Gruha Lakshmi Scheme: ಗೃಹಲಕ್ಷ್ಮಿ ಹಣಕ್ಕಾಗಿ ಕಾಯುತ್ತಿದ್ದವರಿಗೆ ಸಿಹಿಸುದ್ದಿ; 3 ಕಂತಿನ ಒಮ್ಮೆಲೆ ಬಿಡುಗಡೆ!

ಕರ್ನಾಟಕದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ರಾಜ್ಯ ಸರ್ಕಾರದಿಂದ ಮಹತ್ವದ ಮಾಹಿತಿ ಹೊರಬಿದ್ದಿದೆ. ಯೋಜನೆಯ 34, 35 ಮತ್ತು 36ನೇ ಕಂತುಗಳನ್ನು ಒಳಗೊಂಡ ಒಟ್ಟು ₹7,405.86 ಕೋಟಿ ಹಣವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಒಮ್ಮೆಲೆ ಬಿಡುಗಡೆ ಮಾಡಲಿದ್ದಾರೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.

Gruha Lakshmi Scheme 7 405 86 Crore Released for 34th 35th and 36th Instalments MLC Dinesh Gooligowda

ಪ್ರತಿ ಮನೆಯ ಯಜಮಾನಿಗೆ ತಲಾ 72,000 ರೂ. ಜಮೆ

ಗೃಹಲಕ್ಷ್ಮಿ ಯೋಜನೆಯ 34, 35 ಮತ್ತು 36ನೇ ಕಂತುಗಳನ್ನು ಒಳಗೊಂಡ ಮೂರು ಕಂತಿನ 7405.86 ಕೋಟಿ ರೂ. ಹಣವನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಒಮ್ಮೆಲೆ ಬಿಡುಗಡೆ ಮಾಡಿದ್ದಾರೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ದಿನೇಶ್ ಗೂಳಿಗೌಡ ಅವರು ತಿಳಿಸಿದ್ದಾರೆ.

86,838.36 ಕೋಟಿ ರೂ. ಗೃಹಲಕ್ಷ್ಮಿ ಹಣ

ಗೃಹಲಕ್ಷ್ಮಿ ಯೋಜನೆಯಡಿ ಇದುವರೆಗೂ 33 ಕಂತಿನ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗಿದೆ. ಈಗ 34ನೇ ಕಂತಿನ 2500 ಕೋಟಿ ರೂ., 35ನೇ ಕಂತಿನ 2452.93 ಕೋಟಿ ರೂ. ಮತ್ತು 36ನೇ ಕಂತಿನ 2452.93 ಕೋಟಿ ರೂ. ಹಣವನ್ನು ಒಮ್ಮೆಲೆ ಬಿಡುಗಡೆ ಆಗಿದೆ. ಇದರಿಂದ ಅಕ್ಟೋಬರ್ ವರೆಗೆ ರಾಜ್ಯದ 1.24 ಕೋಟಿ ಮಹಿಳೆಯರಿಗೆ 86,838.36 ಕೋಟಿ ರೂ. ಗೃಹಲಕ್ಷ್ಮಿ ಹಣ ತಲುಪಲಿದೆ. ಈ ಮೂಲಕ ಪ್ರತಿ ಫಲಾನುಭವಿಗೆ 72,000 ರೂ. ತಲುಪಿದಂತಾಗಲಿದೆ ಎಂದು ಹೇಳಿದ್ದಾರೆ.

