Gruhalakshmi: ಗೃಹಲಕ್ಷ್ಮಿ ಫಲಾನುಭವಿಗಳಿಗೆ ಯುಗಾದಿ ಗಿಫ್ಟ್‌: ಎಷ್ಟು ತಿಂಗಳ ಹಣ ಜಮೆ?

ಯುಗಾದಿ ಹಾಗೂ ರಂಜಾನ್‌ ಹಬ್ಬದ ಹೊತ್ತಲ್ಲೇ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಭರ್ಜರಿ ಸಿಹಿಸುದ್ದಿ ಹೊರಬಿದ್ದಿದೆ. ಹಲವು ತಿಂಗಳಿನಿಂದ ಗೃಹಲಕ್ಷ್ಮಿ ಹಣಕ್ಕಾಗಿ ಕಾಯುತ್ತಿದ್ದ ಮನೆಯ ಯಜಮಾನಿಯರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಅವರು ಕೊನೆಗೂ ನೆಮ್ಮದಿಯ ವಿಚಾರ ತಿಳಿಸಿದ್ದಾರೆ. ಇಂದು ಯುಗಾದಿ ಹಬ್ಬದ ದಿನವೇ ಅವರು ಗೃಹಲಕ್ಷ್ಮಿ ಯೋಜನೆಯಡಿ ಬಾಕಿ ಹಣ ಬಿಡುಗಡೆ ಸಂಬಂಧ ಮಹತ್ವದ ಮಾಹಿತಿ ನೀಡಿದ್ದಾರೆ. ಹಣ ಯಾವಾಗ ಫಲಾನುಭವಿಗಳ ಖಾತೆಗೆ ಜಮೆಯಾಗಲಿದೆ ಎಂದೂ ಹೇಳಿದ್ದಾರೆ.

ಈಗಾಗಲೇ ಜನವರಿ ಕಂತಿನ ಗೃಹಲಕ್ಷ್ಮಿ ಹಣವನ್ನು ಖಜಾನೆಗೆ ಕಳಿಸಿದ್ದೇವೆ. ಇದು ಫಲಾನುಭವಿಗಳಿಗೆ ಯುಗಾದಿ ಹಾಗೂ ರಂಜಾನ್‌ಗೆ ಖುಷಿ ಸುದ್ದಿ ಎಂದೇ ಹೇಳಬಹುದು. ಜನವರಿ ತಿಂಗಳ ಹಣವನ್ನು ನಾವು ಈಗಾಗಲೇ ಕ್ಲಿಯರ್‌ ಮಾಡಿದ್ದೇವೆ. ಇನ್ನು ಫೆಬ್ರವರಿ ಕಂತಿನ ಹಣವನ್ನು ಕೂಡ ಶೀಘ್ರದಲ್ಲೇ ಫಲಾನುಭವಿಗಳ ಖಾತೆಗೆ ಹಾಕಲಿದ್ದೇವೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಸ್ಪಷ್ಟಪಡಿಸಿದ್ದಾರೆ.

Gruhalakshmi Scheme January Month Payment Cleared Minister Lakshmi Hebbalkar

ಈ ಹಿಂದೆಯೂ ಅವರು ಗೃಹಲಕ್ಷ್ಮಿ ಬಾಕಿ ಹಣ ಜಮೆ ಬಗ್ಗೆ ಮಾಹಿತಿ ನೀಡಿದ್ದರು. ಅದರಂತೆ ಯುಗಾದಿ ವೇಳೆ ಹಣ ಕೈಸೇರಲಿದೆ, ಮಾರ್ಚ್‌ 31ರ ನಂತರ ಅಥವಾ ಅದಕ್ಕೂ ಮುನ್ನವೇ ಗೃಹಲಕ್ಷ್ಮಿ ಯೋಜನೆಯ ಎರಡು ಕಂತುಗಳ 4,000 ರೂಪಾಯಿ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಇದೀಗ ಕೇವಲ ಒಂದು ತಿಂಗಳ ಹಣವನ್ನು ಮಾತ್ರ ಮೊದಲ ಹಂತದಲ್ಲಿ ಜಮೆ ಮಾಡುವುದಾಗಿ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.

