Gruhalakshmi Scheme: ಗೃಹಲಕ್ಷ್ಮಿ ಹಣ ಜಮಾ ಆಗಬೇಕಂದ್ರೆ ನೀವು ಮಾಡಬೇಕಾದ ಕೆಲ್ಸ ಇಷ್ಟೇ
Gruhalakshmi Scheme: ಕಾಂಗ್ರೆಸ್ ಸರ್ಕಾರ ಜಾರಿ ಮಾಡಿರುವ ಮಹತ್ವಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಕೂಡ ಒಂದಾಗಿದೆ. ಈ ಯೋಜನೆಯಡಿ ಮನೆ ಯಜಮಾನಿ ಖಾತೆಗೆ ಪ್ರತಿ ತಿಂಗಳು 2,000 ರೂಪಾಯಿ ಹಣ ಜಮಾ ಮಾಡಲಾಗುತ್ತಿತ್ತು. ಇದರಿಂದ ರಾಜ್ಯಾದ್ಯಂತ ತುಂಬಾ ಮಹಿಳೆಯರಿಗೆ ಸಹಾಯವಾಗಿದ್ದು, ಉತ್ತಮ ಉದ್ದೇಶಗಳಿಗೆ ಬಳಕೆ ಮಾಡಿಕೊಂಡಿರುವ ಉದಾಹರಣೆಗಳಿವೆ. ಇದೀಗ ಈ ಹಣ ಖಾತೆಗೆ ಹಾಕಲು ಕೆಲವು ನಿಯಮಗಳನ್ನು ಮಾಡಲಾಗಿದೆ.
ಬಾಕಿ ಉಳಿದಿದ್ದ ಗೃಹಲಕ್ಷ್ಮಿ ಯೋಜನೆಯ ಹಣಕ್ಕಾಗಿ ಕಾಯುತ್ತಿದ್ದ ರಾಜ್ಯದ ಮಹಿಳೆಯರಿಗೆ ಸಿಹಿಸುದ್ದಿ ಸಿಕ್ಕಿದ್ದು, ರಾಜ್ಯ ಸರ್ಕಾರ ನವೆಂಬರ್ ಹಾಗೂ ಡಿಸೆಂಬರ್ ತಿಂಗಳ ಪಾವತಿ ಹಣವನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಮಾರ್ಚ್ ತಿಂಗಳ ಎರಡನೇ ವಾರದಲ್ಲಿ ಮಹಿಳೆಯರ ಖಾತೆಗೆ 4,000 ರೂಪಾಯಿ ಜಮಾ ಆಗಲಿದೆ ಎಂದು ತಿಳಿಸಿದ್ದಾರೆ.

ಅಲ್ಲದೆ, ಯೋಜನೆಯಲ್ಲಿನ ತಾಂತ್ರಿಕ ತೊಂದರೆಗಳನ್ನು ಸರಿಪಡಿಸಲಾಗಿದೆ. ಯಾರೂ ಆತಂಕಪಡಿವ ಅಗತ್ಯ ಇಲ್ಲ. ಮಹಿಳೆಯರ ಖಾತೆಗೆ ಎರಡು ತಿಂಗಳ ಬಾಕಿ ಹಣ ಪಾವತಿ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಆದರೆ ಎಲ್ಲಾ ಮಹಿಳೆಯರಿಗೆ ಹಣ ಸಿಗುವುದಿಲ್ಲ. ಈ ಕೆಳಗೆ ನೀಡಲಾಗಿರುವ ನಿಯಮ ಪಾಲನೆ ಮಾಡದವರಿಗೆ ಹಣ ಜಮಾ ಆಗುವುದಿಲ್ಲ ಎಂದು ತಿಳಿಸಿದೆಎ.
ಯಾರಿಗಿಲ್ಲ ಗೃಹಲಕ್ಷ್ಮಿ ಹಣ?
* ಕೆವೈಸಿ ಅಪ್ಡೇಟ್ ಮಾಡದವರು
* ಆಧಾರ್ ಲಿಂಕ್ ಇಲ್ಲದ ಬ್ಯಾಂಕ್ ಖಾತೆ
* ಪಾನ್ ಕಾರ್ಡ್ ಲಿಂಕ್ ಮಾಡದವರು
* ಮೊಬೈಲ್ ನಂಬರ್ ಲಿಂಕ್ ಇಲ್ಲದವರು
* NPCI ಮ್ಯಾಪಿಂಗ್ ಆಗಿಲ್ಲದವರು
* ಬಿಪಿಎಲ್ ಕಾರ್ಡ್ ಪಡಿತರ ಚೀಟಿ ರದ್ದಾದವರಿಗೆ
ಈ ದಾಖಲೆಗಳು ಅಪ್ಡೇಟ್ ಆಗಿಲ್ಲದಿದ್ದರೆ, ಗೃಹಲಕ್ಷ್ಮಿ ಹಣವನ್ನು ಪಡೆಯಲು ಅರ್ಹರಾಗಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ, ಯೋಜನೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ತೆರಿಗೆ ಪಾವತಿ ಮಾಡುವ ಮಹಿಳೆಯರಿಗೂ ಗೃಹಲಕ್ಷ್ಮೀ ಹಣ ಸಿಗುವುದಿಲ್ಲ. ಇನ್ನು ಬಡವರನ್ನು ಹೊರತುಪಡಿಸಿ ಯಾರೆಲ್ಲಾ ಅನುಕೂಲಸ್ಥರಿದ್ದರೆಯೋ ಅಂತಹವರು ಸ್ವತಃ ಈ ಯೋಜನೆ ಹಣ ಬೇಡ ಎಂದು ಬಿಡಬಹುದಾಗಿದೆ.
