Gram Panchayat; ಪಂಚಾಯಿತಿ ಸಿಬ್ಬಂದಿಗೆ ಕನಿಷ್ಠ ವೇತನ, ಆದೇಶ

ಬೆಂಗಳೂರು, ಡಿಸೆಂಬರ್ 04; ಕರ್ನಾಟಕ ಸರ್ಕಾರ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಸಿಹಿಸುದ್ದಿ ನೀಡಿದೆ. ಕನಿಷ್ಠ ವೇತನ ಕಾಯ್ದೆ ಅನ್ವಯ ವೇತನ ಪಾವತಿಸುವಂತೆ ಪಂಚಾಯತ್‌ರಾಜ್ ಆಯುಕ್ತಾಲಯ ಸುತ್ತೋಲೆಯನ್ನು ಹೊರಡಿಸಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆ ಕನಿಷ್ಠ ವೇತನದ ಕುರಿತು ಸುತ್ತೋಲೆ ಮೂಲಕ ಮಾಹಿತಿ ನೀಡಿದೆ. ಸುತ್ತೋಲೆಯಲ್ಲಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳು ಕಾರ್ಮಿಕ ಇಲಾಖೆಯ ಕನಿಷ್ಠ ವೇತನ ಕಾಯ್ದೆ ದರಗಳ ಅನ್ವಯ ಮಾತ್ರ ಸಿಬ್ಬಂದಿ ವೇತನ ಪಾವತಿಸಬೇಕು ಎಂದು ಹೇಳಿದೆ.

Gram Panchayat Employees Minimum Wages Circular

ಯಾವುದೇ ಕಾರಣಕ್ಕೂ ಹೆಚ್ಚುವರಿ ಪಾವತಿ ಮಾಡಲು ಅವಕಾಶವಿಲ್ಲ. ಆದರೆ ನಿಯಮಾನುಸಾರ ನೇಮಕಗೊಂಡ ಸಿಬ್ಭಂದಿಗೆ ಪ್ರಸ್ತುತ ಪಾವತಿಸುತ್ತಿರುವ ವೇತನ ಕಾರ್ಮಿಕ ಇಲಾಖೆ ನಿಗದಿಪಡಿಸಿದ ಕನಿಷ್ಠ ವೇತನಕ್ಕಿಂತ ಹೆಚ್ಚಾಗಿದ್ದಲ್ಲಿ ಸದರಿ ವೇತನದಿಂದ ಸರ್ಕಾರ ಬಿಡುಗಡೆಗೊಳಿಸಿದ ಮೊತ್ತದಲ್ಲಿ ಕನಿಷ್ಠ ವೇತನ ಮಾತ್ರ ಪಾವತಿಸಬೇಕು ಎಂದು ತಿಳಿಸಲಾಗಿದೆ.

ಹೆಚ್ಚುವರಿ ಮೊತ್ತವನ್ನು ಗ್ರಾಮ ಪಂಚಾಯಿತಿಗಳು ತಮ್ಮ ಸ್ವಂತ ಸಂಪನ್ಮೂಲದ ಅನುದಾನದಲ್ಲಿ ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

ಹಿಂಬರದಹ ಮಾಹಿತಿ; ಉಪ ಕಾರ್ಮಿಕ ಆಯುಕ್ತರು, ಪ್ರಾದೇಶಿಕ-1 14/9/2023ರಂದು ಹಿಂಬರಹವೊಂದನ್ನು ಹೊರಡಿಸಿದ್ದರು. ಇದರಲ್ಲಿ ಸಹ ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಠ ವೇತನ ದರಕ್ಕಿಂತ ಹೆಚ್ಚು ಪಾವತಿಸುತ್ತಿರುವ ವೇತವನ್ನು ಕಡಿತ ಮಾಡಿರುವ ಕುರಿತು ಮಾಹಿತಿ ನೀಡಲಾಗಿತ್ತು.

ಈ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಕಛೇರಿಯ ಆದೇಶದೊಂದಿಗೆ ಪರಿಶೀಲಿಸಲಾಗಿದೆ. ಅರ್ಜಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರಿಗೆ ಕನಿಷ್ಟ ವೇತನಕ್ಕಿಂತ ಹೆಚ್ಚಿನ ವೇತನ ಪಾವತಿಸಲಾಗುತ್ತಿದ್ದು, ಕಾರ್ಮಿಕ ಇಲಾಖೆಯು ಅಧಿಸೂಚನೆ ದಿನಾಂಕ 04/08/2023ರ ಅಧಿಸೂಚನೆಯಲ್ಲಿ ಕಾರ್ಮಿಕ ಇಲಾಖೆ ನಿಗದಿಪಡಿಸಿರುವ ಕನಿಷ್ಟ ವೇತನಕ್ಕಿಂತ ಹೆಚ್ಚುವರಿ ವೇತನವನ್ನು ಪಾವತಿ ಮಾಡಲು ಅವಕಾಶವಿಲ್ಲವೆಂದು ತಿಳಿಸಿರುವುದಿಲ್ಲ.