ಬರದ ಈ ಸಂದರ್ಭದಲ್ಲಿ ಗೃಹಲಕ್ಷ್ಮಿ ಹಣ ಮಹಿಳೆಯರಿಗೆ ಆರ್ಥಿಕವಾಗಿ ಶಕ್ತಿ ನೀಡಲಿದೆ. ದೀಪಾವಳಿ ಹಬ್ಬದ ಈ ಸಂದರ್ಭದಲ್ಲಿ ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಸರ್ಕಾರಿ ಶಾಲೆ ಮೊದಲ ಆದ್ಯತೆಯಾಗಲಿ: ಡಿ ಕೆ ಶಿವಕುಮಾರ್

'ನಮ್ಮ ಸರ್ಕಾರ ಸಿಎಸ್ ಆರ್ ಹೊಸ ನೀತಿ ಜಾರಿ ಮಾಡಿದೆ. ನಾಡಿನ ಎಲ್ಲಾ ಖಾಸಗಿ ಶಾಲೆಯ ಆಡಳಿತ ಮಂಡಳಿಗಳು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ದತ್ತು ಅಥವಾ ಅವುಗಳ ಅಭಿವೃದ್ಧಿಗೆ ಕೈ ಜೋಡಿಸಬೇಕು' ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಕರೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಒಟ್ಟು 206.10 ಕೋಟಿ ರೂ. ವೆಚ್ಚದಲ್ಲಿ 56 ಶಾಲೆಗಳ ಅಭಿವೃದ್ಧಿ ಮಾಡುವ ಕುರಿತು 15 ಒಡಂಬಡಿಕೆ ಸಹಿ ಮಾಡಲಾಯಿತು. ಇದಕ್ಕೂ ಮುನ್ನ 2026 ರಲ್ಲಿ 85 ಕೋಟಿ ರೂ. ವೆಚ್ಚದಲ್ಲಿ 33 ಶಾಲೆಗಳನ್ನು ಅಭಿವೃದ್ಧಿ ಪಡಿಸುವ 18 ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು. 64 ಕೋಟಿ ರೂ ವೆಚ್ಚದಲ್ಲಿ 23 ಶಾಲೆಗಳನ್ನು ಅಭಿವೃದ್ಧಿ ಪಡಿಸುವ 12 ಒಡಂಬಡಿಕೆ ಶೀಘ್ರವೇ ಸಹಿ ಮಾಡುವ ಹಂತದಲ್ಲಿದೆ.

ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳ ಜೊತೆ ಜೋಡಿಸುವ ಗುರಿ

ನಮ್ಮ ಗ್ರಾಮೀಣ ಪ್ರದೇಶದ ಶಾಲೆಯ ಮಕ್ಕಳನ್ನು ನಿಮ್ಮ ಶಾಲೆಯ ಮಕ್ಕಳ ಜೊತೆಗೆ ಸೇರಿಸಿಕೊಂಡು ಗುಣಮಟ್ಟದ ಶಿಕ್ಷಣ ನೀಡಿ ಬದುಕಲ್ಲಿ ಅವರು ಮೇಲೆ ಬರುವುದಕ್ಕೆ ನೆರವಾಗಬೇಕು. ಒಟ್ಟು 2 ಸಾವಿರ ಸರ್ಕಾರಿ ಶಾಲೆಗಳನ್ನು ಈ ರೀತಿ ಖಾಸಗಿ ಶಾಲೆಗಳೊಂದಿಗೆ ಜೋಡಿಸುವ ಚಿಂತನೆ ಇದೆ. 6 ಸಾವಿರ ಪಂಚಾಯಿತಿಗಳಲ್ಲಿ ಮೂರು ವಿಭಾಗ ಮಾಡಿದ್ದೇವೆ. ಆರಂಭದಲ್ಲಿ 1 ಸಾವಿರ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಖಾಸಗಿ ಶಾಲೆಗಳ ಜೋಡಿಸುವ ಗುರಿ ಹೊಂದಿದ್ದೇವೆ. ಇದು ಕೇವಲ ಆರಂಭ 4-5 ವರ್ಷದ ಹೊತ್ತಿಗೆ ನಮ್ಮ ಪ್ರಯತ್ನಕ್ಕೆ ಒಳ್ಳೆಯ ಫಲ ದೊರೆಯಲಿದೆ ಎಂದರು.

