H.Vishwanath: ಮುಡಾ - ಸ್ನೇಹಮಯಿ ಕೃಷ್ಣ ಬಗ್ಗೆ ಹೆಚ್‌. ವಿಶ್ವನಾಥ್‌ ಸ್ಫೋಟಕ ಹೇಳಿಕೆ, ಏನದು

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೆ ಗಂಭೀರ ಆರೋಪಗಳು ಕೇಳಿ ಬಂದಿದ್ದು, ವಿಧಾನಪರಿಷತ್ ಸದಸ್ಯ ಎಚ್‌. ವಿಶ್ವನಾಥ್‌ ಅವರು ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಮುಡಾ ಹಗರಣವನ್ನು ಬಯಲಿಗೆ ಎಳೆಯುವಲ್ಲಿ ಎಚ್. ವಿಶ್ವನಾಥ್ ಅವರು ಮುಂದಾಳತ್ವ ವಹಿಸಿದ್ದರು.

ಅಲ್ಲದೆ ಮುಡಾ ಹಗರಣ ವಿಚಾರದಲ್ಲಿ ಹಲವು ವಿಷಯಗಳ ಬಗ್ಗೆ ಎಚ್‌. ವಿಶ್ವನಾಥ್‌ ಅವರು ಇದೀಗ ಮಾತನಾಡಿದ್ದು, ಹೊಸ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಮುಡಾ ವಿಚಾರವನ್ನು ಮುಚ್ಚಿ ಹಾಕುವ ಪ್ರಯತ್ನಗಳು ನಡೆಯುತ್ತಿದೆ ಎನ್ನುವುದಕ್ಕೆ ಸಂಬಂಧಿಸಿದಂತೆ ಮಹತ್ವದ ಅಪ್ಡೇಟ್ಸ್‌ಗಳು ಆಗುತ್ತಿವೆ. ಇದೇ ಸಂದರ್ಭದಲ್ಲಿ ಎಚ್‌. ವಿಶ್ವನಾಥ್‌ ಅವರು ಸ್ಫೋಟಕ ಮಾಹಿತಿ ಹಂಚಿಕೊಂಡಿದ್ದಾರೆ.

H Vishwanath s explosive statement about Muda - Snehamayikrishna what is it

ಮುಡಾ ಹಗರಣದಕ್ಕೆ ಸಂಬಂಧಿಸಿದಂತೆ ದೂರುದಾರರಾದ ಸ್ನೇಹಮಯಿಕೃಷ್ಣ ಅವರ ಮೇಲೆ ಆಮಿಷ ಪ್ರಯೋಗ ಮಾಡಲಾಗುತ್ತಿದೆ ಎನ್ನುವ ಆರೋಪವೂ ಕೇಳಿ ಬಂದಿದೆ. ಇದರ ಬೆನ್ನಲ್ಲೇ ವಿಧಾನಪರಿಷತ್‌ ಸದಸ್ಯರಾದ ಎಚ್ ವಿಶ್ವನಾಥ್ ಅವರು ನೀಡಿರುವ ಹೇಳಿಕೆಯು ಮಹತ್ವ ಪಡೆದುಕೊಂಡಿದೆ.

ಮುಡಾ ಹಗರಣದ ಸಂಕಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇನ್ನಿಲ್ಲದಂತೆ ತೊಡಕಾಗುತ್ತಿದ್ದು, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇದೀಗ ಎಚ್‌. ವಿಶ್ವನಾಥ್‌ ಅವರು ಮುಡಾ ಹಗರಣ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಮುಡಾದಲ್ಲಿ ಆಗಿರುವ ಹಗರಣಗಳನ್ನ ಈಚೆಗೆ ತರುವ ಹೋರಾಟ ಮಾಡಲಾಗುತ್ತಿದೆ ಎಂದು ಎಚ್. ವಿಶ್ವನಾಥ್‌ ಅವರು ಹೇಳಿದ್ದಾರೆ. ಮುಂದುವರಿದು ಸ್ನೇಹಮಯಿಕೃಷ್ಣಗೆ ಅವರಿಗೆ ಅಮಿಷವೊಡ್ಡುತ್ತಿರುವುದು ಸತ್ಯ ಇದೆ. ಈ ವಿಚಾರದಲ್ಲಿ ಬಹಳ ಜನ ಬಂದು ರಿವರ್ಸ್ ಗೇರ್ ಹಾಕಿಕೊಂಡು ಹೋಗಿದ್ದಾರೆ.