ಆದಾಗ್ಯೂ ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯವು ಕಾರ್ಮಿಕ ಇಲಾಖೆ ನಿಗದಿಪಡಿಸಿರುವ ಕನಿಷ್ಟ ವೇತನಕ್ಕಿಂತ ಹೆಚ್ಚುವರಿ ವೇತನವನ್ನು ಪಾವತಿ ಮಾಡಲು ಅವಕಾಶವಿಲ್ಲವೆಂದು ದಿನಾಂಕ 14/07/2023ರಂದು ಸುತ್ತೋಲೆ ಹೊರಡಿಸಿ, ಈ ಹಿಂದಿನ ವೇತನ ಪಾವತಿಗಳನ್ನೇ ಹೆಚ್ಚುವರಿ ವೇತನವನ್ನು ತಡೆಹಿಡಿದಿರುತ್ತದೆಂದು ಹೀಗಾಗಿ ಮುಂದುವರಿಸಬೇಕೆಂದು ಕೋರಿರುತ್ತಾರೆ.

ಮುಂದುವರೆದು, ಕಾರ್ಮಿಕ ಇಲಾಖೆ ನಿಗದಿಪಡಿಸಿರುವ ಕನಿಷ್ಟ ವೇತನಕ್ಕಿಂತ ಹೆಚ್ಚುವರಿ ವೇತನವನ್ನು ಪಾವತಿಸಲು ಯಾವುದೇ ನಿರ್ಬಂಧ ಇರುವುದಿಲ್ಲ. ಒಂದು ವೇಳೆ ಈ ಹೆಚ್ಚುವರಿ ವೇತನಗಳನ್ನು ಪಾವತಿಸದೇ ಇದ್ದಲ್ಲಿ ಕಾರ್ಯ ವ್ಯಾಪ್ತಿಯ ಉಪಕಾರ್ಮಿಕ ಆಯುಕ್ತರ ಮುಂದೆ ವೇತನ ಪಾವತಿ ಕಾಯ್ದೆ, 1936ರಡಿ ಕ್ಷೇಮ್ ಅರ್ಜಿ ಸಲ್ಲಿಸಿ, ಪರಿಹಾರ ಪಡೆಯಬಹುದಾಗಿರುತ್ತದೆ. ಅದರಂತೆ ಕ್ರಮ ವಹಿಸಲು ತಿಳಿಸಿ, ಈ ಹಿಂಬರಹವನ್ನು ಜಾರಿ ಮಾಡಿದೆ ಎಂದು ಹೇಳಿದ್ದರು.

ಕೆಲವು ದಿನಗಳ ಹಿಂದೆ ಸರ್ಕಾರ ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಜಿಲ್ಲಾ ಪಂಚಾಯತಿ ಅನುಮೋದನೆಯಾಗದೇ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ವಿದ್ಯಾರ್ಹತೆ ಹೊರತುಪಡಿಸಿ, ಅದರಲ್ಲೂ ಜವಾನ, ಸ್ವಚ್ಛತಾಗಾರರು, ನೀರುಗಂಟಿಗಳಿಗೆ ವಿದ್ಯಾರ್ಹತೆ ಕೈಬಿಟ್ಟು ಸಭಾನಡವಳಿ, ವೇತನ ಪಾವತಿ, ಹಾಜರಾತಿ ಆಧಾರದಲ್ಲಿ ಒಂದು ಬಾರಿಗೆ ಅನುಮೋದನೆ ನೀಡಬೇಕಾಗಿ ಕೋರಿರುತ್ತಾರೆ.

ಮಾನ್ಯ ಸಚಿವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ವಿವಿಧ ಸಂಘಗಳೊಂದಿಗೆ ಸದರಿ ಗ್ರಾಮ ಪಂಚಾಯತ್ ಸಿಬ್ಬಂದಿಗಳ ಬೇಡಿಕೆಗಳ ಕುರಿತು ಸಭೆಯನ್ನು ದಿನಾಂಕ 21/07/2023ರಂದು ನಡೆಸಲಾಗಿದೆ. ಬಳಿಕ ಆದೇಶ ಹೊರಡಿಸಲಾಗಿದೆ.

ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಒಂದು ಬಾರಿಗೆ ಜಿಲ್ಲಾ ಪಂಚಾಯಿತಿಯಿಂದ ಘಟನೋತ್ತರವಾಗಿ ಅನುಮೋದನೆ ನೀಡಲು ಆದೇಶಿಸಲಾಗಿತ್ತು. ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ದಿನಾಂಕ 31/10/2017ರ ಪೂರ್ವದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾರ್ಹತೆ ಹೊಂದಿಲ್ಲದ ಕಾರಣಕ್ಕೆ ಜಿಲ್ಲಾ ಪಂಚಾಯತಿಯಿಂದ ಅನುಮೋದನೆಯಾಗದೇ ಸೇವೆ ಸಲ್ಲಿಸುತ್ತಿರುವ, ಗ್ರಾಮ ಪಂಚಾಯತಿ ಸಿಬ್ಬಂದಿಗಳಿಗೆ ಒಂದು ಬಾರಿಗೆ ಅನುಮೋದನೆ ನೀಡುವ ಬಗ್ಗೆ ಎಂಬ ಆದೇಶ ಹೊರಡಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+