ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್ ಚುನಾವಣಾ ಫಲಿತಾಂಶ ರಾಜ್ಯದ ಮೇಲೆ ಪ್ರಭಾವ ಬೀರಲ್ಲ: ಎಚ್.ಡಿ ಕುಮಾರಸ್ವಾಮಿ

|
Google Oneindia Kannada News

ಕಲಬುರ್ಗಿ, ಡಿಸೆಂಬರ್ 8: ಗುಜರಾತ್ ಚುನಾವಣಾ ಫಲಿತಾಂಶ ಕರ್ನಾಟಕ ರಾಜ್ಯದ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಈ ಕುರಿತು ಗುರುವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಗುಜರಾತ್​ನಲ್ಲಿ ವಿರೋಧ ಪಕ್ಷಗಳು ಎನ್ನುವಂಥದ್ದು ಕಳೆದ ಐದು ವರ್ಷಗಳಿಂದ ಇರಲಿಲ್ಲ. ಆದ್ದರಿಂದ ಗುಜರಾತ್ ಫಲಿತಾಂಶ ಏನಾಗಲಿದೆ ಎಂಬುದು ಮೊದಲೇ ಎಲ್ಲರಿಗೊ ಗೊತ್ತಿರುವ ವಿಷಯವಾಗಿತ್ತು. ರಾಜ್ಯದ ಮುಖ್ಯಮಂತ್ರಿಗಳು ಗುಜರಾತ್ ಫಲಿತಾಂಶ ರಾಜ್ಯಕ್ಕೂ ತಟ್ಟುತ್ತದೆ ಅಂದಿದ್ದಾರೆ. ಆದರೆ ಗುಜರಾತ್​ನಲ್ಲಿರುವ ವಾತವಾರಣವೇ ಬೇರೆ, ರಾಜ್ಯದ ವಾತಾವರಣವೇ ಬೇರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಗುಜರಾತ್, ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ 2022 - ಲೈವ್ ಫಲಿತಾಂಶಗಳುಗುಜರಾತ್, ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ 2022 - ಲೈವ್ ಫಲಿತಾಂಶಗಳು

ನಮ್ಮ ರಾಜ್ಯ ಸರ್ಕಾರದ ಕರ್ಮಕಾಂಡಗಳು ತಿಳಿದಿದೆಯಲ್ಲವೇ? ಇದರಿಂದ ರಾಜ್ಯದ ಜನ ಬೇಸತ್ತು ಹೋಗಿದ್ದಾರೆ. ಹಾಗಾಗಿ ಗುಜರಾತ್​ನ ಫಲಿತಾಂಶ ರಾಜ್ಯದಲ್ಲಿ ಕನಸು‌ ಕಂಡರೆ ಕನ್ನಡಿಗರು ಅದಕ್ಕೆ ಮಾರು ಹೋಗೋವವರಲ್ಲ ಎಂದು ಎಚ್.ಡಿ ಕುಮಾರಸ್ವಾಮಿ ಟೀಕಿಸಿದರು.

Gujarat election results will not affect in Karnataka saya H. D. Kumaraswamy

ಗುಜರಾತಿನ ಫಲಿತಾಂಶ ಅಚ್ಚರಿ ಮೂಡಿಸುವ ಫಲಿತಾಂಶ ಅಲ್ಲ.ಚುನಾವಣೆ ಪೂರ್ವದಲ್ಲೆ ಅಲ್ಲಿ ವಿಪಕ್ಷಗಳ ಸ್ಟ್ರೆಂತ್‌ ಕುಂಠಿತವಾಗಿದೆ. ಗುಜರಾತ್‌ನಲ್ಲಿ ವಿಪಕ್ಷಗಳು ಇಲ್ಲದ ಕಾರಣ ಜನತೆ ತೀರ್ಮಾನ ಕೈಗೊಂಡಿದ್ದಾರೆ. ಗುಜರಾತ್ ಫಲಿತಾಂಶ ಇಟ್ಕೊಂಡು ಇವರು ಓಟ್ ಹೇಗೆ ಕೇಳ್ತಾರೆ, ಇವರು ರಾಜ್ಯದಲ್ಲಿ ಏನ್ ಕೆಲಸ ಮಾಡಿದಾರೆ ಅಂತಾ ಗುಜರಾತ್ ಹೆಸರು ಹೇಳಿ ಓಟ್ ಕೇಳ್ತಾರೆ? ಎಂದು ಪ್ರಶ್ನಿಸಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆದ್ದು ಬಿಜೆಪಿ ಮಕಾಡೆ ಮಲಗಿದೆ, ಮಕಾಡೆ ಮಲಗೋದು ಎದ್ದೇಳೋದು ಆ ಪಕ್ಷಗಳ ಸಂಘಟನೆ ಮೇಲೆ ಹೋಗುತ್ತೆ. ಗುಜರಾತ್ ಚುನಾವಣೆ ಫಲಿತಾಂಶದಿಂದ ಯಾವುದೇ ಪರಿಣಾಮ ಬಿರಲ್ಲ. ಗುಜರಾತ್ ಫಲಿತಾಂಶ ಬೀರುತ್ತೆ ಅಂತಾ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ಸರಿಯಲ್ಲ ಅಖಾಡಕ್ಕೆ ಇಳಿದಾಗ ಯಾರೆನು ಅನ್ನೊದು ತಿಳಿಯಲಿದೆ ಎಂದರು.

Gujarat election results will not affect in Karnataka saya H. D. Kumaraswamy

ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ಮಾತನಾಡಿ, ಸಿಎಂ ಬದಲಾವಣೆ ಆಗ್ತಾರೋ ಅವರೆ ಮುಂದುವರಿತಾರೋ ನನಗೆಕೆ ಬೇಕಾ? ಅದು ಅವರ ಪಕ್ಷದ ಆಂತರಿಕ ವಿಚಾರ. ಜೆಡಿಎಸ್ ಬಗ್ಗೆ ಮಾತಾನಾಡೋಕೆ ಕಾಂಗ್ರೆಸ್, ಬಿಜೆಪಿಗೆ ನೈತಿಕ ಹಕ್ಕಿಲ್ಲ ಎಂದರು.

English summary
Gujarat election results will not affect in Karnataka saya H. D. Kumaraswamy,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X