Take a Poll

ಕಾಂಗ್ರೆಸ್‌ ಸರ್ಕಾರವು ಚುನಾವಣೆಯಲ್ಲಿ ಗೆದ್ದ ನಂತರ ಗೃಹಲಕ್ಷ್ಮಿ ಯೋಜನೆಗೆ ಅದ್ಧೂರಿ ಚಾಲನೆ ನೀಡಿ, ಅದರಂತೆ ಪ್ರತಿ ತಿಂಗಳು ಫಲಾನುಭವಿಗಳ ಖಾತೆಗೆ 2000 ಹಣ ಹಾಕುವ ಮೂಲಕ ಬೆನ್ನುತಟ್ಟಿಕೊಂಡಿತ್ತು. ಇದರಿಂದ ರಾಜ್ಯದ ಮಹಿಳೆಯರು ಕೂಡ ನೆಮ್ಮದಿಯಾಗಿದ್ದರು. ಆದರೆ ಕಳೆದ ಕೆಲವು ತಿಂಗಳಿನಿಂದ ಹಣ ಸಕಾಲಕ್ಕೆ ಬರದೆ ಬಾಕಿ ಉಳಿಸಿಕೊಂಡಿದೆ. ಇದರಿಂದ ಮಹಿಳೆಯರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಒಂದು ತಿಂಗಳ ಹಣ ನೀಡುವುದಾಗಿ ತಿಳಿಸಿದೆ. ಇದರಿಂದ ಫಲಾನುಭವಿಗಳಿಗೆ ತುಸು ನಿರಾಳ ಮೂಡಿದೆ.

ತಾಲ್ಲೂಕು ಪಂಚಾಯಿತಿ ಮುಖಾಂತರ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಬಿಡುಗಡೆ ಮಾಡಲಾಗುವುದು. ಈ ಸಂಬಂಧ ಈಗಾಗಲೇ ಅಧಿಕಾರಿಗಳಿಗೆ ಆದೇಶ ನೀಡಿದ್ದು, ಶೀಘ್ರದಲ್ಲೇ ಹಣ ಸಂದಾಯವಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಹೇಳಿದ್ದರು. ಸಿಎಂ ಸಿದ್ದರಾಮಯ್ಯ ಅವರು 2024-25ನೇ ಸಾಲಿನಲ್ಲಿ 1.22 ಕೋಟಿ ಕುಟುಂಬಗಳ ಯಜಮಾನಿಯರಿಗೆ ಗೃಹಲಕ್ಷ್ಮಿ ಯೋಜನೆಯ ಧನಸಹಾಯ ಒದಗಿಸಲಾಗಿದ್ದು, ಪ್ರಸಕ್ತ ವರ್ಷದಲ್ಲಿ ಈ ಯೋಜನೆಗೆ 28,608 ಕೋಟಿ ರೂಪಾಯಿ ಒದಗಿಸಲಾಗಿದೆ ಎಂದು ಬಜೆಟ್‌ನಲ್ಲಿ ತಿಳಿಸಿದ್ದರು.

