Explainer: ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ: ಗ್ರಾಮೀಣ ಪ್ರದೇಶದ ಆಸ್ತಿ ಮೇಲಿನ ಪರಿಣಾಮ
ಬೆಂಗಳೂರು, ಮಾರ್ಚ್ 20: ಕರ್ನಾಟಕ ವಿಧಾನಸಭೆ ಬಜೆಟ್ ಅಧಿವೇಶನ ನಡೆಯುತ್ತಿದೆ. ಅಧಿವೇಶನದಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ, 2025ಕ್ಕೆ ಒಪ್ಪಿಗೆ ಸಿಕ್ಕಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ಅನ್ನು ಮತ್ತಷ್ಟು ತಿದ್ದುಪಡಿ ಮಾಡಲು ಈ ವಿಧೇಯಕವನ್ನು ಮಂಡನೆ ಮಾಡಲಾಗಿತ್ತು. ಇದು ಈ ಕೂಡಲೇ ಜಾರಿಗೆ ಬರತಕ್ಕದ್ದು ಎಂದು ಕರ್ನಾಟಕ ಸರ್ಕಾರ ಹೇಳಿದೆ.
ಈ ಅಧಿನಿಯಮವನ್ನು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಅಧಿನಿಯಮ, 2025 ಎಂದು ಕರೆಯಲಾಗುತ್ತದೆ. 199ಬಿ ಮತ್ತು 199ಸಿ ಹೊಸ ಪ್ರಕರಣಗಳ ಸೇರ್ಪಡೆಯಾಗಿದ್ದು, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 (1993ರ ಕರ್ನಾಟಕ ಅಧಿನಿಯಮ 14)ರ 199ಎ ಪ್ರಕರಣದ ತರುವಾಯ "199ಬಿ ಸ್ವತ್ತುಗಳಿಗಾಗಿ ಹೊಸ ಖಾತಾ ಅಥವಾ ಪಿಐಡಿಯನ್ನು ನೀಡುವುದು. ಈ ಅಧಿನಿಯಮದಲ್ಲಿ ಏನೇ ಒಳಗೊಂಡಿದ್ದರೂ, ಕಟ್ಟಡ ನಿರ್ಮಾಣದ ಉದ್ದೇಶಗಳಿಗಾಗಿ ಇರುವ ಕಟ್ಟಡ ನಿವೇಶನಗಳಿಗಾಗಿ ಹೊಸ ಖಾತಾ ಅಥವಾ ಪಿಐಡಿಯನ್ನು ನೀಡಲು, ಗ್ರಾಮ ಪಂಚಾಯತಿ ಅಥವಾ ಸರ್ಕಾರವು ಅಧಿಸೂಚನೆಯ ಮೂಲಕ ಗೊತ್ತುಪಡಿಸಲಾದ ಪ್ರಾಧಿಕಾರಿಗಳು, ಅಧಿಕಾರವ್ಯಾಪ್ತಿಯ ಯೋಜನಾ ಪ್ರಾಧಿಕಾರದ ಮೂಲಕ ಲೇಔಟ್ ಪ್ಲಾನಿಗಾಗಿ ಪೂರ್ವಾನುಮೋದನೆಯನ್ನು ಪಡೆದುಕೊಳ್ಳತಕ್ಕದ್ದು ಎಂದು ಹೇಳಿದೆ.

