Get Updates
Get notified of breaking news, exclusive insights, and must-see stories!

Hampi Utsav 2023 : ಜನವರಿ 27 ರಂದು ಬಸವರಾಜ ಬೊಮ್ಮಾಯಿ ಅವರಿಂದ ಹಂಪಿ ಉತ್ಸವಕ್ಕೆ ಚಾಲನೆ: ಶಶಿಕಲಾ ಜೊಲ್ಲೆ

ಬೆಳಗಾವಿ,ಡಿಸೆಂಬರ್ 27: ಜನವರಿ 27 ರಂದು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಹಂಪಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎಂದು ಸಚಿವರಾದ ಶಶಿಕಲಾ ಜೊಲ್ಲೆ ಹೇಳಿದರು.

ಬುಧವಾರ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ವಿಜಯನಗರ ಜಿಲ್ಲಾಡಳಿತದ ಅಧಿಕಾರಿಗಳ ಜೊತೆ ಸಭೆ ನಡೆಸಿ ಹಂಪಿ ಉತ್ಸವದ ಸಿದ್ದತೆಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಪಡೆದುಕೊಂಡರು. ಕೋವಿಡ್‌ ನಂತರ ಹಾಗೂ ವಿಜಯನಗರ ಜಿಲ್ಲೆ ಹೊಸದಾಗಿ ನಿರ್ಮಾಣವಾದ ನಂತರ ನಡೆಸುತ್ತಿರುವ ಉತ್ಸವ ಇದಾಗಿದೆ. ಈ ಹಿನ್ನಲೆಯಲ್ಲಿ ಈಗಾಗಲೇ ಅದ್ದೂರಿಯಾಗಿ ಉತ್ಸವ ಆಚರಣೆಗೆ ಸೂಚನೆ ನೀಡಲಾಗಿತ್ತು. ಇದಕ್ಕೆ ಅಗತ್ಯ ಸಿದ್ದತೆಗಳನ್ನು ಚುರುಕುಗೊಳಿಸುವಂತೆ ಇಂದು ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ಕಳೆದ ಬಾರಿ ವಿಜಯನಗರ ಜಿಲ್ಲೆಯಲ್ಲಿ ನಡೆಸಿದ ಸಭೆಯಲ್ಲಿ ಜನವರಿ 27, 28 ಮತ್ತು 29 ರಂದು ಹಂಪಿ ಉತ್ಸವ ಆಚರಣೆಗೆ ದಿನಾಂಕ ನಿಗದಿಪಡಿಸಲಾಗಿತ್ತು. ಇಂದು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿದ್ದು, ಅವರು ಜನವರಿ 27 ರಂದು ಉದ್ಘಾಟನೆ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ ಎಂದರು.

Hampi Festival Launched By Basavaraj Bommai On January 27 Says Shashikala Jolle

ದಸರಾ ಮಾದರಿಯ ದೀಪಾಲಂಕಾರ

ದಸರಾ ಮಾದರಿಯಲ್ಲಿ ಹಂಪಿ ಹಾಗೂ ಹೊಸಪೇಟೆಯಲ್ಲಿ ದೀಪದ ಆಲಂಕಾರ ಮಾಡುವ ಬಗ್ಗೆ ವಿಸ್ತ್ರುತವಾಗಿ ಚರ್ಚಿಸಲಾಯಿತು. ಹೊಸದಾಗಿ ದೀಪಾಲಂಕಾರ ಸಮಿತಿಯನ್ನು ರಚನೆ ಮಾಡಲಾಗಿದ್ದು ಸದರಿ ಸಮಿತಿಯ ಸದಸ್ಯರು ಹೊಸಪೇಟೆ, ಕಮಲಾಪುರ, ಹಂಪಿ ಈ ಮೂರು ಸ್ಥಳಗಳ ಮುಖ್ಯ ರಸ್ತೆಗಳಲ್ಲಿ ಪ್ರಮುಖ ಸ್ಥಳಗಳಲ್ಲಿ ವಿಶೇಷ ದೀಪಾಲಂಕಾರ ಮಾಡಲು ಪ್ಲಾನ್‌ ತಯಾರಿಸಿ ಪ್ರಸ್ತುತ ಪಡಿಸಲು ಸೂಚನೆ ನೀಡಲಾಯಿತು.