Gruhalakshmi Scheme January Month Payment Cleared Minister Lakshmi Hebbalkar

ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಯಿಂದ ಮಹಿಳೆಯರಿಗೆ ಫೆಬ್ರವರಿ ಸೇರಿದಂತೆ ಒಟ್ಟು 4 ತಿಂಗಳ ಹಣವನ್ನು ರಾಜ್ಯ ಸರ್ಕಾರ ಬಾಕಿ ಉಳಿಸಿಕೊಂಡಿತ್ತು. ನವೆಂಬರ್ನಿಂದಲೂ ಫಲಾನುಭವಿಗಳ ಖಾತೆಗೆ ಯೋಜನೆಯ ಹಣ ಜಮೆಯಾಗಿರಲಿಲ್ಲ. ಗೃಹಲಕ್ಷ್ಮಿ ಗ್ಯಾರಂಟಿ ಹಣವನ್ನು ಪಾವತಿ ಮಾಡದೇ ಬಾಕಿ ಉಳಿಸಿಕೊಂಡಿದೆ ಎಂದು ಮಹಿಳೆಯರು ಕೂಡ ಬೇಸರ ಹೊರಹಾಕಿದ್ದರು. ವಿಪಕ್ಷಗಳಿಂದಲೂ ಈ ಬಗ್ಗೆ ಟೀಕೆ ವ್ಯಕ್ತವಾಗಿದ್ದರಿಂದ ಸರ್ಕಾರ ಹಂತ ಹಂತವಾಗಿ ಗ್ಯಾರಂಟಿ ಯೋಜನೆಯ ಹಣ ಬಿಡುಗಡೆ ಮಾಡುವುದಾಗಿ ಹೇಳಿತ್ತು.

ಈ ಹಿಂದೆ ಬಾಕಿ ಉಳಿಸಿಕೊಂಡಿದ್ದ ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಯ ನಾಲ್ಕು ತಿಂಗಳ ಪೈಕಿ ನವೆಂಬರ್ ಹಾಗೂ ಡಿಸೆಂಬರ್ ತಿಂಗಳ ಹಣವನ್ನು ಇತ್ತೀಚೆಗೆ ಪಾವತಿ ಮಾಡಿತ್ತು. ಆ ಎರಡು ತಿಂಗಳಿಗೆ ಸುಮಾರು 1.26 ಕೋಟಿ ಮಹಿಳೆಯರಿಗೆ ಅಂದಾಜು 5000 ಕೋಟಿ ರೂಪಾಯಿ ಹಣ ಪಾವತಿ ಮಾಡಿರುವುದಾಗಿ ಹೇಳಿತ್ತು. ಬಳಿಕ ಜನವರಿಯಿಂದಲೂ ಹಣ ಪಾವತಿಯಾಗಿರಲಿಲ್ಲ. ಈಗ ಜನವರಿ ಹಾಗೂ ಫೆಬ್ರವರಿಯಿಂದ ಹಣ ಬಾಕಿ ಉಳಿದಿತ್ತು. ಎಲ್ಲರಿಗೂ ಹಂತ ಹಂತವಾಗಿ ಮೊದಲಿಗೆ ಎರಡು ತಿಂಗಳ ಹಣ ನೀಡುವುದಾಗಿ ಸರ್ಕಾರ ಹೇಳಿತ್ತು. ಇದೀಗ ಒಂದು ತಿಂಗಳ ಹಣ ಹಾಕುವುದಾಗಿ ಹೇಳಿದೆ. ಇದರಿಂದ ಫಲಾನುಭವಿಗಳು ತುಸು ಖುಷಿಯಾಗಿದ್ದಾರೆ. ಇನ್ನೆರಡು ದಿನಗಳಲ್ಲಿ ಈ ಹಣ ಖಾತೆಗಳಿಗೆ ಜಮೆಯಾಗುವ ಸಾಧ್ಯತೆ ಇದೆ.

ಗೃಹಲಕ್ಷ್ಮಿ ಯೋಜನೆ ಬಗ್ಗೆ ಮಾತನಾಡಿದ್ದ ಡಿಸಿಎಂ ಡಿಕೆ ಶಿವಕುಮಾರ್‌ ಅವರು ಮಹಿಳೆಯರಿಗಾಗಿ ನಮ್ಮ ಪಕ್ಷ ಇಷ್ಟು ಕಾರ್ಯಕ್ರಮ ನೀಡಿದೆ, ನೀವು ಕಾಂಗ್ರೆಸ್ ಪಕ್ಷದ ಸದಸ್ಯರಾಗಿ ಪಕ್ಷಕ್ಕೆ ಏನು ಕೊಡುಗೆ ನೀಡುತ್ತೀರಿ ಅನ್ನೋದು ಮುಖ್ಯ. ರಾಜ್ಯದಲ್ಲಿ ನಿರೀಕ್ಷೆಯಷ್ಟು ಮಹಿಳೆಯರ ಸಂಘಟನೆಯಾಗಿಲ್ಲ. ಆದರೆ ಈಗಲೂ ಸಹ ನಿಮ್ಮ ಮುಂದೆ ದೊಡ್ಡ ಅವಕಾಶವೇ ಇದೆ. ಪ್ರತಿ ಗೃಹಲಕ್ಷ್ಮಿ ಫಲಾನುಭವಿಗಳಿಂದ 50 ಜನ ಕಾಂಗ್ರೆಸ್ ಸದಸ್ಯರನ್ನಾಗಿ ಮಾಡಿಸಿ. ಮಹಿಳೆಯರನ್ನು ಸಂಘಟಿಸುವ ಕೆಲಸವನ್ನು ನೀವು ಈಗಿನಿಂದಲೇ ಆರಂಭಿಸಿ ಎಂದು ಕರೆ ನೀಡಿದ್ದರು.'

