ಗೃಹ ಜ್ಯೋತಿ ಜಾರಿ ಆದರೂ ಜುಲೈ 15ರವರೆಗೆ ಬಿಲ್ ವಿಧಿಸಿದ ಬೆಸ್ಕಾಂ: ಜಾರ್ಜ್ ಬೇಸರ
ಬೆಂಗಳೂರು, ಜುಲೈ 19: ಜಲೈ 1ರಿಂದಲೇ ತಿಂಗಳಿಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಪೂರೈಕೆಯ ಕರ್ನಾಟಕ ಗೃಹ ಜ್ಯೋತಿ ಯೋಜನೆಯು ಜಾರಿಗೆ ಬರಲಿದೆ ಎಂದು ಸರ್ಕಾರ ಘೋಷಿಸಿದೆ. ಹೀಗಿದ್ದರೂ ಜುಲೈ 15ರವರೆಗೆ ಜನರಿಗೆ ವಿದ್ಯುತ್ ಬಿಲ್ ನೀಡಿರುವುದಕ್ಕೆ ಇಂಧನ ಸಚಿವ ಕೆಜೆ ಜಾರ್ಜ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಮೂಲಕ ಕಾಂಗ್ರೆಸ್ ಸರ್ಕಾರದ ಘೋಷಣೆ ಮಾಡಿದ್ದು ಒಂದು, ಸದ್ಯ ನಡೆದುಕೊಳ್ಳುತ್ತಿರುವುದು ಒಂದು ಎಂಬಂತಾಗಿದೆ.

ಬೆಸ್ಕಾಂ ಜುಲೈ ಮೊದಲ ಹದಿನೈದು ದಿನಗಳ ವಿದ್ಯುತ್ ಉಚಿತ ನೀಡದೇ ಬಿಲ್ ನೀಡಿರುವುದಕ್ಕೆ ಜನರು ಸರ್ಕಾರ ವಿರುದ್ಧ ಕಿಡಿಕಾರುವಂತಾಗಿದೆ.
ಕಾಂಗ್ರೆಸ್ ಘೋಷಿಸಿದಂತೆ ಗೃಹ ಜ್ಯೋತಿ ಯೋಜನೆಯಡಿ ಜುಲೈ ತಿಂಗಳ ಮೊದಲಾರ್ಧದಲ್ಲಿ ಬಳಕೆಯಾಗುವ ವಿದ್ಯುತ್ ಸಂಪೂರ್ಣ ಉಚಿತ. ಇದಕ್ಕೆ ಯಾವುದೇ ಬಿಲ್ ಹಾಕಬಾರದು. ಆದರೆ ಗೃಹ ಜ್ಯೋತಿ ಫಲಾನುಭವಿಗಳಿಗೆ ಜುಲೈ ಎರಡು ವಾರಗಳ ಬಿಲ್ ಕೈ ಸೇರಿದೆ. ಬೆಸ್ಕಾಂನ ಈ ಕ್ರಮವು ಗ್ರಾಹಕರಿಂದ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಜುಲೈನಿಂದಲೇ ಉಚಿತ ವಿದ್ಯುತ್ ಆದೇಶ
ಇಂಧನ ಇಲಾಖೆಯು ಜೂನ್ 15ರಂದು ಆದೇಶ ಹೊರಡಿಸಿದ್ದು, ಅದರ ಪ್ರಕಾರ ಜುಲೈ 1 ರಿಂದ ಜುಲೈ 31 ರವರೆಗೆ ಫಲಾನುಭವಿಗಳ ಮನೆಗಳಿಗೆ ವಿದ್ಯುತ್ ಉಚಿತವಾಗಿದೆ. ಈ ತಿಂಗಳಿಂದ ಗೃಹ ಜ್ಯೋತಿ ಅನ್ವಯವಾಗಲಿದೆ ಎಂದು ತಿಳಿಸಿದೆ.

