ಬೆಳಗಾವಿ, ಮಡಿಕೇರಿ, ಕುಡ್ಲಕ್ಕೆ ಹಾರ್ಲೆ 'ಬೈಕ್ ಗಳ ಟೂರ್'

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 13: ಕಳೆದ ಫೆಬ್ರವರಿಯಲ್ಲಿ ಎಚ್.ಒ.ಜಿ Rally ಮತ್ತು ಬೈಕ್ ವೀಕ್ ಅನ್ನು ಯಶಸ್ವಿಯಾಗಿ ಮುಗಿಸಿದ ಬೆನ್ನಲ್ಲೇ ಹಾರ್ಲೆ ಡೇವಿಡ್‍ಸನ್ ಇದೀಗ ಮೊದಲ ಬಾರಿಗೆ ಮೊಬೈಲ್ ಡೀಲರ್ ಶಿಪ್ ಅನ್ನು ಆರಂಭಿಸಿದೆ. 'ಲೆಜೆಂಡ್ ಆನ್ ಟೂರ್' ಎಂಬ ಹೆಸರಿನಲ್ಲಿ ಕರ್ನಾಟಕದ ವಿವಿಧ ನಗರಗಳಲ್ಲಿ ಡೀಲರ್ ಶಿಪ್ ಅಭಿಯಾನ ಬುಧವಾರದಿಂದ ಆರಂಭಗೊಂಡಿದೆ.

ದಿಲೀಪ್ ಛಾಬ್ರಿಯಾ ಅವರು ವಿನ್ಯಾಸಗೊಳಿಸಿರುವ ಈ 'ಲೆಜೆಂಡ್ ಆನ್ ಟೂರ್' ಹಾರ್ಲೆ ಡೀಲರ್ ಶಿಪ್ ವಾಹನವು ಕರ್ನಾಟಕದ ಬೆಳಗಾವಿ, ಮಂಗಳೂರು, ಉಡುಪಿ, ಮಡಿಕೇರಿ, ಬೆಂಗಳೂರು ಮತ್ತು ಮೈಸೂರು ನಗರಗಳಲ್ಲಿ ಏಪ್ರಿಲ್ 13 ರಿಂದ 20 ರವರೆಗೆ ಸಂಚರಿಸಲಿದೆ. [ಜನಪ್ರಿಯ ಮಹಿಳಾ ಬೈಕರ್ ಇನ್ನಿಲ್ಲ]

ಕರ್ನಾಟಕದ ನಂತರ ತಮಿಳುನಾಡು ಮತ್ತು ದೇಶದ ಇತರೆ ರಾಜ್ಯಗಳಾದ ಕೇರಳ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ರಾಜಸ್ಥಾನ, ಪಂಜಾಬ್, ಗುಜರಾತ್ ಮತ್ತು ಮಧ್ಯಪ್ರದೇಶಗಳಲ್ಲಿ ಸಂಚರಿಸಲಿದೆ.[ಯುವ ಪೀಳಿಗೆಯ ಕನಸಿನ ಹೋಂಡಾ ಸಿಬಿ ಹಾರ್ನೆಟ್ 160ಆರ್]

Legend on Tour in Karnataka

ಲೆಜೆಂಡ್ ಆನ್ ಟೂರ್'ನ ಪ್ರಮುಖ ಉದ್ದೇಶ: ಕಂಪನಿ ವಿವಿಧ ವಲಯಗಳಲ್ಲಿ ಹೊಸ ಗ್ರಾಹಕರನ್ನು ತಲುಪಲು ಡೀಲರ್ ಗಳಿಗೆ ಸಹಕಾರಿಯಾಗುವುದು. ಈ ಡೀಲರ್ ಶಿಪ್ ವಾಹನ ಹೋದ ಕಡೆಯಲ್ಲೆಲ್ಲಾ ಹ್ಯಾರ್ಲೆ ಡೇವಿಡ್ಸನ್ ನ ಶ್ರೀಮಂತ ಪರಂಪರೆಯನ್ನು ಪರಿಚಯಿಸಲಿದೆ.[1000 ಕ್ಕೂ ಅಧಿಕ ಹಾರ್ಲೆ ಡೇವಿಡ್ಸನ್ ಮಿಂಚು!]

