ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕಿಯರಿಗೆ ಹೆರಿಗೆ ರಜೆ, ಸ್ಪಷ್ಟನೆ

ಬೆಂಗಳೂರು, ಡಿಸೆಂಬರ್ 12; ಕರ್ನಾಟಕ ಸರ್ಕಾರ 2022-23ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಆಯ್ಕೆಯಾದ ಪದವೀಧರ ಪ್ರಾಥಮಿಕ ಶಿಕ್ಷಕರು (6 ರಿಂದ 8ನೇ ತರಗತಿ) ನೇಮಕಾತಿ ಪೂರ್ಣಗೊಳಿಸಿ ಸ್ಥಳ ನಿಯೋಜನೆ ಮಾಡಿದೆ.

ಈಗ ಶಾಲಾ ಶಿಕ್ಷಣ ಇಲಾಖೆ ಆಯುಕ್ತರ ಕಛೇರಿ ಹೊಸದಾಗಿ ಸೇವೆಗೆ ಸೇರಿದ ಶಿಕ್ಷಕಿಯರಿಗೆ ಹೆರಿಗೆ ರಜೆ ಮಂಜೂರಾತಿ ಕುರಿತು ಜ್ಞಾಪನಾ ಪತ್ರವನ್ನು ಹೊರಡಿಸಿದೆ. ಬಿ. ಬಿ. ಕಾವೇರಿ, ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ ಈ ಕುರಿತು ಜ್ಞಾಪನಾ ಪತ್ರ ಹೊರಡಿಸಿದ್ದಾರೆ.

Graduate Primary Teacher Recruitment Maternity Leave Circular

ಈ ಜ್ಞಾಪನಾ ಪತ್ರವು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪದವೀಧರ ಪ್ರಾಥಮಿಕ ಶಿಕ್ಷಕರಾಗಿ (6 ರಿಂದ 8ನೇ ತರಗತಿಗೆ) ಹೊಸದಾಗಿ ಸೇವೆಗೆ ಸೇರಿದ ಶಿಕ್ಷಕಿಯರಿಗೆ ಹೆರಿಗೆ ರಜೆ ಮಂಜೂರಾತಿ ಕುರಿತು ಎಂಬ ವಿಷಯ ಒಳಗೊಂಡಿದೆ.

ಹಾವೇರಿ ಜಿಲ್ಲೆಯಲ್ಲಿನ ಬ್ಯಾಡಗಿ ತಾಲ್ಲೂಕಿನ, ಬಿಸಿಲಹಳ್ಳಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ನೇಮಕಾತಿಗೊಂಡಿರುವ ಮಂಜವ್ಯ ಸೆರೆಯಣ್ಣನವರು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ದಿನಾಂಕ 27/10/2023ರಂದು ನೇಮಕಗೊಂಡಿದ್ದು, ಸದರಿ ಶಿಕ್ಷಕಿಯು ಅಕ್ಟೋಬರ್ 8ರಂದು ಎರಡನೇ ಮಗುವಿಗೆ ಜನ್ಮ ನೀಡಿರುತ್ತಾರೆ.

ಅದೇ ರೀತಿಯಾಗಿ ಹಾನಗಲ್ ತಾಲ್ಲೂಕಿನ ಬಾಳಂಬೀಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವಿದ್ಯಾಶ್ರೀ ಚ ಪಾಟೀಲ ಇವರು ದಿನಾಂಕ 31/10/2023ರಂದು ಶಾಲಾ ಕರ್ತವ್ಯಕ್ಕೆ ಹಾಜರಾಗಿದ್ದು, ದಿನಾಂಕ 26/09/2023 ರಂದು ಮೊದಲನೇ ಮಗುವಿಗೆ ಜನ್ಮ ನೀಡಿರುತ್ತಾರೆ.

ಸದರಿ ಇಬ್ಬರು ಶಿಕ್ಷಕರುಗಳು ಸರ್ಕಾರಿ ಸೇವೆಗೆ ಸೇರುವ ಪೂರ್ವದಲ್ಲಿ ಮಗುವಿಗೆ ಜನ್ಮ ನೀಡಿರುವ ಹಿನ್ನೆಲೆಯಲ್ಲಿ ಸದರಿಯವರುಗಳಿಗೆ ಹೆರಿಗೆ ರಜೆ ಮಂಜೂರಾತಿ ನೀಡಲು ಮಾರ್ಗದರ್ಶನ ಕೋರಿರುತ್ತಾರೆ. ಆದ್ದರಿಂದ ಜ್ಞಾಪನಾ ಪತ್ರದಲ್ಲಿ ಸ್ಪಷ್ಟನೆ ನೀಡಲಾಗಿದೆ.