ಸ್ಥಳೀಯ ಕಲಾತಂಡಗಳಿಗೆ ಹೆಚ್ಚಿನ ಆದ್ಯತೆಗೆ ಸೂಚನೆ

ಹಂಪಿ ಉತ್ಸವದಲ್ಲಿ ಪ್ರದರ್ಶನಕ್ಕೆ ಅವಕಾಶ ನೀಡುವಂತೆ ಕೋರಿ ಸುಮಾರು 1036 ಅರ್ಜಿಗಳು ಸಲ್ಲಿಕೆಯಾಗಿವೆ. ಇವುಗಳ ಆಯ್ಕೆಗೆ ಸಮಿತಿಯನ್ನು ರಚಿಸಲಾಗಿದ್ದು ಇದುವರೆಗೂ ಅವಕಾಶ ಸಿಗದ ಸ್ಥಳೀಯ ಕಲಾವಿದರುಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು ಎಂದು ಸಚಿವರು ಸೂಚನೆ ನೀಡಿದರು.

Hampi Festival Launched By Basavaraj Bommai On January 27 Says Shashikala Jolle

ಕಾನೂನು ಸುವ್ಯವಸ್ಥೆಗೆ ಅಗತ್ಯ ತಯಾರಿ

ಲಕ್ಷಾಂತರ ಜನರು ಸೇರುವ ಈ ಉತ್ಸವದಲ್ಲಿ ಅಗತ್ಯ ಕಾನೂನು ಸುವ್ಯವಸ್ಥೆಗೆ ವ್ಯವಸ್ಥೆ ಮಾಡಬೇಕು. ಹಂಪಿ ಪ್ರದೇಶದಲ್ಲಿ ಸಂಪೂರ್ಣ ಸಿ.ಸಿ ಟಿವಿಗಳನ್ನು ಅಳವಡಿಸಬೇಕು. ಹಂಪಿಗೆ ಹೋಗುವ ಮಾರ್ಗವಾದ ಕಡ್ಡಿರಾಂಪುರ ಸ್ವಾಗತ ಕಮಾನಿನಿಂದ ಕಡ್ಡಿರಾಂಪೂರ, ಕೃಷ್ಣಾ ದೇವಸ್ಥಾನ, ಉದ್ದಾನ ವೀರಭದ್ರೇಶ್ವರ ದೇವಸ್ಥಾನದ ಮಾರ್ಗದ ಮೂಲಕ ಕಮಲಾಪುರದವರೆಗೆ ಏಕಮುಖ ಮಾರ್ಗ ಸಂಚಾರ ವ್ಯವಸ್ಥೆ ಮಾಡುವುದು. ಹಂಪಿ ಪ್ರದೇಶದಲ್ಲಿ ಅವಶ್ಯವಿದ್ದ ಕಡೆಗಳಲ್ಲಿ ಶಾಶ್ವತವಾಗಿ ಸಂಚಾರ ಸಂಕೇತಗಳನ್ನು ಅಳವಡಿಸುವುದು. ಸುವ್ಯವಸ್ಥಿತ ವಾಹನ ನಿಲುಗಡೆಗೆ ಅವಕಾಶ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

ರಾಜ್ಯ ಮತ್ತು ರಾಷ್ಟ್ರಮಟ್ಟದ ಕಲಾತಂಡಗಳಿಂದ ಹೊಸಪೇಟೆ ನಗರದಲ್ಲಿ ವಸಂತವೈಭವ ಮೆರವಣಿಗೆ ಕಾರ್ಯಕ್ರಮ, ತುಂಗಾನದಿಯ ತಟದಲ್ಲಿ ತುಂಗಾರತಿ, ವಿಜಯನಗರ ವೈಭವದ ಕುರಿತು ಸುಮಾರು 300 ಕಲಾವಿದರನ್ನೊಳಗೊಂಡ ಧ್ವನಿ ಮತ್ತು ಬೆಳಕು ಕಾರ್ಯಕ್ರಮ, ಹಂಪಿ ಬೈ ಸ್ಕೈ, ವಿಭಿನ್ನ ರೀತಿಯ ಫಲಪುಷ್ಪ ಪ್ರದರ್ಶನ, ಅಶ್ವದಳ ಪ್ರದರ್ಶನ, ಕುಸ್ತಿ ಹಾಗೂ ಇತರೆ ಗ್ರಾಮೀಣ ಕ್ರೀಡೆಗಳ ಪ್ರದರ್ಶನಗಳನ್ನು ಆಯೋಜಿಸಲಾಗಿದೆ ಎಂದರು.

ಇನ್ನೂ ಸಭೆಯಲ್ಲಿ ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ವೆಂಕಟೇಶ್‌ ಸೇರಿದಂತೆ ಜಿಲ್ಲಾಡಳಿತದ ಅಧಿಕಾರಿಗಳು ಉಪಸ್ಥಿತರಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+