'ಖಾಸಗಿ ಶಾಲೆಯ ಆಡಳಿತ ಮಂಡಳಿಗಳು ಯಾವ ಶಾಲೆಗಳನ್ನು ಪಡೆಯಬೇಕು ಎನ್ನುವ ಆಯ್ಕೆ ಸರ್ಕಾರ ಮಾಡುವುದಿಲ್ಲ. ನಿಮ್ಮಅನುಕೂಲಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಳ್ಳಿ. ನಿಮ್ಮ ಆರ್ಥಿಕ ಸ್ಥಿತಿಗತಿ ನೋಡಿಕೊಂಡು ನಿರ್ಧಾರ ಮಾಡಿ. 5-10 ಕೋಟಿ ರೂ. ಕೊಟ್ಟು ಕಟ್ಟಡಗಳನ್ನು ಕಟ್ಟಿಕೊಡಲು ಆಗದೇ ಇದ್ದರೆ ಪರವಾಗಿಲ್ಲ, ನಿಮ್ಮ ನೈಪುಣ್ಯ ಇರುವ ಶಿಕ್ಷಕರನ್ನು ಸರ್ಕಾರಿ ಶಾಲೆಗೆ ಕಳುಹಿಸಿಕೊಡಿ. ನಿಮ್ಮಶಾಲೆಯಿಂದ 10 ಜನ ಶಿಕ್ಷಕರನ್ನು ಕೊಡಿ. ಅವರಿಗೆ ಸಂಬಳ ನೀವು ಕೊಡಿ. ಖಾಸಗಿ ಶಾಲೆಯ ಬಸ್ಸನ್ನು ಮಾರಲು ಹೋಗಬೇಡಿ. ಸರ್ಕಾರಿ ಶಾಲೆಗೆ ಕೊಡಿ. ಲ್ಯಾಬ್ ವಸ್ತುಗಳು, ಕಂಪ್ಯೂಟರ್ ಗಳನ್ನು ಕೊಟ್ಟರೆ, ಅನುಕೂಲ ಆಗುತ್ತದೆ. ಇದೊಂದು ರೀತಿ ಜ್ಞಾನ ವಿನಿಮಯ' ಎಂದು ಹೇಳಿದರು.

ಸರ್ಕಾರಿ ಶಾಲೆ ಮೊದಲ ಆದ್ಯತೆಯಾಗಲಿ

'ರಾಜ್ಯದಲ್ಲಿ ವಾರ್ಷಿಕ ಒಟ್ಟು 8,800 ಕೋಟಿ ಸಿಎಸ್ ಆರ್ ನಿಧಿ ಇದೆ. ರಾಜ್ಯದ ಎಲ್ಲಾ ಕಂಪನಿಗಳ ಆಡಳಿತ ಮಂಡಳಿಗಳೊಂದಿಗೆ ಮಾತುಕತೆ ನಡೆಸಿ, ಸಿಎಸ್ ಆರ್ ನಿಧಿಯನ್ನು ಗ್ರಾಮೀಣ ಭಾಗದ ಪ್ರಾಥಮಿಕ ಶಾಲೆಗಳ ಅಭಿವೃದ್ಧಿಗೆ ವಿನಿಯೋಗವೇ ಮೊದಲ ಆದ್ಯತೆ ಆಗಬೇಕು ಎಂದು ಮನವಿ ಮಾಡಿದ್ದೇನೆ. ಅವರು ಈಗಾಗಲೇ ಕೆಲಸ ಆರಂಭಗೊಳಿಸಿದ್ದಾರೆ. ಈಗ ನಿಮ್ಮ ಸರದಿ ಎಂದು ಆಗಮಿಸಿದ್ದ ಖಾಸಗಿ ಆಡಳಿ ಮಂಡಳಿಯವರಿಗೆ' ವಿವರಿಸಿದರು.