ಹೊಸ ಅಧಿನಿಯಮದ ವಿವರಗಳು: ಗ್ರಾಮ ಪಂಚಾಯತಿ ಪ್ರದೇಶಗಳು ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನ ಅಧಿನಿಯಮ, 1961 (1963ರ ಕರ್ನಾಟಕ ಅಧಿನಿಯಮ 11)ರ ಉಪಬಂಧಗಳ ಮೇರೆಗೆ ಅಧಿಸೂಚಿಸಲಾದ ಸ್ಥಳೀಯ ಯೋಜನಾ ಪ್ರದೇಶದ ಅಧಿಕಾರವ್ಯಾಪ್ತಿಯಡಿ ಬರುವ ಸಂದರ್ಭದಲ್ಲಿ, ಅನುಮೋದಿತ ಲೇಔಟ್ ಪ್ಲಾನ್ ಅನ್ನು ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಅಧಿನಿಯಮ, 1961 (1963ರ ಕರ್ನಾಟಕ ಅಧಿನಿಯಮ 11)ರ 17ನೇ ಪ್ರಕರಣದಡಿ ಅಧಿಕಾರ ವ್ಯಾಪ್ತಿಯ ಯೋಜನಾ ಪ್ರಾಧಿಕಾರದಿಂದ ಪಡೆಯತಕ್ಕದ್ದು ಮತ್ತು ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಅಧಿನಿಯಮ, 1961 (1963ರ ಕರ್ನಾಟಕ ಅಧಿನಿಯಮ 11)ರ 17ನೇ ಪ್ರಕರಣ ಮತ್ತು 17ನೇ ಪ್ರಕರಣದ 2(ಇ) ಉಪ-ಪ್ರಕರಣದ ಉಪಬಂಧಗಳನ್ನು ಪಾಲಿಸದೇ ಯಾವುದೇ ಹೊಸ ಪಿಐಡಿ ಅಥವಾ ಖಾತಾವನ್ನು ನೀಡತಕ್ಕದ್ದಲ್ಲ ಎಂದು ತಿಳಿಸಿದೆ.
ಸ್ಥಳೀಯ ಯೋಜನಾ ಪ್ರದೇಶದ ಅಧಿಕಾರವ್ಯಾಪ್ತಿಯಡಿ ಒಳಗೊಳ್ಳದಿರುವ ಸಂದರ್ಭದಲ್ಲಿ ಅನುಮೋದಿತ ಲೇಔಟ್ ಪ್ಲಾನ್ ಅನ್ನು ಪಟ್ಟಣ ಮತ್ತು ನಗರ ಯೋಜನೆ ನಿರ್ದೇಶಕ ಅಥವಾ ನಿರ್ದೇಶಕನು, ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಅಧಿನಿಯಮ, 1961 (1963ರ ಕರ್ನಾಟಕ ಅಧಿನಿಯಮ 11)ರ 4 ಕೆ ಪ್ರಕರಣದ (2) ಉಪ-ಪ್ರಕರಣದಡಿ ಅಧಿಕೃತಗೊಳಿಸಿದ ಸಹಾಯಕ ನಿರ್ದೇಶಕ, ಪಟ್ಟಣ ಮತ್ತು ನಗರ ಯೋಜನೆ ದರ್ಜೆಗೆ ಕಡಿಮೆಯಲ್ಲದ ಅಧಿಕಾರಿಯಿಂದ ಪಡೆದುಕೊಳ್ಳತಕ್ಕದ್ದು, ಮತ್ತು ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಅಧಿನಿಯಮ, 1961 (1963ರ ಕರ್ನಾಟಕ ಅಧಿನಿಯಮ 11)ರ ಉಪಬಂಧಗಳನ್ನು ಪಾಲಿಸದೇ ಯಾವುದೇ ಹೊಸ ಪಿಐಡಿ ಅಥವಾ ಖಾತಾವನ್ನು ನೀಡತಕ್ಕದ್ದಲ್ಲ ಎಂದು ಹೇಳಿದೆ.