ಅವನು ಬಡವ ಆದರೂ, ಇವರ ಯಾವುದೇ ಆಮಿಷಕ್ಕೆ ಒಳಗಾಗಿಲ್ಲ. ಇನ್ನು ಮುಡಾ ಹಗರಣದ ವಿಚಾರದಲ್ಲಿ ಕೇಸ್‌ ನೀಡುರುವ ಸ್ನೇಹಮಯಿಕೃಷ್ಣಗೆ ಸರ್ಕಾರದ ರಕ್ಷಣೆ ಕೊಡ್ತಿಲ್ಲ. ಸಮಾಜವೇ ಅವರಿಗೆ ರಕ್ಷಣೆ ಕೊಡಬೇಕು. ಸ್ನೇಹಮಯಿಕೃಷ್ಣಗೆ ಅವರಿಗೆ ಸಮಾಜ, ಸಾರ್ವಜನಿಕರು ಅವರ ಬೆಂಬಲಕ್ಕೆ ನಿಲ್ಲಬೇಕು ಎಂದು ವಿಶ್ವನಾಥ್‌ ಅವರು ಆಗ್ರಹಿಸಿದ್ದಾರೆ.

ಈ ಮೂಲಕ ಮುಡಾ ವಿಚಾರದಲ್ಲಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿಕೃಷ್ಣಗೆ ಆಮಿಷವೊಡ್ಡಲಾಗುತ್ತಿದೆ ಎನ್ನುವುದಕ್ಕೆ ಪುಷ್ಠಿ ನೀಡಿದಂತೆ ಆಗಿದೆ. ಮುಡಾ ಹಗರಣದ ವಿಚಾರದಲ್ಲಿ ಸ್ನೇಹಮಯಿ ಕೃಷ್ಣ ಅವರು ಪ್ರಮುಖ ದೂರುದಾರರಾಗಿದ್ದಾರೆ.

ಆದರೆ, ಇವರಿಗೆ ಸರ್ಕಾರ ಹಾಗೂ ಪ್ರಭಾವಿಗಳಿಂದ ಆಮಿಷ ಹಾಗೂ ಒತ್ತಡ ಇದೆ ಎನ್ನುವ ವಿಚಾರ ಪದೇ ಪದೇ ಚರ್ಚೆಯ ಮುನ್ನೆಲೆಗೆ ಬರ್ತಿದೆ. ಸ್ನೇಹಮಯಿ ಕೃಷ್ಣ ಅವರ ಮೇಲೆ ಸರ್ಕಾರ ಒತ್ತಡ ತರಲಾಗುತ್ತಿದೆ ಎಂದು ವಿರೋಧ ಪಕ್ಷಗಳು ಗಂಭೀರ ಆರೋಪ ಮಾಡಿವೆ. ಆದರೆ, ಈ ಆರೋಪವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ ನಿರಾಕರಿಸಿದೆ.

ಮುಡಾ ವಿಚಾರದಲ್ಲಿ ಮುಖ್ಯಮಂತ್ರಿಯವರು ಇನ್ನೇನು ರಾಜೀನಾಮೆ ಕೊಡಲಿದ್ದಾರೆ ಎನ್ನುವಾಗಲೇ ರಾಜಕೀಯ ಲೆಕ್ಕಾಚಾರಗಳು ತಲೆಕೆಳಗಾದವು. ಕಾಂಗ್ರೆಸ್‌ ಹೈಕಮಾಂಡ್‌ನ ಬೆಂಬಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಇರುವುದರಿಂದ ಅವರಿಂದ ರಾಜೀನಾಮೆಗೆ ಒತ್ತಡ ಇಲ್ಲ ಎನ್ನಲಾಗಿದೆ. ಅಲ್ಲದೆ ಈಚೆಗೆ ನಡೆದ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಭರ್ಜರಿ ಗೆಲುವು ಸಾಧಿಸಿರುವುದು ಸಹ ಕಾಂಗ್ರೆಸ್‌ ಹಾಗೂ ಸಿ.ಎಂ ಸಿದ್ದರಾಮಯ್ಯ ಅವರಿಗೆ ಪ್ಲಸ್‌ ಪಾಯಿಂಟ್ಸ್‌ ಆಗಿದೆ ಅಂತಲೇ ಹೇಳಲಾಗ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+