Gruhalakshmi Scheme: ರಾಜ್ಯದಲ್ಲಿ ಇನ್ಮುಂದೆ ಇಂತಹವರಿಗೆ ಗೃಹಲಕ್ಷ್ಮಿ ಹಣ ಬರುವುದಿಲ್ಲ
Gruhalakshmi Scheme: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದಾಗಿದೆ. ಈ ಯೋಜನೆಯಡಿಯಲ್ಲಿ ಪ್ರತಿ ಮನೆ ಯಜಮಾನಿ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 2,000 ರೂಪಾಯಿಗಳನ್ನು ಹಾಕಲಾಗುತ್ತಿದೆ. ಆದರೆ, ಇನ್ನೂ ಕೆಲವು ಕಂತುಗಳ ಹಣ ಹಾಕಬೇಕಿದೆ ಎನ್ನುವ ಆರೋಪಗಳನ್ನು ಮಹಿಳೆಯರು ಮಾಡುತ್ತಿದ್ದಾರೆ. ಈ ನಡುವೆಯೇ ಇದೀಗ ಗೃಹಲಕ್ಷ್ಮಿಯರಿಗೆ ಶಾಕಿಂಗ್‌ವೊಂದು ಎದುರಾಗಿದೆ. ಹಾಗಾದ್ರೆ ಎದೇನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಕಾರ್ನಾಟಕದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. ಈ ಪೈಕಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದಾಗಿದೆ. ಇದರಡಿಯಲ್ಲಿ ಪ್ರತಿ ಮನೆ ಯಜಮಾನಿ ಖಾತೆಗೆ ಪ್ರತಿ ತಿಂಗಳು 2,000 ರೂಪಾಯಿ ಹಣವನ್ನು ಜಮೆ ಮಾಡಲಾಗುತ್ತಿದೆ. ಆದರೆ, ಇದೀಗ ಗೃಹಲಕ್ಷ್ಮಿಯರಿಗೆ ಶಾಕಿಂಗ್ ವಿಚಾರವೊಂದು ಎದುರಾಗಿದೆ.

ಹೌದು.. ಜೂನ್ 6, 2023ರ ಆದೇಶ ಹಾಗೂ ಜುಲೈ 17, 2023ರ ಮಾರ್ಗಸೂಚಿಯಂತೆ ಅನುಷ್ಠಾನಗೊಳಿಸಲಾಗುತ್ತಿದೆ. ಈ ಮಾರ್ಗಸೂಚಿ ಅನ್ವಯ ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ ಪಾವತಿ ಮಾಡುತಿದ್ದರೆ ದಾರರಾಗಿದ್ದಲ್ಲಿ ಮತ್ತು ಜಿ.ಎಸ್.ಟಿ ರಿಟರ್ನ್ಸ್ ಸಲ್ಲಿಕೆ ಮಾಡುವವರಾಗಿದ್ದಲ್ಲಿ ಯೋಜನೆಗೆ ಅರ್ಹರಿರುವುದಿಲ್ಲ.
ಈವರೆಗೆ ರಾಜ್ಯಾದ್ಯಂತ ಗೃಹಲಕ್ಷ್ಮಿ ಯೋಜನೆಯಡಿ 2.13 ಲಕ್ಷ ಫಲಾನುಭವಿಗಳು ಐಟಿ/ಜಿಎಸ್‍ಟಿ ವ್ಯಾಪ್ತಿಗೊಳಪಡುತ್ತಾರೆ ಎಂದು ತಿಳಿದುಬಂದಿರುತ್ತದೆ. ಜುಲೈ 15, 2025ರ ಎಂಪಿಐಸಿ ಸಭೆಯಲ್ಲಿ ಐಟಿ/ಜಿಎಸ್‍ಟಿ ಟ್ಯಾಕ್ಸ್ ಪೇ ಎಂದು ಸ್ಟೇಟಸ್ ತೋರಿಸುತ್ತಿರುವ ಫಲಾನುಭವಿಗಳು ಐಟಿ/ಜಿಎಸ್‍ಟಿ ಟ್ಯಾಕ್ಸ್ ಪೇಯಿಗೆ ಒಳಪಡುವುದರಿಂದ ಅರ್ಜಿ ಪರಿಗಣಿಸಲು ಬರುವುದಿಲ್ಲ.