'ಈ ಸಿಎಸ್ ಆರ್ ವಿಚಾರವಾಗಿ ನಾನು ಸರ್ಕಾರ ಮುಖ್ಯಕಾರ್ಯದರ್ಶಿಗಳು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಮಾತಕತೆ ನಡೆಸಿದ್ದೇವೆ. ಕೆಲವರು ಮುಂಬಯಿಯಲ್ಲಿ ಕಚೇರಿ ತೆರೆದು, ಇಲ್ಲಿ ಕಂಪನಿಯ ನೋಂದಣಿ ಮಾಡಿಸಿ, ಇಲ್ಲಿ ಗಳಿಸಿದ ಹಣವನ್ನು ಅಲ್ಲಿ ವಿನಿಯೋಗ ಮಾಡುತ್ತಿದ್ದಾರೆ. ಹೀಗೆ ಬಿಡುಗಡೆ ಮಾಡಿ, ಹಾಗೇ ಶೇ.50ರಷ್ಟು ಹಣ ವಾಪಸ್ಸು ತೆದುಕೊಳ್ಳುತ್ತಾರೆ. ಈ ದಂಧೆಗೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದ್ದೇನೆ' ಎಂದರು.

ನಿಮ್ಮ ಹೆಸರನ್ನು ಹಾಕಿಕೊಳ್ಳಬಹುದು

'ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 30 ಶಾಲೆಗಳಲ್ಲಿ ಕಂಪೆನಿಗಳ ಸಿಎಸ್ ಆರ್ ನಿಧಿ ಬಳಸಿ ಅಭಿವೃದ್ಧಿ ಕಾರ್ಯಗಳು ಆರಂಭಗೊಂಡಿವೆ. ಅದರಲ್ಲಿ ಶೇ. 10 ಶಾಲೆಗಳ ಕಾರ್ಯ ಪೂರ್ಣಗೊಂಡಿದೆ. 8 ಶಾಲೆಗಳಲ್ಲಿ ಕೆಲಸ ನಡೆಯುತ್ತಿದೆ. 12 ಶಾಲೆಗಳೊಂದಿಗೆ ಒಪ್ಪಂದ ಮುಗಿದಿದೆ. ಟೊಯೆಟೋ ಕಂಪನಿ ರಾಮನಗರದ ಜಿಲ್ಲೆಯಲ್ಲಿ 23 ಶಾಲೆಗಳ ನಿರ್ಮಾಣಕ್ಕೆ ನೆರವಾಗಿದೆ. ಒಂದೊಂದು ಶಾಲೆಗೆ 10ರಿಂದ 15 ಕೋಟಿ ಹೂಡಿಕೆ ಮಾಡುತ್ತಿದೆ. ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದಲೇ ಪ್ಲಾನ್ ಕೊಟ್ಟಿದ್ದೇವೆ. ಆದರೆ,ಯಾವುದೇ ಕಾರಣಕ್ಕೆ ಸಿಎಸ್ ಆರ್ ಹಣವನ್ನು ಸರ್ಕಾರ ಪಡೆಯುವುದಿಲ್ಲ' ಎಂದು ಸ್ಪಷ್ಟಪಡಿಸಿದರು.

'ಖಾಸಗಿ ಶಾಲೆಗಳು ಸರ್ಕಾರಿ ಶಾಲೆಯನ್ನು ಅಭಿವೃದ್ಧಿಪಡಿಸಿದರೆ ತಮ್ಮ ಶಾಲೆಯ ಹೆಸರನ್ನು ಸರ್ಕಾರಿ ಶಾಲೆಯ ಹೆಸರಿನೊಂದಿಗೆ ಸೇರಿಸಿಕೊಳ್ಳಬಹುದು. ತಮಿಳುನಾಡಿನ ಗಡಿಯಲ್ಲಿರುವ ಹೆಗ್ಗನೂರು ಸರ್ಕಾರಿ ಶಾಲೆಗೆ, ಹೆಗ್ಗನೂರು ಸರ್ಕಾರಿ ಟೊಯೊಟೋ ಶಾಲೆ ಅಂತ ಹೆಸರಿಡುವುದಕ್ಕೆ ಅವಕಾಶ ಕೊಟ್ಟಿದ್ದೇವೆ' ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+