Gruhajyoti Application: ಸರ್ಕಾರದ ಫ್ರೀ ಸ್ಕೀಮ್ಗೆ ಅಪ್ಲಿಕೇಶನ್ ಹಾಕುವಾಗ ನಕಲಿ ಆಪ್ ಬಗ್ಗೆ ಇರಲಿ ಎಚ್ಚರ!
ಬೆಂಗಳೂರು ಜುಲೈ 13: ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳನ್ನು ಜಾರಿಗೆ ತರುತ್ತಿದೆ. ಫಲಾನುಭವಿಗಳು ಸರ್ಕಾರದ ಯೋಜನೆಯ ಪ್ರಯೋಜನ ಪಡೆಯಲು ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ. ಆದರೆ ಕೆಲ ಗ್ಯಾರಂಟಿಗಳಿಗೆ ಅರ್ಜಿ ಸಲ್ಲಿಸುವಾಗ ಎಚ್ಚರಿಕೆಯಿಂದಿರುವುದು ಉತ್ತಮ. ಯಾಕೆಂದರೆ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳ ಪ್ರಯೋಜನ ಪಡೆಯುವ ದಾವಂತರದಲ್ಲಿ ಯಾವುದೋ ಆಪ್‌ನಲ್ಲಿ ಅರ್ಜಿ ಸಲ್ಲಿಸಲು ಮುಂದಾಗಬೇಡಿ. ಇದರಲ್ಲೂ ನಕಲಿ ಆಪ್‌ಗಳು ತಲೆ ಎತ್ತಿರುವುದು ಬೆಳಕಿಗೆ ಬಂದಿದೆ.
ಹೌದು... ಪಂಚ ಗ್ಯಾರಂಟಿಗಳ ಪ್ರಯೋಜನ ಪಡೆಯಬೇಕು ಅಂದರೆ ಸರ್ಕಾರ ನಿರ್ದೇಶಿಸಿದ ನಿಯಮವನ್ನು ಪಾಲಿಸಬೇಕು. ಇದಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅದಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೀಡಬೇಕು. ಆದರೆ ಅರ್ಜಿ ಸಲ್ಲಿಸಲು ಇರುವ ಆಪ್‌ಗಳ ಪೈಕಿ ಯಾವುದು ಅಸಲಿ ಯಾವುದು ನಕಲಿ ಎಂಬುದನ್ನು ತಿಳಿದಿರುವುದು ಅತ್ಯಗತ್ಯ. ಇಲ್ಲವಾದಲ್ಲಿ ನಿಮ್ಮ ಮಾಹಿತಿಗಳನ್ನು ಬೇರೆಯವರು ಕದಿಯುವ ಸಾಧ್ಯತೆಗಳು ಹೆಚ್ಚಾಗಿದೆ. ಹೀಗಾಗಿ ಅರ್ಜಿ ಸಲ್ಲಿಸುವ ವೇಳೆ ಸರ್ಕಾರದ ಫ್ರೀ ಸ್ಕೀಮ್ ಆಪ್‌ಗಳ ಬಗ್ಗೆ ತಿಳಿದಿರುವುದು ಅತ್ಯಗತ್ಯ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಚುನಾವಣೆಗೂ ಮುನ್ನ ನೀಡಿದ್ದ ಭರವಸೆಗಳನ್ನು ಒಂದೊಂದಾಗಿ ಜಾರಿಗೆ ತರುತ್ತಿದೆ. ಆ ಯೋಜನೆಗಳ ಪ್ರಯೋಜನ ಪಡೆಯಲು ಜನಸಾಮಾನ್ಯರು ಸರ್ಕಾರ ಸೂಚಿಸಿದ ಆಪ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಇಲ್ಲವಾದಲ್ಲಿ ಅದನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಹಾಗಾಗಿ ಜನ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ.
ಆದರೆ ಮೊಬೈಲ್ ಪ್ಲೈ ಸ್ಟೋರ್‌ನಲ್ಲಿ ಒಂದೊಂದು ಸ್ಕೀಮ್ ಹೆಸರಿನಲ್ಲಿ ಐದಾರು ಫೇಕ್ ಆಪ್‌ಗಳು ಹುಟ್ಟಿಕೊಂಡಿವೆ. ಇಂತಹ ನಕಲಿ ಆಪ್‌ನಲ್ಲಿ ಅಪ್ಲಿಕೇಷನ್ ಹಾಕಿದರೆ ಹಣದ ಜೊತೆಗೆ ನಿಮ್ಮ ಪರ್ಸನಲ್ ಡಿಟೇಲ್ಸ್ ಕೂಡ ಬೇರೆಯವರ ಕೈ ಸೇರಬಹುದು. ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ ಹೆಸರಿನಲ್ಲಿ ಐದರಿಂದ ಎರಡು ಮೂರು ಆಪ್‌ಗಳು ಇವೆ. ಹೀಗಾಗಿ ನೀವು ಅರ್ಜಿ ಸಲ್ಲಿಸುವ ಮೂನ್ನ ನೂರು ಬಾರಿ ಯೋಜಿಸಿ, ತಿಳಿದು ಅಪ್ಲಿಕೇಷನ್ ಹಾಕುವುದು ಉತ್ತಮ. ಸರ್ಕಾರದ ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸಬೇಕು.