ಇತ್ತೀಚೆಗೆ ಬಿಡುಗಡೆಯಾಗಿರುವ ಹಾರ್ಲೆ-ಡೇವಿಡ್‍ಸನ್ 1200 ಸೇರಿದಂತೆ ಒಟ್ಟು 8 ಹ್ಯಾರ್ಲೆ ಬೈಕ್ ಗಳನ್ನು ಈ ವಾಹನದಲ್ಲಿ ಅನಾವರಣಗೊಳಿಸಲಾಗುತ್ತಿದೆ. ಇದಲ್ಲದೇ ಈ ಮೋಟರ್ ಸೈಕಲ್ ಗಳ ಟೆಸ್ಟ್ ಡ್ರೈವ್ ಗೂ ಅವಕಾಶ ಇರಲಿದೆ. ಹಾರ್ಲೆ-ಡೇವಿಡ್‍ಸನ್ ಬಿಡಿ ಭಾಗಗಳು ಮತ್ತು ಇತರೆ ಅಕ್ಸೆಸರಿಗಳೂ ಇಲ್ಲಿ ಲಭ್ಯವಾಗಲಿವೆ. ಈ ಮೂಲಕ ಮೋಟರ್ ಸೈಕಲ್ ಪ್ರೇಮಿಗಳು ಮೊದಲ ಅನುಭವವನ್ನು ಪಡೆಯಬಹುದಾಗಿದೆ.

ಲೆಜೆಂಡ್ ಆನ್ ಟೂರ್ ಬಗ್ಗೆ ಮಾತನಾಡಿದ ಟಸ್ಕರ್ ಹ್ಯಾರ್ಲೆ ಡೇವಿಡ್‍ಸನ್‍ನ ಡೀಲರ್ ಪ್ರಿನ್ಸಿಪಲ್ ಶ್ರೀನಿವಾಸ ರೆಡ್ಡಿ ಅವರು, 'ಹಾರ್ಲೆ ಡೇವಿಡ್‍ಸನ್ ಪ್ರತಿ ಸಂದರ್ಭದಲ್ಲೂ ಹೊಸ ಬೈಕ್ ರೈಡರ್ ಗಳಿಗೆ ಹೊಸತನದ ಮಾರ್ಗವನ್ನು ಪರಿಚಯಿಸುತ್ತಾ ಬರುತ್ತಿದೆ. ಈ ಹಾರ್ಲೆ ಡೇವಿಡ್‍ಸನ್ ಹೊಂದಬೇಕೆಂಬ ಆಕಾಂಕ್ಷೆ ಹೊಂದಿರುವ ಗ್ರಾಹಕರಿಗೆ ಈ ಮೊಬೈಲ್ ಡೀಲರ್ ಶಿಪ್ ಒಂದು ಉತ್ತಮ ವೇದಿಕೆಯಾಗಲಿದೆ.

ಈ ಮೂಲಕ ಮೊಬೈಲ್ ಡೀಲರ್ ಶಿಪ್ ಸಂಚರಿಸುವ ನಗರಗಳಲ್ಲಿ ನಾವು ಗಣನೀಯ ಪ್ರಮಾಣದಲ್ಲಿ ಗ್ರಾಹಕರ ಸಂಖ್ಯೆಯನ್ನು ವಿಸ್ತರಣೆ ಆಗುವುದನ್ನು ಕಾಣುತ್ತೇವೆ'' ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Unveiled at 4th India H.O.G. Rally and India Bike Week in February, 2016, Harley-Davidson first mobile dealership on wheels Legend on Tour made its debut in Karnataka starting April 13, 2016.
Please Wait while comments are loading...