ಪತ್ರದ ವಿವರಗಳು; ಹೇಮಲತಾ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ತಟ್ಟಿಹಳ್ಳಿ ನಾಗಮಂಗಲ ತಾಲ್ಲೂಕು, ಮಂಡ್ಯ ಜಿಲ್ಲೆ, ಇವರು ದಿನಾಂಕ 21/11/2023ರಂದು ಶಾಲಾ ಕರ್ತವ್ಯಕ್ಕೆ ಹಾಜರಾಗಿದ್ದು, 1 ತಿಂಗಳು 15 ದಿವಸಗಳ ಮಗುವಿದ್ದು, ಇವರಿಗೆ ಶಿಶುಪಾಲನಾ ರಜೆ ಮಂಜೂರಾತಿ ನೀಡುವ ಬಗ್ಗೆ ಮಾರ್ಗದರ್ಶನ ಕೋರಿರುತ್ತಾರೆ.

ಈ ಸಂಬಂದ ಪರಿಶೀಲಿಸಿ ಕೆ.ಸಿ.ಎಸ್.ಆರ್. ನಿಯಮ 135ರನ್ವಯ ಮಹಿಳಾ ಸರ್ಕಾರಿ ನೌಕರರಿಗೆ 180 ದಿನಗಳಿಗೆ ಪ್ರಾರಂಭದ ದಿನಾಂಕದಿಂದ ಮಂಜೂರು ಮಾಡಲು ಅವಕಾಶವನ್ನು ಕಲ್ಪಿಸಲಾಗಿದೆ. ಆದರೆ, ಈ ಪ್ರಕರಣದಲ್ಲಿ ಸದರಿ ಶಿಕ್ಷಕಿಗೆ ಸರ್ಕಾರಿ ನೌಕರಿಗೆ ಸೇರುವ ಪೂರ್ವದಲ್ಲಿಯೇ ಹೆರಿಗೆಯಾಗಿದ್ದು, ನಂತರದಲ್ಲಿ ಸರ್ಕಾರಿ ಸೇವೆಯ ಕರ್ತವ ಹಾಜರಾಗಿರುವುದು ಕಂಡುಬಂದಿರುತ್ತದೆ.

ಸರ್ಕಾರಿ ಆದೇಶ ದಿನಾಂಕ 21/06/2021ರಲ್ಲಿನ ಪ್ರಕಾರ, ಯಾವುದೇ ಮಹಿಳಾ ಸರ್ಕಾರಿ ನೌಕರರಿಗೆ ಕಿರಿಯ ಮಗುವು 18 ವರ್ಷ ತಲುಪುವವರೆಗಿನ ಅವಧಿಗೆ ಶಿಶುಪಾಲನಾ ರಜೆಗೆ ಅರ್ಹ ಇರುತ್ತದೆ, ಪ್ರಯುಕ್ತ, ಮೇಲಿನ ಪ್ರಕರಣಗಳ ಹಿನ್ನಲೆಯಲ್ಲಿನ ವಿಶೇಷ ಸಂದರ್ಭವನ್ನು ಪರಿಗಣಿಸಿದೆ.

ಇಂತಹ ಪ್ರಕರಣಗಳಲ್ಲಿ ಸೇವೆಗೆ ಸೇರುವ ಮೊದಲೇ ಹೆರಿಗೆಯಾಗಿರುವುದರಿಂದ ಮತ್ತು ಈಗಾಗಲೇ ಸೇವೆಯಲ್ಲಿರುವ ನೌಕರರಿಗೆ 6 ತಿಂಗಳ ಹೆರಿಗೆ ರಜೆ ಸೌಲಭ್ಯವಿರುವುದನ್ನು ಗಮನಿಸಿ, ಅಯಿಯ ಹಾಗೂ ಮಗುವಿನ ಆರೈಕೆಯ ಹಿತದೃಷ್ಟಿಯಿಂದ ಮಗುವಿಗೆ 6 ತಿಂಗಳು ತುಂಬುವವರೆಗೆ ದಿನಾಂಕ 21/06/2021ರ ಸರ್ಕಾರಿ ಆದೇಶದ ಷರತ್ತುಗಳಿಗೆ ಒಳವಟ್ಟು ಶಿಶುಪಾಲನಾ ರಜೆಯನ್ನು ಮಂಜೂರು ಮಾಡಲು ತಿಳಿಸಿದೆ ಎಂದು ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+