ಗ್ರಾಮ ಪಂಚಾಯಿತಿಯ ಯಾರೇ ಅಧಿಕಾರಿ ಅಥವಾ ಪ್ರಾಧಿಕಾರಿಯು ಸದರಿ ಉಪಬಂಧಗಳನ್ನು ಪಾಲಿಸಲು ವಿಫಲನಾದರೆ ಮತ್ತು ಕಾನೂನುಬದ್ಧವಾಗಿಲ್ಲದೆ ರಚಿತವಾದ ನಿವೇಶನಕ್ಕೆ ಹೊಸ ಪಿಐಡಿ ಅಥವಾ ಖಾತಾವನ್ನು ನೀಡಿದರೆ, ಸಂಬಂಧಪಟ್ಟ ಅಧಿಕಾರಿ ಅಥವಾ ಸಿಬ್ಬಂದಿ ಅಥವಾ ಪ್ರಾಧಿಕಾರಿಯು ನಿಯಮಿಸಬಹುದಾದಂಥ ದಂಡನೆ ಅಥವಾ ಶಿಕ್ಷೆಗೆ ಹೊಣೆಗಾರನಾಗಿರತಕ್ಕದ್ದು ಎಂದು ಎಚ್ಚರಿಕೆ ನೀಡಲಾಗಿದೆ.
199ಸಿ. ಕಟ್ಟಡ ಮತ್ತು ಪರಿವರ್ತನೆಯಾಗದಿರುವ ಭೂಮಿ ಅಥವಾ ಪರಿವರ್ತನೆಯಾದ ಭೂಮಿ ಆದರೆ ಕಂದಾಯ ಭೂಮಿಯಲ್ಲಿನ ಅನುಮೋದಿತವಲ್ಲದ ಬಡಾವಣೆಯ ಮೇಲಿನ ತೆರಿಗೆಗಳು. ಗ್ರಾಮ ಪಂಚಾಯಿತಿಯು ಮಾದರಿ ಕಟ್ಟಡ ಉಪವಿಧಿಗಳ ಉಪಬಂಧಗಳನ್ನು ಉಲ್ಲಂಘಿಸಿ ನಿರ್ಮಿಸಲಾದ ಕಟ್ಟಡ ಅಥವಾ ಪರಿವರ್ತನೆಯಾಗದಿರುವ ಭೂಮಿ ಅಥವಾ ಪರಿವರ್ತನೆಯಾದ ಭೂಮಿ ಆದರೆ ಕಂದಾಯ ಭೂಮಿಯ ಮೇಲಿನ ಅನುಮೋದಿತವಲ್ಲದ ಲೇಔಟ್ ಅಥವಾ ಅಧಿಭೋಗ ಅಥವಾ ಪೂರ್ಣಗೊಳಿಸಿದ ಪ್ರಮಾಣ ಪತ್ರವನ್ನು ಪಡೆಯದ ಸ್ವಾಧೀನ ಪಡಿಸಿಕೊಂಡ ಕಟ್ಟಡವನ್ನು ಒಳಗೊಂಡು ಪ್ರತಿಯೊಂದು ಕಟ್ಟಡ, ಖಾಲಿ ಭೂಮಿ ಅಥವಾ ಅವೆರಡರಿಂದಲೂ, ಈ ಉಪಬಂಧವನ್ನು ಸೇರಿಸಲಾದ ದಿನಾಂಕಕ್ಕೆ ಮೊದಲು ಸೃಜಿಸಲಾದ ಸ್ವತ್ತುಗಳಿಗೆ ಮಾತ್ರ, ಸರ್ಕಾರಿ ಭೂಮಿ, ಅರಣ್ಯ ಭೂಮಿ, ಸರ್ಕಾರದ ಒಡೆತನದಲ್ಲಿರುವ ಅಥವಾ ನಿಯಂತ್ರಣದಲ್ಲಿರುವ ಯಾವುದೇ ಸ್ಥಳೀಯ ನಿಕಾಯ, ಯಾವುದೇ ಶಾಸನಬದ್ಧ ನಿಕಾಯ ಅಥವಾ ಸಂಸ್ಥೆಗೆ ಸೇರಿದ ಭೂಮಿಯನ್ನು ಹೊರತುಪಡಿಸಿ ಸ್ವತ್ತು ತೆರಿಗೆಯನ್ನು ವಿಧಿಸಬಹುದು ಮತ್ತು ಸಂಗ್ರಹಿಸಬಹುದು.
