Gruhalakshmi Scheme: ಗೃಹಲಕ್ಷ್ಮಿಯರಿಗೆ ಭರ್ಜರಿ ಗುಡ್ ನ್ಯೂಸ್: 22ನೇ ಕಂತಿನ ಹಣ ಬಿಡುಗಡೆ ಬಗ್ಗೆ ಅಪ್ಡೇಟ್
Gruhalakshmi Scheme: ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. ಇವುಗಳಲ್ಲಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದಾಗಿದ್ದು, ಈ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ಪ್ರತಿ ಮನೆ ಯಜಮಾನಿ ಬ್ಯಾಂಕ್ ಖಾತೆಗೆ 2,000 ರೂಪಾಯಿ ಹಾಕಲಾಗುತ್ತಿದೆ. ಇತ್ತೀಚೆಗಷ್ಟೇ 21ನೇ ಕಂತಿನ ಹಣವನ್ನು ಜಮೆ ಮಾಡಲಾಗಿತ್ತು. ಇದೀಗ 22ನೇ ಕಂತಿನ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್‌ವೊಂದು ಸಿಕ್ಕಿದೆ.
ಕಳೆದ ಕೆಲ ದಿನಗಳ ಹಿಂದೆಯಷ್ಟೇ ಅಂದರೆ ವರಮಹಾಲಕ್ಷ್ಮಿ ಹಬ್ಬದ ಸಮಯದಲ್ಲಿ ಗೃಹಲಕ್ಷ್ಮಿ ಯೋಜನೆಯ 21ನೇ ಕಂತಿನ ಹಣವನ್ನು ಜಮೆ ಮಾಡಲಾಗಿತ್ತು. ಈ ವೇಳೆ 21 ಹಾಗೂ 22 ಎರಡು ಕಂತಿನ 4,000 ರೂಪಾಯಿ ಒಂದೇ ಬಾರಿ ಜಮೆ ಮಾಡಲಿದ್ದಾರೆ ಎನ್ನುವ ಭರವಸೆಯಲ್ಲಿ ಮಹಿಳೆಯರಿದ್ದರು. ಆದರೆ, ಆಗ ಕೇವಲ ಒಂದು ಕಂತಿನ ಹಣವನ್ನು ಮಾತ್ರ ಜಮೆ ಮಾಡಲಾಗಿದ್ದು, 22ನೇ ಕಂತಿನ ಹಣವನ್ನು ಬಾಕಿ ಉಳಿದಿದೆ.

ಇನ್ನೂ ಲಕ್ಷ್ಮೀ ಹೆಬ್ಬಳ್ಕಾರ್ ಅವರು ಕೆಲವೇ ದಿನಗಳಲ್ಲಿ 22 ಕಂತಿನ ಹಣವನ್ನು ಸಹ ಬಿಡುಗಡೆಗೊಳಿಸಲಾಗುತ್ತದೆ ಎಂದು ಭರವಸೆ ನೀಡಿದ್ದರು. ಇದೀಗ ಆಗಸ್ಟ್ 27ರಂದು ಗಣೇಶ ಹಬ್ಬ ಇದ್ದು, ಈ ವೇಳೆಯೇ ಜಮೆ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಯಾಕಂದ್ರೆ ಕಳೆದ ಬಾರಿಯು ಸಹ ವರಮಹಲಕ್ಷ್ಮಿ ಹಬ್ಬದ ವೇಳೆಯೇ ನೀಡಲಾಗಿತ್ತು.
ರಾಜ್ಯ ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ನೀಡುತ್ತಿರುವ ಹಣವನ್ನು ತುಂಬಾ ಜನ ಮಹಿಳೆಯರು ಸದುಪಯೋಗಪಡಿಸಿಕೊಂಡಿದ್ದಾರೆ. ಗೃಹ ಉಪಯೋಗಿ ವಸ್ತುಗಳು, ಮಕ್ಕಳ ಶಿಕ್ಷಣ, ಕೃಷಿ ಕೆಲಸಗಳಿಗೂ ಬಳಕೆ ಮಾಡಿಕೊಂಡಿರುವ ಉದಾಹರಣೆಗಳಿವೆ. ಈ ಬಗ್ಗೆ ಸ್ವತಃ ಮಹಿಳೆಯರೇ ಹೇಳಿಕೆಗಳನ್ನು ನೀಡಿದ್ದಾರೆ. ಗೃಹಲಕ್ಷ್ಮಿ ಹಣದಿಂದ ತುಂಬಾ ಪ್ರಯೋಜನಾ ಆಗುತ್ತಿದೆ ಎಂದು ಹೇಳಿದ್ದಾರೆ.
ಮನೆ ನಡೆಸುವುದು ಅಷ್ಟೊಂದು ಸುಲಭದ ವಿಚಾರವಲ್ಲ. ತುಂಬಾ ಖರ್ಚು ವೆಚ್ಚಗಳು ಇರುತ್ತವೆ. ಇವುಗಳನ್ನು ಗೃಹಲಕ್ಷ್ಮಿಯಿಂದ ಬಂದ ಹಣದಿಂದಲೇ ನಿಭಾಯಿಸುತ್ತಿದ್ದೇವೆ ಅಂತಲೂ ಹೇಳಿದ್ದಾರೆ. ಹಲವೆಡೆ, ಇದೇ ಹಣದಿಂದ ಪಂಪ್‌ಸೆಟ್, ಬೋರ್‌ವೆಲ್‌ಗಳನ್ನು ಕೊರೆಸಿದ್ದಾರೆ. ವಾಹನಗಳನ್ನ ಖರೀದಿ ಮಾಡಿದ್ದಾರೆ. ಹೊಲಿಗೆ ಯಂತ್ರಗಳನ್ನು ಸಹ ಕೊಂಡುಕಂಡು ದುಡಿಮೆ ಮಾಡುತ್ತಿರುವ ಉದಾಹರಣೆಗಳಿವೆ.












Click it and Unblock the Notifications