H1N1: ರಾಜ್ಯದಲ್ಲಿ ಹಂದಿ ಜ್ವರ ಪ್ರಕರಣಗಳ ಸಂಖ್ಯೆ ಹೆಚ್ಚಳ, ಆರೋಗ್ಯ ಇಲಾಖೆ ಹೈ ಅಲರ್ಟ್
ಬೆಂಗಳೂರು, ಆಗಸ್ಟ್ 23: ಈಗಾಗಲೇ ಕೋವಿಡ್ 19 ಇಡೀ ವಿಶ್ವವನ್ನೇ ತಲ್ಲಣಗೊಳಿಸಿತ್ತು. ಇದೀಗ ಕರ್ನಾಟಕ ರಾಜ್ಯದಲ್ಲಿ H1N1 ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ ಎನ್ನುವ ಶಾಕಿಂಗ್ ವರದಿ ಹೊರಬಿದ್ದಿದ್ದು, ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಮಾರ್ಗಸೂಚಿಗಳನ್ನ ಹೊರಡಿಸಿದೆ. ಹಗಾದ್ರೆ ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಗಳು ದಾಖಲಾಗಿವೆ ಹಾಗೂ ಪಾಲಿಸಬೇಕಾದ ನಿಯಮಗಳೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಹಂದಿಜ್ವರ ಪ್ರಕರಣ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಈ ವರ್ಷದ ಜನವರಿಯಿಂದ ಆಗಸ್ಟ್ ತಿಂಗಳ ಅವಧಿಯಲ್ಲಿ ರಾಜ್ಯಾದ್ಯಂತ ಒಟ್ಟು 4,125 ಸೋಂಕಿತ ಕೇಸ್‌ಗಳು ದೃಢಪಟ್ಟಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಪೈಕಿ ರಾಜ್ಯ ರಾಜಧಾನಿ ಬೆಂಗಳೂರಿನ ಪಾಲೇ ಹೆಚ್ಚಿದೆ.

ಸೋಂಕು ವ್ಯಾಪಕವಾಗಿ ಹರಡದಂತೆ ತಡೆಯಲು ರಾಜ್ಯದ ಆರೋಗ್ಯ ಇಲಾಖೆ ತಕ್ಷಣದಿಂದ ಜಾರಿಗೆ ಬರುವಂತೆ ಮುನ್ನೆಚ್ಚರಿಕಾ ಕ್ರಮವಾಗಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಹಾಗಾದ್ರೆ ಅವುಗಳು ಯಾವುವು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
ಆರೋಗ್ಯ ಇಲಾಖೆ ಹೊರಡಿಸಿದ ಮಾರ್ಗಸೂಚಿಗಳು
* ಸೋಂಕು ದೃಢಪಟ್ಟವರು ಅಥವಾ ಶಂಕಿತರು ಕಡ್ಡಾಯವಾಗಿ ಮನೆಯಲ್ಲೇ ಪ್ರತ್ಯೇಕವಾಗಿ ಇರಬೇಕು.
* ಸಾರ್ವಜನಿಕ ಸಂಪರ್ಕ ತಪ್ಪಿಸಲು ಮಾಸ್ಕ್ ಧರಿಸುವುದು ಕಡ್ಡಾಯ.
* ಸಾಬೂನು ಅಥವಾ ಸ್ಯಾನಿಟೈಸರ್ ಬಳಸಿ ಕೈಗಳನ್ನು ಸ್ವಚ್ಛಗೊಳಿಸಬೇಕು.
* ಕುಡಿಯಲು ಬಿಸಿ ನೀರನ್ನೇ ಉಪಯೋಗಿಸುವುದು ಒಳಿತು.
* ಕೈಗಳಲ್ಲಿ ಕಣ್ಣು, ಮೂಗು ಅಥವಾ ಬಾಯಿಯನ್ನ ಪದೇ ಪದೇ ಮುಟ್ಟಬಾರದು.
* ರೋಗ ಲಕ್ಷಣಗಳು ಇದ್ದರೆ ಸ್ವಯಂ ಚಿಕಿತ್ಸೆ ಪಡೆಯದೆ ವೈದ್ಯರ ಬಳಿ ತಪಾಸಣೆ ನಡೆಸಬೇಕು.
* ಶೀತ, ಜ್ವರದ ಲಕ್ಷಣ ಇದ್ದರೆ ಇತರರೊಂದಿಗೆ ಶೇಕ್ ಹ್ಯಾಂಡ್ ಮಾಡಬಾರದು.
* ಕೆಮ್ಮುವಾಗ ಅಥವಾ ಸೀನುವಾಗ ಅಡ್ಡಲಾದಿ ಬಟ್ಟೆ ಅಥವಾ ಕರವಸ್ತ್ರವನ್ನು ಇಟ್ಟುಕೊಳ್ಳಬೇಕು.
* ಜನಸಂದಣಿ ಇರುವ ಸ್ಥಳಗಳಿಂದ ದೂರ ಇರಬೇಕು.
ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣ ದಾಖಲು?
* ಬೆಂಗಳೂರು ಜಿಬಿಎ - 2033 ಕೇಸ್
* ಬೆಂಗಳೂರು ನಗರ - 982 ಕೇಸ್
* ಮೈಸೂರು - 184 ಕೇಸ್
* ಉಡುಪಿ - 293 ಕೇಸ್
* ದಕ್ಷಿಣ ಕನ್ನಡ - 87 ಕೇಸ್
* ಬಳ್ಳಾರಿ - 51 ಕೇಸ್
* ಬೆಳಗಾವಿ - 45 ಕೇಸ್
* ಮಂಡ್ಯ - 31 ಕೇಸ್
* ಹಾವೇರಿ - 26 ಕೇಸ್
* ಬೆಂಗಳೂರು ಗ್ರಾಮಾಂತರ - 26 ಕೇಸ್
* ಬೆಂಗಳೂರು ದಕ್ಷಿಣ - 26 ಕೇಸ್
* ಚಾಮರಾಜ ನಗರ - 20 ಕೇಸ್
* ಶಿವಮೊಗ್ಗ - 91 ಕೇಸ್
* ಉತ್ತರ ಕನ್ನಡ - 41 ಕೇಸ್
* ದಾವಣಗೆರೆ - 23 ಕೇಸ್


Click it and Unblock the Notifications