ಅಂಥ ಕಟ್ಟಡ ಅಥವಾ ನಿವೇಶನಕ್ಕಾಗಿ ವಿಧಿಸಿದ ಸ್ವತ್ತು ತೆರಿಗೆಯು ಮೊದಲ ವರ್ಷಕ್ಕಾಗಿ ಪಾವತಿಸಬೇಕಾದ ತೆರಿಗೆಯು ಎರಡು ಪಟ್ಟಾಗಿರತಕ್ಕದ್ದು ಮತ್ತು ತರುವಾಯ ವರ್ಷಗಳಿಗಾಗಿ ಸ್ವತ್ತು ತೆರಿಗೆಯನ್ನು ಮಾತ್ರ ವಿಧಿಸತಕ್ಕದ್ದು, ಅದನ್ನು ಪ್ರತ್ಯೇಕ ರಿಜಿಸ್ಟರಿನಲ್ಲಿ ನಿರ್ವಹಿಸತಕ್ಕದ್ದು, ಅಧಿನಿಯಮ, 2025ರ ಪ್ರಾರಂಭದ ದಿನಾಂಕದ ತರುವಾಯ ರಿಜಿಸ್ಟರ್‌ನಲ್ಲಿ ಯಾವುದೇ ಹೊಸ ಸ್ವತ್ತನ್ನು ನಮೂದಿಸತಕ್ಕದ್ದಲ್ಲ. ಅಂಥ ಕಟ್ಟಡ ಅಥವಾ ಖಾಲಿ ಭೂಮಿಯಿಂದ ಈ ಉಪ-ಪ್ರಕರಣದಡಿ ವಿಧಿಸಲಾದ ಮತ್ತು ಸಂಗ್ರಹಿಸಲಾದ ಸ್ವತ್ತು ತೆರಿಗೆಯ, ಅಂಥ ಕಟ್ಟಡ ಅಥವಾ ಖಾಲಿ ಭೂಮಿಗೆ ಮಾಡಿದ ಉಲ್ಲಂಘನೆಯನ್ನು ಸಕ್ರಮಗೊಳಿಸುವ ಯಾವುದೇ ಹಕ್ಕು, ಅಥವಾ ಹಕ್ಕುಸ್ವಾಮ್ಯ, ಮಾಲೀಕತ್ವ ಅಥವಾ ಕಾನೂನುಬದ್ಧ ಸ್ಥಾನಮಾನವನ್ನು ಪದತ್ತಗೊಳಿಸುವುದಿಲ್ಲ ಅಂಥ ಕಟ್ಟಡ ಅಥವಾ ಖಾಲಿ ಭೂಮಿಯನ್ನು ಹೊಂದಿರುವ ವ್ಯಕ್ತಿಗಳನ್ನು ಕಾನೂನು ಉಲ್ಲಂಘನೆಗಾಗಿ ಈ ಅಧಿನಿಯಮ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಉಪಬಂಧಗಳಿಗೆ ಅನುಸಾರವಾಗಿ ಕಾನೂನುಬದ್ಧ ಕ್ರಮಕ್ಕೆ ಯಾವಾಗಲೂ ಹೊಣೆಗಾರರಾಗಿರತಕ್ಕದ್ದು.
ಹಿರಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅಥವಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯು ನಿರ್ದಿಷ್ಟಪಡಿಸಿದಂತೆ ದಾಖಲೆಗಳನ್ನು ನಿರ್ವಹಿಸತಕ್ಕದ್ದು, ಅದು ಈ ಪ್ರಕರಣದಡಿ ತೆರಿಗೆಗೊಳಗಾದ ಕಾನೂನುಬದ್ದ ಕಟ್ಟಡಗಳ, ಅಥವಾ ಖಾಲಿ ಭೂಮಿಗಳ ಹಾಗೂ ಕಾನೂನುಬದ್ಧವಲ್ಲದ ಕಟ್ಟಡಗಳ, ಅಥವಾ ಖಾಲಿ ಭೂಮಿಗಳ ವಿವರಗಳನ್ನು ಒಳಗೊಂಡಿರತಕ್ಕದ್ದು. ತೊಂದರೆಗಳನ್ನು ನಿವಾರಿಸುವ ಅಧಿಕಾರ. ಈ ಅಧಿನಿಯಮದ ಉಪಬಂಧಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಯಾವುದೇ ತೊಂದರೆ ಉದ್ಭವಿಸಿದಲ್ಲಿ, ರಾಜ್ಯ ಸರ್ಕಾರವು ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟಿಸಿದ ಆದೇಶದ ಮೂಲಕ, ತೊಂದರೆಗಳನ್ನು ನಿವಾರಿಸಲು ತನಗೆ ಅವಶ್ಯಕ ಅಥವಾ ಯುಕ್ತವೆಂದು ಕಂಡುಬರುವ ಮತ್ತು ಈ ಅಧಿನಿಯಮದ ಉದ್ದೇಶಗಳಿಗೆ ಅಸಂಗತವಾಗಿದಂಥ ಉಪಬಂಧಗಳನ್ನು ರಚಿಸಬಹುದು. ಅಂಥ ಯಾವ ಆದೇಶವನ್ನು, ಈ ಅಧಿನಿಯಮವು ಪ್ರಾರಂಭವಾದ ದಿನಾಂಕದಿಂದ ಎರಡು ವರ್ಷಗಳ ಅವಧಿಯು ಮುಕ್ತಾಯಗೊಂಡ ತರುವಾಯ ಮಾಡತಕ್ಕದ್ದಲ್ಲ.
2025ರ ಪ್ರಾರಂಭದ ದಿನಾಂಕದ ತರುವಾಯ ರಿಜಿಸ್ಟರ್‌ನಲ್ಲಿ ಯಾವುದೇ ಹೊಸ ಸ್ವತ್ತನ್ನು ನಮೂದಿಸತಕ್ಕದ್ದಲ್ಲ. ಪರಂತು ಅಂಥ ಕಟ್ಟಡ ಅಥವಾ ಖಾಲಿ ಭೂಮಿಯಿಂದ ಈ ಉಪ-ಪ್ರಕರಣದಡಿ ವಿಧಿಸಲಾದ ಮತ್ತು ಸಂಗ್ರಹಿಸಲಾದ ಸ್ವತ್ತು ತೆರಿಗೆಯ, ಅಂಥ ಕಟ್ಟಡ ಅಥವಾ ಖಾಲಿ ಭೂಮಿಗೆ ಮಾಡಿದ ಉಲ್ಲಂಘನೆಯನ್ನು ಸಕ್ರಮಗೊಳಿಸುವ ಯಾವುದೇ ಹಕ್ಕು, ಅಥವಾ ಹಕ್ಕುಸ್ವಾಮ್ಯ, ಮಾಲೀಕತ್ವ ಅಥವಾ ಕಾನೂನುಬದ್ಧ ಸ್ಥಾನಮಾನವನ್ನು ಪದತ್ತಗೊಳಿಸುವುದಿಲ್ಲ ಅಂಥ ಕಟ್ಟಡ ಅಥವಾ ಖಾಲಿ ಭೂಮಿಯನ್ನು ಹೊಂದಿರುವ ವ್ಯಕ್ತಿಗಳನ್ನು ಕಾನೂನು ಉಲ್ಲಂಘನೆಗಾಗಿ ಈ ಅಧಿನಿಯಮ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಉಪಬಂಧಗಳಿಗೆ ಅನುಸಾರವಾಗಿ ಕಾನೂನುಬದ್ಧ ಕ್ರಮಕ್ಕೆ ಯಾವಾಗಲೂ ಹೊಣೆಗಾರರಾಗಿರತಕ್ಕದ್ದು.
-
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ -
ವಿಶ್ವಮಾತೆ ಎನ್ನುತ್ತಾ ಶ್ರೀಚಾಮುಂಡೇಶ್ವರಿಯ ಕನ್ನಡ ಹಾಡು ಹಂಚಿಕೊಂಡ ಪ್ರಧಾನಿ ಮೋದಿ -
ಮಾರ್ಚ್ 21ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications