Grama One Center Benefits: ಗ್ರಾಮ ಒನ್ ಕೇಂದ್ರದಲ್ಲಿ ಯಾವೆಲ್ಲಾ ಸೇವೆಗಳನ್ನು ಕಡಿಮೆ ವೆಚ್ಚದಲ್ಲಿ ಪಡೆಯಬಹುದು?
Grama One Center Benefits: ಇದೀಗ ಎಲ್ಲಾ ಡಿಜಿಟಲ್ ಮಯವಾಗಿದ್ದು, ಆನ್‌ಲೈನ್‌ನಲ್ಲೇ ಬೇಕಾದ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಇನ್ನು ರಾಜ್ಯದಲ್ಲಿ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಗ್ರಾಮೀಣ ಮಟ್ಟದಲ್ಲಿ ಗ್ರಾಮ ಒನ್ ಕೇಂದ್ರಗಳಿವೆ. ಹಾಗಾದ್ರೆ, ಇದರಲ್ಲಿ ಸಾರ್ವಜನಿಕರು ಕಡಿಮೆ ವೆಚ್ಚದಲ್ಲಿ ಸರ್ಕಾರಿ ಸೌಲಭ್ಯಗಳಿಗೆ ಅರ್ಜಿ ಸಲ್ಲಿಕೆ ಸೇರಿದಂತೆ ಏನೆಲ್ಲಾ ಸೇವೆಯನ್ನು ಪಡೆಯಬಹುದು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಈ ಹಿಂದೆಲ್ಲಾ ಹಳ್ಳಿ ಜನರು ಆನ್‌ಲೈನ್ ಸೇವೆ ಪಡೆಯಬೇಕೆಂದರೆ ನಗರ ಪ್ರದೇಶಗಳಿಗೆ ಭೇಟಿ ನೀಡಬೇಕಿತ್ತು. ಇದರಿಂದ ಸಮಯ ವ್ಯರ್ಥವಲ್ಲದೆ, ಹೆಚ್ಚು ಹಣ ಕೂಡ ಖರ್ಚಾಗುತ್ತಿತ್ತು. ಆದರೆ, ಈಗ ಗ್ರಾಮೀಣ ಮಟ್ಟಗಳಲ್ಲಿ ಗ್ರಾಮ ಒನ್ ಕೇಂದ್ರಗಳು ಇದ್ದು, ಜನರು ಕಡಿಮೆ ದರಲ್ಲಿ ಹಲವು ಸೇವೆಗಳನ್ನು ಪಡೆದುಕೊಳ್ಳಬಹುದು.

ಸರ್ಕಾರಿ ಸೌಲಭ್ಯಗಳಿಗೆ ಅರ್ಜಿ ಸಲ್ಲಿಕೆ ಸೇರಿದಂತೆ ಹಲವು ಸೇವೆಗಳನ್ನು ಗ್ರಾಮ ಒನ್ ಕೇಂದ್ರದಲ್ಲಿ ಪಡೆದುಕೊಳ್ಳಬಹುದು.
ರಾಜ್ಯದಲ್ಲಿ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಗ್ರಾಮೀಣ ಮಟ್ಟದಲ್ಲಿ ಸಾರ್ವಜನಿಕರಿಗೆ ಆನ್‌ಲೈನ್ ಸೇವೆಯನ್ನು ಅತೀ ಕಡಿಮೆ ಬೆಲೆಯಲ್ಲಿ ಒದಗಿಸಲು ಗ್ರಾಮ ಒನ್ ಕೇಂದ್ರಗಳನ್ನು ತೆರೆಯಲಾಗಿದೆ.
ಗ್ರಾಮ ಒನ್ ಕೇಂದ್ರಗಳ ಮೂಲಕ ಅನೇಕ ಸರ್ಕಾರಿ ಯೋಜನೆಯ ಪ್ರಯೋಜನವನ್ನು ಪಡೆಯಲು ಗ್ರಾಮೀಣ ಪ್ರದೇಶದ ನಾಗರಿಕರು ಈ ಕೇಂದ್ರಗಳ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ಇದೆ. ಇದರಲ್ಲಿ ಸಾರ್ವಜನಿಕರು ಗ್ರಾಮ ಒನ್ ಕೇಂದ್ರಗಳಲ್ಲಿ ಹಲವು ಸೇವೆಗಳನ್ನು ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.