ರಾಜ್ಯ ಸರ್ಕಾರ DBT Karnataka App ಮೂಲಕ ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಆಗಿದ್ಯೋ ಇಲ್ಲವೋ ತಿಳಿಯಬುದು. ಮಹಿಳೆಯರು DBT Karnataka ಮೊಬೈಲ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಿ ಮತ್ತು ನಿಮ್ಮ ಯೋಜನೆ ಸ್ಟೇಟಸ್ ಚೆಕ್ ಮಾಡಿ. ನಿಮ್ಮ ಬ್ಯಾಂಕ್ ಖಾತೆ ಅಪ್ಡೇಟ್ ಆಗಿಲ್ಲದಿದ್ದರೆ, ತಕ್ಷಣವೇ KYC, ಆಧಾರ್ ಲಿಂಕ್ ಮತ್ತು NPCI ಮ್ಯಾಪಿಂಗ್ ಮಾಡಿಸಿ. ಇಲ್ಲದಿದ್ದರೆ, ಹಣ ಜಮಾ ಆಗುವುದಿಲ್ಲ ಎಂದು ಸರ್ಕಾರ ತಿಳಿಸಿದೆ.
ಒಂದು ವೇಳೆ ನೀವು ಈ ಎಲ್ಲಾ ದಾಖಲೆಗಳು ಅಪ್ಡೇಟ್ ಮಾಡಿಸಿದ್ದರೆ, ಖಾತೆಗೆ ನೇರವಾಗಿ ಹಣ ಬೀಳಲಿದೆ ಅಂತಲೂ ತಿಳಿಸಿದೆ. ಮತ್ತೊಂದೆಡೆ ವಿರೋಧ ಪಕ್ಷದವರು ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾದರದ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದೆ. ಇದಕ್ಕೆ ತಕ್ಕ ಉತ್ತರವೇಂಬಂತೆ ಈ ಯೋಜನೆ ಹಣದಿಂದ ಎಷ್ಟೋ ಕುಟುಂಬಗಳ ಜೀವನ ಸಾಗುತ್ತಿದೆ ಎಂದು ತುಂಬಾ ಜನರ ಅಭಿಪ್ರಾಯವಾಗಿದೆ. ಆದ್ರೆ, ವಿಪಕ್ಷಗಳು ಇದೀಗ ಸರ್ಕಾರ ಸಾಲದ ಸುಳಿಯಲ್ಲಿ ಸಿಲುಕಿದ್ದು, ಬಾಕಿ ಉಳಿದ ಹಣವನ್ನು ಹೇಗೆ ಹಾಕುತ್ತದೆ ಎಂದು ಪ್ರಶ್ನಿಸುವ ಮೂಲಕ ವ್ಯಗ್ಯವಾಡುತ್ತಿವೆ. ಇದಕ್ಕೆ ಸ್ಪಷ್ಟನೆ ನೀಡಿರುವ ಸಚಿವರು, ನಾವು ಯೋಜನೆ ನಿಲ್ಲಿಸುತ್ತೇವೆ ಎಂದು ಹೇಳಿಲ್ಲ. ಸ್ವಲ್ಪ ತಡವಾಗಬಹುದು ಅಷ್ಟೇ. ನಾವು ಹೇಳಿದಂತೆ ಗ್ಯಾರಂಟಿಗಳನ್ನು ಜಾರಿ ಮಾಡಿದ್ಧೇವೆ. ನೀವಯ ಸುಮ್ಮನೆ ನಮ್ಮ ಯೋಜನೆಗಳಿಂದ ಹೊಟ್ಟೆಕಿಚ್ಚು ಪಟ್ಟುಕೊಳ್ಳಬೇಡಿ ಎಂದು ವಿಪಕ್ಷಗಳಿಗೆ ತಿರುಗೇಟು ಕೊಡುವ ಕೆಲಸವನ್ನು ಮಾಡುತ್ತಿದ್ದಾರೆ.












Click it and Unblock the Notifications