ಸಾಹಿತಿಗಳಿಗಾಗಿ 'ಬಯಲು ವಸ್ತುಸಂಗ್ರಹಾಲಯ' ಸ್ಥಾಪನೆಗೆ ಚಿಂತನೆ: ಸಿಎಂ
ಬೆಂಗಳೂರು, ಡಿಸೆಂಬರ್ 15: ಕನ್ನಡ ನಾಡಿಗೆ ಜ್ಞಾನಪೀಠ ಪ್ರಶಸ್ತಿ ಹಾಗೂ ಅಪರೂಪದ ಸಾಹಿತ್ಯವನ್ನು ನೀಡಿದವರಿಗೆ ಗೌರವಾರ್ಥವಾಗಿ ಬಯಲು ವಸ್ತುಸಂಗ್ರಹಾಲಯ (ಓಪನ್ ಏರ್ ಮ್ಯೂಸಿಯಂ) ಸ್ಥಾಪಿಸಲಾಗುವುದು. ಅಲ್ಲಿ ಆ ಸಾಹಿತಿಗಳ ಪ್ರತಿಮೆಗಳನ್ನು ನಿರ್ಮಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಗುರುವಾರ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ಅವರ 'ನುಡಿನಮನ-ಮೊದಲು ಮಾನವನಾಗು' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಾಮಾನ್ಯವಾಗಿ ರಾಜಕಾರಣಿಗಳ ಪ್ರತಿಮೆಗಳನ್ನು ಸ್ಥಾಪಿಸಲಾಗುತ್ತದೆ. ಆದರೆ ಸಾಹಿತಿಗಳ ಪ್ರತಿಮೆ ಅಪರೂಪ. ಉದ್ದೇಶಿತ ವಸ್ತು ಸಂಗ್ರಹಾಲಯದಲ್ಲಿ ಶಿವಮೊಗ್ಗ ಸುಬ್ಬಣ್ಣ ಅವರಿಗೆ ವಿಶೇಷವಾದ ಸ್ಥಾನವಿರಲಿದೆ ಎಂದರು.
ವಿಭಿನ್ನ ವ್ಯಕ್ತಿಯಾಗಿದ್ದ ಸುಬ್ಬಣ್ಣ ಅವರ ವ್ಯಕ್ತಿತ್ವ, ಧ್ವನಿ, ಆತ್ಮೀಯತೆ, ಚಿಂತನೆ, ತತ್ವಾದರ್ಶಗಳು ತಮ್ಮದೇ ಆದ ಮೆರಗನ್ನು ಹೊಂದಿವೆ. ಇನ್ನೊಬ್ಬ ಸುಬ್ಬಣ್ಣ ಇರಲು ಸಾಧ್ಯವಿಲ್ಲ. ಹಾಗಾಗಿ ಸುಬ್ಬಣ್ಣ ಅವರನ್ನು ಎಲ್ಲರೂ ಚಿರಕಾಲ ಸ್ಮರಿಸುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದು ತಿಳಿಸಿದರು.

ಧರ್ಮದ ಚೌಕಟ್ಟು ಮೀರಿದ ತತ್ವ ಹೇಳಿದ ಕವಿ
ಶರೀಫರು ಧರ್ಮದ ಚೌಕಟ್ಟನ್ನು ಮೀರಿ ತಮ್ಮ ತತ್ವಗಳನ್ನು ಮನಮುಟ್ಟುವಂತೆ ಹೇಳುತ್ತಿದ್ದ ಕವಿ .ಶಿಶುನಾಳ ಶರೀಫರು ದಿನನಿತ್ಯ ಮಾಡುವ ಕರ್ಮಗಳಲ್ಲಿ ತತ್ವಗಳನ್ನು ಅಳವಡಿಸಿದ್ದಾರೆ. ತತ್ವ ಮತ್ತು ಮಾರ್ಮಿಕತೆಗೆ ವಿಶೇಷ ಭಾವನೆಗಳನ್ನು ನೀಡಿದವರು ಶಿವಮೊಗ್ಗ ಸುಬ್ಬಣ್ಣ. ತಮ್ಮ ಭಾಗದಲ್ಲಿ ಪ್ರಸಿದ್ಧರಾಗಿದ್ದ ಶರೀಫರನ್ನು ಇಡೀ ಕರ್ನಾಟಕಕ್ಕೆ ಮತ್ತು ಭಾರತಕ್ಕೆ ಶಿಶುನಾಳ ಶರೀಫರನ್ನು ಪರಿಚಯಿಸಿದ್ದು ಸುಬ್ಬಣ್ಣ. ಸಂತ ಶಿಶುನಾಳ ಶರೀಫರ ತತ್ವ ಹಾಗೂ ಸುಬ್ಬಣ್ಣನವರ ಗಾಯನದ ಉತ್ಕಷ್ಠತೆ ಅನನ್ಯವಾದುದು ಎಂದರು.

