ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿ.ಟಿ.ದೇವೇಗೌಡ ಬೇಡಿಕೆ ಇಟ್ಟ ಎರಡು ಖಾತೆಗಳು!

By Gururaj
|
Google Oneindia Kannada News

ಬೆಂಗಳೂರು, ಜೂನ್ 03 : ಕಾಂಗ್ರೆಸ್‌ನಂತೆ ಜೆಡಿಎಸ್ ಪಕ್ಷದಲ್ಲಿಯೂ ಖಾತೆಗಾಗಿ ಶಾಸಕರ ಪಟ್ಟು ಮುಂದುವರೆದಿದೆ. ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಸಹಕಾರ ಖಾತೆ ಬೇಡ ಎಂದು ವರಿಷ್ಠರಿಗೆ ಹೇಳಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಿರುವ ಜಿ.ಟಿ.ದೇವೇಗೌಡ ಅವರು ಜಲಸಂಪನ್ಮೂಲ, ಕಂದಾಯ ಖಾತೆಯ ಮೇಲೆ ಕಣ್ಣಿಟ್ಟಿದ್ದರು. ಆದರೆ, ಖಾತೆ ಕಾಂಗ್ರೆಸ್ ಪಾಲಾಗಿದೆ.

ಖಾತೆ ಹಂಚಿಕೆ: ಜೆಡಿಎಸ್ ಗೆ ಯಾವ ಖಾತೆ? ಕಾಂಗ್ರೆಸಿಗೆ ಯಾವ ಖಾತೆ?ಖಾತೆ ಹಂಚಿಕೆ: ಜೆಡಿಎಸ್ ಗೆ ಯಾವ ಖಾತೆ? ಕಾಂಗ್ರೆಸಿಗೆ ಯಾವ ಖಾತೆ?

ಆದ್ದರಿಂದ, ಜಿ.ಟಿ.ದೇವೇಗೌಡ ಅವರು ಲೋಕೋಪಯೋಗಿ ಅಥವ ಇಂಧನ ಖಾತೆ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರು ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.

GT Devegowda demands for PWD or Energy portfolio

ಜೂನ್ 6ರಂದು ಸಂಪುಟ ವಿಸ್ತರಣೆ : 'ಜೂನ್ 6ರಂದು ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ' ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್‌ಗೆ 12, ಕಾಂಗ್ರೆಸ್‌ಗೆ 22 ಖಾತೆಗಳು ಹಂಚಿಕೆಯಾಗಿವೆ.

ಸಂಪುಟ ವಿಸ್ತರಣೆ : ಕುಮಾರಸ್ವಾಮಿ ಸಂಪುಟ ಸೇರುವ 20 ಶಾಸಕರ ಪಟ್ಟಿಸಂಪುಟ ವಿಸ್ತರಣೆ : ಕುಮಾರಸ್ವಾಮಿ ಸಂಪುಟ ಸೇರುವ 20 ಶಾಸಕರ ಪಟ್ಟಿ

ಯಾರಿಗೆ ಯಾವ ಖಾತೆ ನೀಡಬೇಕು? ಎಂಬ ವಿಚಾರದಲ್ಲಿ ಎರಡೂ ಪಕ್ಷಗಳಲ್ಲಿ ಪೈಪೋಟಿ ನಡೆಸಿದೆ. ಇಂಧನ ಖಾತೆ ಕಾಂಗ್ರೆಸ್ ಕೈ ತಪ್ಪಿರುವುದಕ್ಕೆ ಡಿ.ಕೆ.ಶಿವಕುಮಾರ್ ಅವರು ಸಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

English summary
Chamundeshwari JD(S) MLA G.T.Devegowda likely to be inducted into H.D.Kumaraswamy cabinet. He was eyeing on Water Resources and Revenue. But both portfolios have gone to the Congress. Now he demand for PWD or Energy portfolio.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X