ಸೋಲಾರ್ ವಿದ್ಯುತ್ ಉತ್ಪಾದನೆಗೆ ಸರ್ಕಾರದಿಂದಲೇ ಸಾಲ ಸೌಲಭ್ಯ

Posted By:
Subscribe to Oneindia Kannada

ಬೆಂಗಳೂರು, ಮೇ 04 : 'ದಿನದಿಂದ ದಿನಕ್ಕೆ ವಿದ್ಯುತ್ ಬೇಡಿಕೆ ಹೆಚ್ಚಾಗುತ್ತಿದ್ದು, ರಾಜ್ಯದಲ್ಲಿ ಸೌರ ವಿದ್ಯುತ್ ಉತ್ಪಾದನೆಗೆ ಆದ್ಯತೆ ನೀಡಲಾಗುತ್ತದೆ. ಸೋಲಾರ್ ವಿದ್ಯುತ್ ವ್ಯವಸ್ಥೆ ಅಳವಡಿಸಿಕೊಳ್ಳಲು ಸರ್ಕಾರವೇ ಸಾಲ ಸೌಲಭ್ಯ ನೀಡಲಿದೆ' ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.

ವಿಧಾನಸೌಧದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಸಚಿವರು, 'ಎಲ್ಲಾ ಮನೆಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಆಸ್ಪತ್ರೆಗಳು ತಮ್ಮ ಕಟ್ಟಡದ ಮೇಲ್ಛಾವಣಿ ಮೇಲೆ ಸೋಲಾರ್ ಫಲಕಗಳನ್ನು ಅಳವಡಿಸಿಕೊಂಡು ವಿದ್ಯುತ್ ಉತ್ಪಾದನೆ ಮಾಡಬಹುದು' ಎಂದರು.[ಸರ್ಕಾರಿ ಕಚೇರಿಗಳಲ್ಲಿ ಇನ್ನು ಸೋಲಾರ್ ವಿದ್ಯುತ್ ಉತ್ಪಾದನೆ]

dk shivakumar

'ಆಸ್ಪತ್ರೆ, ವಸತಿಗೃಹ ಹಾಗೂ ಶಿಕ್ಷಣ ಸಂಸ್ಥೆಗಳ ಮೇಲ್ಛಾವಣಿಗಳ ಮೇಲೆ ಅಳವಡಿಸುವ ಉತ್ಪಾದನೆಯಾಗುವ ಸೋಲಾರ್ ವಿದ್ಯುತ್ ಖರೀದಿ ಮಾಡುವ ದರ ಪರಿಷ್ಕರಣೆ ಮಾಡಲಾಗಿದೆ. ಹಿಂದೆ ನೆಟ್ ಮೀಟರಿಂಗ್ ವ್ಯವಸ್ಥೆ ಇತ್ತು. ಇನ್ನು ಮುಂದೆ ಗ್ರಾಸ್ ಮೀಟರಿಂಗ್ ವ್ಯವಸ್ಥೆ ಜಾರಿಗೆ ಬರಲಿದೆ. ಹಿಂದೆ ಪ್ರತಿ ಯೂನಿಟ್‌ಗೆ 9.56 ರೂ. ನೀಡಿ ಖರೀದಿ ಮಾಡಲಾಗುತ್ತಿತ್ತು. ಈಗ ಅದನ್ನು 7.8 ರೂ. ಗೆ ಖರೀದಿ ಮಾಡಲು ನಿರ್ಧರಿಸಲಾಗಿದೆ' ಎಂದು ಹೇಳಿದರು. [ಕರ್ನಾಟಕ ಹೈಕೋರ್ಟಿಗೆ ಸೌರಶಕ್ತಿ ಬಲ]