ಹೀಗಿದ್ದರೂ ಸಹ ಬೆಂಗಳೂರಿನಾದ್ಯಂತ ಯೋಜನೆಗೆ ನೋಂದಾಯಿಸಿದ ಹಲವಾರು ಕುಟುಂಬಗಳಿಗೆ ಜೂನ್ 15 ರಿಂದ ಜುಲೈ 15ರವರೆಗೆ ವಿದ್ಯುತ್ ಬಿಲ್ ಬಂದಿದೆ.
ಮಂಗಳವಾರ ಕಲಾಪದಲ್ಲಿ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರ ಈ ಕುರಿತು ಪ್ರಸ್ತಾಪಿಸಿ ಗಮನ ಸೆಳೆದರು. ಬಿಲ್ ನೀಡಿದ್ದಕ್ಕೆ ಅಧಿಕಾರಿಗಳಿಂದ ಸ್ಪಷ್ಟನೆ ಕೇಳಿದರು. ಜುಲೈ 1 ರಿಂದ ರಾಜ್ಯವು 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಸರಬರಾಜು ಮಾಡುವುದಾಗಿ ಘೋಷಿಸಿತ್ತು. ತಿಂಗಳ ಮೊದಲ 15 ದಿನಗಳಲ್ಲಿ ಬಳಕೆಯಾದ ವಿದ್ಯುತ್‌ಗೆ ಬೆಸ್ಕಾಂ ಅಧಿಕಾರಿಗಳು ನೀವು ಹೇಗೆ ಬಿಲ್ ಮಾಡುತ್ತೀರಿ? ಎಂದು ಸಚಿವರು ಪ್ರಶ್ನಿಸಿದರು.
ಜುಲೈನಿಂದ 200 ಯೂನಿಟ್ ವಿದ್ಯುತ್ ಉಚಿತ
ಜುಲೈನಿಂದ ಫಲಾನುಭವಿಗಳು ಬಳಸುವ ವಿದ್ಯುತ್ 200 ಯೂನಿಟ್ ವರೆಗೆ ಗೃಹ ಜ್ಯೋತಿ ವ್ಯಾಪ್ತಿಗೆ ಒಳಪಡಲಿದೆ. ಆದರೆ ಜೂನ್ ತಿಂಗಳ ಬಿಲ್‌ಗಳನ್ನು ಗ್ರಾಹಕರಿಗೆ ನೀಡಲಾಗುವುದು. ಆಗಸ್ಟ್‌ನಿಂದ ಯಾವ ಬಿಲ್ ನೀಡಲಾಗುವುದಿಲ್ಲ ಎಂದು ಹಿರಿಯ ತಾಂತ್ರಿಕ ಅಧಿಕಾರಿಗಳು ಮಾಹಿತಿ ನೀಡಿದರು.
ಪ್ರತಿ ತಿಂಗಳು 15 ರಿಂದ 15 ರವರೆಗೆ ವಿದ್ಯುತ್ ಬಳಕೆಯ ಬಿಲ್ಲಿಂಗ್ ಚಕ್ರ ಎನ್ನಲಾಗಿದೆ. ಜುಲೈ ಮೊದಲ 15 ದಿನಗಳ ವೆಚ್ಚವನ್ನು ಬೆಸ್ಕಾಂ ಲೆಕ್ಕ ಹಾಕಬೇಕು ಎಂದು ಸಚಿವರು ಸೂಚಿಸಿದರು.
ಜುಲೈ 1 ರಿಂದ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಅನ್ನು ಸರ್ಕಾರ ಘೋಷಿಸಿದಾಗ, ಜುಲೈ 1 ರಿಂದ ಜುಲೈ 15 ರವರೆಗೆ ನೀವು ನಾಗರಿಕರಿಗೆ ಏಕೆ ಶುಲ್ಕ ವಿಧಿಸುವುದು ಎಷ್ಟು ಸರಿ. ಸರ್ಕಾರ ಸಾರ್ವಜನಿಕರಿಗೆ ಭರವಸೆ ನೀಡಿದಂತೆ ನಡೆದುಕೊಳ್ಳಲಿದೆ. ನೀವು (ಬೆಸ್ಕಾಂ) ಜೂನ್ 30 ರವರೆಗೆ ಮಾತ್ರ ವಿದ್ಯುತ್ ಶುಲ್ಕ ಸಂಗ್ರಹಿಸಬೇಕು ಎಂದರು.
ಬಿಲ್ಲಿಂಗ್ ವ್ಯತ್ಯಾಸ ಸರಿಪಡಿಸಲು ಸೂಚನೆ
ಇನ್ನು ಯೋಜನೆ ಜಾರಿ ಆದ ಬಳಿಕ ಜಾರ್ಜ್ ಬಿಲ್ಲಿಂಗ್ ಸೈಕಲ್ ಮತ್ತು ಸಂಬಂಧಿತ ವ್ಯತ್ಯಾಸಗಳನ್ನು ಅಧಿಕಾರಿಗಳು ಸರಿಪಡಿಸಿಕೊಳ್ಳಬೇಕು. ಇಂಧನ ಇಲಾಖೆಯಿಂದ ಕರ್ನಾಟಕದ ಪ್ರತಿ ಅರ್ಹ ಮನೆಗೂ ಉಚಿತ ಯೋಜನೆಯನ್ನು ಸಮರ್ಪಕವಾಗಿ ತಲುಪಿಸುತ್ತೇವೆ ಎಂದು ಭರವಸೆ ನೀಡಿದರು.
ಪ್ರಸ್ತುತ ಬಿಲ್ಲಿಂಗ್ ಕಾರ್ಯವಿಧಾನದ ಕುರಿತು ಸಚಿವರಿಗೆ ವಿವರಿಸಲು ಪ್ರಯತ್ನಿಸಿದೆವು. ಆದರೆ ಅವರು ಜುಲೈ ಮೊದಲಾರ್ಧದಲ್ಲಿ ಬಿಲ್ ವಿಧಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು ಎಂದು ಬೆಸ್ಕಾಂ ಅಧಿಕಾರಿಗಳು ಪ್ರತಿಕ್ರಿಯಿಸಿದರು.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ












Click it and Unblock the Notifications