ಯಾವುದಕ್ಕೆಲ್ಲಾ ಅರ್ಜಿ ಸಲ್ಲಿಬಹುದು?
* ಸ್ಕಾಲರ್‌ಶಿಪ್
* ಪಹಣಿ
* ಜಾತಿ ಮತ್ತು ಆದಾಯ ಪತ್ರ
* ವಂಶವೃಕ್ಷ ದೃಢೀಕರಣ
* ಪಿಎಂ ಕಿಸಾನ್ ಕೆವೈಸಿ
* ಪಾಸ್‌ಪೋರ್ಟ್
* ಜೆರಾಕ್ಸ್ -ಲ್ಯಾಮಿನೇಷನ್
* ವೋಟರ್ ಐಡಿ
* ಪಾನ್ ಕಾರ್ಡ್
* ಕೃಷಿಗೆ ಸಂಬಂಧಿಸಿದ ಯೋಜನೆಗಳಿಗೆ ಅರ್ಜಿ ಸಲ್ಲಿಸಬಹುದು
* ಆಯುಷ್ಮಾನ್ ಕಾರ್ಡ್
ಏನೆಲ್ಲಾ ಪ್ರಯೋಜನಗಳಿವೆ?
* ವಾಹನಗಳ ವಿಮೆ ಪಡೆದುಕೊಳ್ಳಬಹುದು.
* ಬ್ಯಾಂಕ್ ಸ್ಟೇಟ್‌ಮೆಂಟ್ ತೆಗೆದುಕೊಳ್ಳಬಹುದು.
* ಸಿಬಿಲ್ ರಿಪೋರ್ಟ್
* ಕರೆಂಟ್ ಬಿಲ್ ಕಟ್ಟಬಹುದು
* ಫೋನ್ ಬಿಲ್ ಕಟ್ಟಬಹುದು
* ಇನ್ಸೂರೆನ್ಸ್ ಪ್ರೀಮಿಯಂ
* ಟೈಲರಿಂಗ್ ಸರ್ಟಿಫಿಕೇಟ್ ಪಡೆಯಬಹುದು
* ವಿವಾಹ ನೋಂದಣಿ
* ನೇಮಕಾತಿಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಸಬಹುದು.
* ನಿಗದಿತ ದಿನಾಂಕದೊಳಗೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಬಹುದು
ಅರ್ಜಿ ಸಲ್ಲಿಸುವುದೇಗೆ?
* ಗ್ರಾಮ ಒನ್ ಕೇಂದ್ರಕ್ಕೆ ಸಂಬಂಧಪಟ್ಟ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿ.
* ಹತ್ತಿರ ಇರುವ ಕೇಂದ್ರದ ವಿಳಾಸದ ಮಾಹಿತಿಯನ್ನು ಪಡೆದು ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಇನ್ನು ವಿವಿಧ ಬಗ್ಗೆಯ ಸರ್ಕಾರಿ ಯೋಜನೆಯ ಸೌಲಭ್ಯವನ್ನು ಪಡೆಯಲು ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಕೆ ಮಾಡಲು ಹತ್ತಿರದಲ್ಲಿರುವ ಗ್ರಾಮ ಒನ್ ಕೇಂದ್ರದ ವಿಳಾಸವನ್ನು ಪಡೆಯಲು ಗ್ರಾಮ ಒನ್ ಕೇಂದ್ರದ ವೆಬ್‌ಸೈಟ್‌ಗೆ ಭೇಟಿ ನೀಡಿ. ಅಲ್ಲಿ ನಿಮಗೆ ಬೇಕಿರುವ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಒಟ್ಟಿನಲ್ಲಿ ಹೇಳೋದಾದ್ರೆ, ಗ್ರಾಮ ಒನ್‌ನಲ್ಲಿ ಆನ್‌ಲೈನ್ ಅರ್ಜಿಯನ್ನು ಕಡಿಮೆ ವೆಚ್ಚದಲ್ಲಿ ಸಲ್ಲಿಸಬಹುದು.












Click it and Unblock the Notifications