Gruhalakshmi Scheme January Month Payment Cleared Minister Lakshmi Hebbalkar

ಗ್ಯಾರಂಟಿ ವಿಳಂಬಕ್ಕೆ ಬಿಜೆಪಿ ಕಿಡಿ

ಇತ್ತೀಚೆಗೆ ಗ್ಯಾರಂಟಿ ಯೋಜನೆ ಹಣ ಫಲಾನುಭವಿಗಳ ಕೈಸೇರುತ್ತಿಲ್ಲ ಎಂಬ ವಿಚಾರವಾಗಿ ಕಿಡಿಕಾರಿದ್ದ ಬಿಜೆಪಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಹಣ ನೀಡದೆ, ಗ್ಯಾರಂಟಿ ಅನುಷ್ಠಾನ ಸಮಿತಿ ಎಂಬ ಕಾಂಗ್ರೆಸ್ಸಿನ ನಿರುದ್ಯೋಗಿ ಸಂಘಟನೆಯ ಸದಸ್ಯರಿಗೆ ಹಣ ನೀಡಿದೆ ಎಂದು ಆರೋಪಿಸಿತ್ತು. ಗ್ಯಾರಂಟಿಗಳು ಸರಿಯಾಗಿ ಅನುಷ್ಠಾನವಾಗಿಲ್ಲ ಎಂದ ಮೇಲೆ ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರಿಗೆ ಗೌರವಧನ ನೀಡಿರುವುದು ತುಘಲಕ್ ದರ್ಬಾರಿನ ಪ್ರತಿರೂಪ ಎಂದು ತರಾಟೆಗೆ ತೆಗದುಕೊಂಡಿತ್ತು.

ತಿಂಗಳು ತಿಂಗಳು ಸರಿಯಾದ ಸಮಯಕ್ಕೆ ಗೃಹಲಕ್ಷ್ಮಿ ಹಣವನ್ನ ಖಾತೆಗೆ ಹಾಕಲು ಅದೇನು ಸಂಬಳಾನಾ? ಅಂತ ಉಡಾಫೆ ಮಾತಾಡಿ ಮಹಿಳೆಯರ ಸ್ವಾಭಿಮಾನಕ್ಕೆ ಪೆಟ್ಟು ಕೊಟ್ಟಿದ್ದ ಇಂಧನ ಸಚಿವ ಕೆಜೆ ಜಾರ್ಜ್‌ ಅವರು ಈಗ ಗೃಹಜ್ಯೋತಿ ಗ್ಯಾರೆಂಟಿ ಯೋಜನೆ ಜಾರಿಯಲ್ಲಿ ಚೌಕಾಸಿ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಸಹಾಯಕರಾಗಿದ್ದಾರೆ. ಚುನಾವಣೆ ಸಂದರ್ಭಗಳಲ್ಲಿ ಮಾತ್ರ ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡಿ, ಚುನಾವಣೆಗಾಗಿ ಗ್ಯಾರಂಟಿಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದ ನಂತರ ಒಂದೇ ಒಂದು ಹೊಸ ಯೋಜನೆ ನೀಡಿಲ್ಲ ಎಂದು ಬಿಜೆಪಿ ದೂರಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+