿಕಿತ್ಸೆ ನೀಡಿದ್ದಾರೆ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಸಾಮಾನ್ಯವಾಗಿ ನವಜಾತ ಶಿಶುವಿನ ತೂಕ 7.5 ಪೌಂಡ್(3.5 ಕೆಜಿ) ತೂಕ ಇರುತ್ತದೆ ಅಥವಾ 2.5 ಕೆಜಿ ತೂಕದಿಂದ 4.5 ಕೆಜಿ ತನಕ ಇರಬಹುದು. ಹೆಣ್ಣುಶಿಶುವಿಗೆ ಹೋಲಿಸಿದ ಗಂಡು ಶಿಶುವಿನ ತೂಕ ಹೆಚ್ಚಿರುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A woman from Doddihalli village in Belur taluk in Hassan district has given birth to abnormal size baby on Monday, 23rd May. It is believed that it is the biggest newly born child in India. Both mother and child are healthy.
Please Wait while comments are loading...