ಯಾರಿಗೆಲ್ಲಾ ಗೃಲಕ್ಷ್ಮಿ ಹಣ ಇಲ್ಲ?: ಇನ್ಮುಂದೆ ಗೃಹಲಕ್ಷ್ಮಿ ಯೋಜನೆಯಡಿ ಐಟಿ/ಜಿಎಸ್‍ಟಿ ಟ್ಯಾಕ್ಸ್ ಪೇಯಿ ಎಂದು ಸ್ಟೆಟಸ್ ತೋರಿಸುತ್ತಿರುವ ಫಲಾನುಭವಿಗಳ ಧನಸಹಾಯ ಪಾವತಿಗಾಗಿ ಮನವಿ ಸಲ್ಲಿಸಿದಲ್ಲಿ ಐಟಿ/ಜಿಎಸ್‍ಟಿ ಟ್ಯಾಕ್ಸ್ ಪೇಯಿಗಳಾಗಿರುವುದರಿಂದ ಅರ್ಜಿಯನ್ನು ಪರಿಗಣಿಸುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಸೋಮವಾರಪೇಟೆ ಇವರ ಹಂತದಲ್ಲಿ ಹಿಂಬರಹ ನೀಡುವಂತೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯ ಇನ್ನೂ ಹಲವು ಕಂತುಗಳು ಬರಬೇಕಿದೆ. ಇನ್ನೂ ಬಂದಿಲ್ಲ ಎಂದು ಮಹಿಳೆಯರು ಆರೋಪ ಮಾಡುತ್ತಲಿರದ್ದಾರೆ. ಆದರೆ, ಮತ್ತೊಂದೆಡೆ ಇಲ್ಲಿ ಅರ್ಹರಲ್ಲದವರು ಕೂಡ ಈ ಯೋಜನೆಯ ಪ್ರಯೋಜನೆ ಪಡೆದುಕೊಳ್ಳುತ್ತಿದ್ದಾರೆ ಎನ್ನುವ ಆರೋಪ ಕೂಡ ಕೇಳಿಬಂದಿದೆ. ಇದರ ಬೆನ್ನಲ್ಲೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.
ಗೃಹಲಕ್ಷ್ಮಿ ಯೋಜನೆ ಜಾರಿಯಾದಾಗಿನಿಂದ ಈ ಯೊಜನೆಯಡಿಯಲ್ಲಿ ಬರುವ ಹಣದಿಂದ ಅದೆಷ್ಟೋ ಮಹಿಳೆಯರು ತಮ್ಮ ಕುಟುಂಬಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ತೆಗದುಕೊಂಡಿದ್ದಾರೆ. ಮಕ್ಕಳ ಶಾಲೆ ಶುಲ್ಕ, ಕೃಷಿ, ವಾಹನಗಳ ಖರೀದಿ ಸೇರಿದಂತೆ ಹಲವು ಗೃಹ ಉಪಯೋಗಿ ವಸ್ತುಗಳನ್ನು ಕೊಂಡೊಕೊಂಡು ಜೀವನ ಸಾಗಿಸುತ್ತಿರುವ ಉದಾಹರಣೆಗಳಿವೆ. ಮತ್ತೊಂದೆಡೆ ಅರ್ಹರಲ್ಲದವರು ಕೂಡ ಈ ಯೋಜನೆಯ ಹಣವನ್ನು ಪಡೆದುಕೊಳ್ಳುತ್ತಿದ್ದು, ಇದರಿಂದ ಅರ್ಹರು ಹಲವಯ ಕಂತುಗಳ ಬಾಕಿಯಿಂದ ತುಂಬಾ ತೊಂದರೆ ಅನುಭವಿಸುವಂತಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.












Click it and Unblock the Notifications