'ಕಟ್ಟಡದ ಮೇಲ್ಛಾವಣಿ ಮೇಲೆ ಕನಿಷ್ಟ 1 ಕೆವಿ ಸಾಮರ್ಥ್ಯದ ಸೋಲಾರ್ ಫಲಕ ಅಳವಡಿಸಿಕೊಳ್ಳಲು 75 ಸಾವಿರ ರೂ. ಬೇಕಾಗುತ್ತದೆ. ಎಷ್ಟು ಕೆವಿ ಸಾಮರ್ಥ್ಯದ ವಿದ್ಯುತ್ ಪ್ಯಾನಲ್ ಅಳವಡಿಸಿಕೊಳ್ಳಲು ಅವರಿಗೆ ಸಾಧ್ಯವೋ?ಅಳವಡಿಸಿಕೊಳ್ಳಲಿ. ಅವರಿಗೆ ಬ್ಯಾಂಕ್ ಸಾಲವನ್ನು ಸರ್ಕಾರವೇ ಕೊಡಿಸುತ್ತದೆ' ಎಂದರು.[ಪಾವಗಡಕ್ಕೆ ಬಂತು ಏಷ್ಯಾದ ದೊಡ್ಡ ಸೋಲಾರ್ ಪಾರ್ಕ್]

'ಮಳೆ ಕೊಯ್ಲು ಮಾದರಿಯಲ್ಲಿ ಕಟ್ಟಡಗಳ ಮೇಲೆ ಸೋಲಾರ್ ಫಲಕ ಅಳವಡಿಸಿಕೊಳ್ಳುವುದನ್ನು ಕಡ್ಡಾಯ ಮಾಡಲು ಸಾಧ್ಯವಿಲ್ಲ. ಆದರೆ, ಹೊಸದಾಗಿ ಕಟ್ಟುವ ಕಟ್ಟಡಗಳ ಮೇಲೆ ಸೋಲಾರ್ ಫಲಕ ಅಳವಡಿಕೆ ಕಡ್ಡಾಯಗೊಳಿಸಬಹುದು' ಎಂದು ಹೇಳಿದರು.

solar energy

ಲೋಡ್ ಶೆಡ್ಡಿಂಗ್ ಇಲ್ಲ : 'ರಾಜ್ಯದಲ್ಲಿ ಅವೈಜ್ಞಾನಿಕ ಲೋಡ್ ಶೆಡ್ಡಿಂಗ್ ಇಲ್ಲ ಎಂದು ಹೇಳಿದ ಸಚಿವರು ರಾಮನಗರ ಜಿಲ್ಲೆಯ ಬಿಡದಿ ಹತ್ತಿರ 400 ಕೆ.ವಿ. ವಿದ್ಯುತ್ ಟವರ್ ಸ್ಥಾಪನೆಗೆ ಸಂಬಂಧಿಸಿದಂತೆ ಸಮಸ್ಯೆ ಇತ್ತು. ಇಂದು ಆ ಭಾಗದ ರೈತರು, ಎಲ್ ಅಂಡ್ ಟಿ ಅಧಿಕಾರಿಗಳು ಹಾಗೂ ಇಂಧನ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗಿದೆ' ಎಂದು ತಿಳಿಸಿದರು.

ಕೈ ಕೊಟ್ಟ ಕರೆಂಟ್ : ಅವೈಜ್ಞಾನಿಕ ಲೋಡ್ ಶೆಡ್ಡಿಂಗ್ ಜಾರಿಯಲ್ಲಲ್ಲಿ ಎಂದು ಸಚಿವರು ಹೇಳುವ ವೇಳೆಗೆ ಸರಿಯಾಗಿ ಕರೆಂಟ್ ಹೋಯಿತು. ತಕ್ಷಣ ಪತ್ರಕರ್ತರು ಇದು ಆಟೋಮ್ಯಾಟಿಕ್ ಲೋಡ್ ಶೆಡ್ಡಿಂಗ್‌ಗೆ? ಎಂದು ಪ್ರಶ್ನಿಸಿದರು. ಸಚಿವರು ನಸುನಗುವ ಹೊತ್ತಿಗೆ ಕರೆಂಟ್ ಬಂದಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Karnataka government will help to earn money at home every month with a solar panel. Electricity by solar plant on the roof can be made, you can sell the electricity to power companies in the cost of 7.8 Rs per unit said, Energy Minister D.K.Shivakumar on Wednesday.
Please Wait while comments are loading...