ಯುವನಿಧಿ ಸ್ಕೀಮ್ ಹೆಸರಿನಲ್ಲಿ ಫೇಕ್ ಆ್ಯಪ್ ಲಭ್ಯವಿದೆ. ಪ್ಲೈ ಸ್ಟೋರ್ ನಲ್ಲಿ ಲಭ್ಯವಿರುವ ಫೇಕ್ ಯುವ ನಿಧಿ ಆ್ಯಪ್ ಹೀಗಿವೆ-
ಯುವ ನಿಧಿ ಆ್ಯಪ್
ಪ್ಲೇ ಸ್ಟೋರ್ ನಲ್ಲಿರುವ ಯುವ ನಿಧಿ ಫೇಕ್ ಆ್ಯಪ್
ಯುವನಿಧಿ ಸ್ಕೀಮ್
ಯುವ ನಿಧಿ ಆನ್ ಲೈನ್ ಆ್ಯಪ್
ಹಾಗಾದರೆ ಗೃಹಲಕ್ಷ್ಮಿ ಹೆಸರಿನಲ್ಲಿ ಇರುವ ಫೇಕ್ ಆ್ಯಪ್ ಗಳು ಯಾವವು ಎನ್ನುವುದರ ಬಗ್ಗೆ ಮಾಹಿತಿ ಪಡೆಯೋಣ.
*ಗೃಹ ಜ್ಯೋತಿ ಸ್ಕೀಮ್
*ಗೃಹಜ್ಯೋತಿ ಆ್ಯಪ್
*ಗೃಹ ಜ್ಯೋತಿ ಸ್ಕೀಮ್
*ಗೃಹಜ್ಯೋತಿ ಹೆಸರಿನಲ್ಲಿರುವ ಫೇಕ್ ಆ್ಯಪ್ ಗಳು
*ಪೋರ್ಟಲ್ ಗೃಹ ಜ್ಯೋತಿ
*ಸ್ಕೀಮ್ ಗೃಹ ಜ್ಯೋತಿ
*ಗೃಹಲಕ್ಷ್ಮಿ ಸ್ಕೀಮ್ ಆ್ಯಪ್
*ಗೃಹಲಕ್ಷ್ಮಿ ಯೋಜನೆ ಅಪ್ಲಿಕೇಶನ್ ಆ್ಯಪ್
*ಗೃಹ ಲಕ್ಷ್ಮಿ ಯೋಜನಾ ಆ್ಯಪ್
*ಕರ್ನಾಟಕ ಲಕ್ಷ್ಮಿ ಯೋಜನಾ ಆ್ಯಪ್
*ಗೃಹ ಜ್ಯೋತಿ ಎಲೆಕ್ಟ್ರಿಸಿಟಿ ಆ್ಯಪ್
ಹೀಗಾಗಿ ಈ ನಕಲಿ ಆಯ್‌ಗಳ ಬಗ್ಗೆ ನಿಮಗೆ ಗಮನವಿರಲಿ. ಈ ಮೂಲಕ ಯಾವುದೇ ಅಪ್ಲಿಕೇಷನ್ ಸಲ್ಲಿಸಲು ಮುಂದಾಗಬೇಡಿ. ಇಲ್ಲವಾದರೆ ನೀವು ಮೋಸ ಹೋಗುವುದು ಖಚಿತ. ಇದರಿಂದ ಸೈಬರ್ ಖದೀಮರಿಗೆ ನಿಮ್ಮ ಡೇಟಾ, ಮಾಹಿತಿ ಪಡೆಯಲು ಸಹಾಯವಾಗುತ್ತದೆ. ನಿಮ್ಮೆಲ್ಲಾ ಮಾಹಿತಿಯನ್ನು ಪಡೆದು ನಿಮಗೆ ಮೋಸ ಮಾಡುವ ಸಾಧ್ಯತೆಗಳು ಹೆಚ್ಚಾಗಿದೆ. ಸರ್ಕಾರದ ಸೇವಾ ಸಿಂಧು ಮೂಲಕ ಮಾತ್ರ ಅರ್ಜಿ ಸಲ್ಲಿಸಿ.












Click it and Unblock the Notifications