ಸಾಹಿತ್ಯ, ಸಂಗೀತದ ರಕ್ಷಣೆಗೆ ಸದಾ ಬದ್ಧ
ಅವರು ಕನ್ನಡ ನಾಡಿನಲ್ಲಿ ಹುಟ್ಟಿಬೆಳೆದ ಸುಬ್ಬಣ್ಣನವರ ಸಮಕಾಲೀನರಾಗಿ ನಾವು ಕೂಡ ಇದ್ದೆವು ಎನ್ನುವ ಭಾವನೆಯೇ ಹೆಮ್ಮೆ ಹಾಗೂ ಸಂತೋಷ ತರುತ್ತದೆ. ಕನ್ನಡ ನಾಡು ಹಾಗೂ ಭಾಷೆಯನ್ನು ಶ್ರೀಮಂತಗೊಳಿಸಿದವರೇ ಇಂಥ ಸಾಹಿತಿಗಳು ಹಾಗೂ ಗಾಯಕರು. ಇಂಥವರನ್ನು ನಾವು ಉಳಿಸಿಕೊಂಡು, ಚಿರಸ್ಮರಣೀಯವಾಗಿ ಇಟ್ಟುಕೊಂಡು ಮುಂದಿನ ಜನಾಂಗಕ್ಕೆ ಪರಿಚಯಿಸುವುದು ನಮ್ಮೆಲ್ಲರ ಕರ್ತವ್ಯ. ಸುಬ್ಬಣ್ಣ ಅವರ ಬಗ್ಗೆ ಗಾಯನಗಳ ಬಗ್ಗೆ ಅಧ್ಯಯನ ಮಾಡಿ, ಇನ್ನಷ್ಟು ಪ್ರಸಿದ್ಧಿಗೆ ತರುವ ಕೆಲಸವನ್ನು ಕನ್ನಡ ಮತ್ತು ಸಂಸ್ಕಂತಿ ಇಲಾಖೆಯ ಮಾಡಲಿದೆ. ನಾನು ಸುಬ್ಬಣ್ಣ ಅವರ ಅಭಿಮಾನಿ. ಕನ್ನಡ ನಾಡಿನ ಅದ್ಭುತ ಸಾಹಿತ್ಯ, ಸಂಗೀತದ ರಕ್ಷಣೆಗೆ ಸದಾ ಬದ್ಧ ಎಂದು ಹೇಳಿದರು.

ಕವಿತೆಗಳಿಗೆ ಜೀವ ತುಂಬುವಂತಹ ಹಾಡುಗಾರಿಕೆ
ಶಿವಮೊಗ್ಗ ಸುಬ್ಬಣ್ಣ ಅವರಿಗೆ ನಾನು ಒಬ್ಬ ಅಭಿಮಾನಿ ಅಷ್ಟೆ. ಅವರನ್ನು ಹತ್ತಿರದಿಂದ ಬಲ್ಲವನಾಗಿದ್ದರೂ ಅಭಿಮಾನಿಯಾಗಿ ಉಳಿಯುತ್ತೇನೆ. ನಾನು ಅಭಿಮಾನಿಯಾಗಿ ಗುರುತಿಸಿಕೊಂಡಿರಲು ಬಯಸುತ್ತೇನೆ. ಅದನ್ನು ಕಳೆದುಕೊಳ್ಳಲು ಬಯಸುವುದಿಲ್ಲ. ಅವರ ಗಡುಸಾದ ಧ್ವನಿಯಲ್ಲಿ ಇಂಪಾಗಿ ಹಾಡುವುದು ಸುಲಭವಲ್ಲ. ಅವರು ತಮ್ಮ ಧ್ವನಿಯಿಂದ ಕವಿತೆಗಳಿಗೆ ಜೀವ ತುಂಬುವಂತೆ ಅತ್ಯಂತ ಸರಳ ಹಾಗೂ ಸುಲಭವಾಗಿ ಹಾಡುತ್ತಿದ್ದರು ಎಂದು ಬೊಮ್ಮಾಯಿ ಸ್ಮರಿಸಿದರು.

ಸಂಗೀತ, ಸಾಹಿತ್ಯ ಸಾಧಕರು ಹಾವೇರಿಯವರು
ಸಂಗೀತ ಮತ್ತು ಸಾಹಿತ್ಯಕ್ಕೆ ಕೊಡುಗೆ ನೀಡಿದ ದ.ರಾ ಬೇಂದ್ರೆ, ವಿಕೃ ಗೊಕಾಕ್, ಬಸವರಾಜ ರಾಜಗುರು, ಮಲ್ಲಿಕಾರ್ಜುನ ಮನ್ಸೂರು, ಗಂಗೂಬಾಯಿ ಹಾನಗಲ್, ಕನಕದಾಸರು ಕೂಡ ಹಾವೇರಿ ಜಿಲ್ಲೆಯ ಶಿಗ್ಗಾವಿಯವರು. ಸಂಗೀತ ಸಾಹಿತ್ಯ ಕ್ಷೇತ್ರಕ್ಕೆ ನಮ್ಮ ಸರ್ಕಾರ ಏನಾದರೂ ಕೊಡುಗೆ ನೀಡುತ್ತದೆ. ಸುಬ್ಬಣ್ಣ ಅವರ ಹಾಡು ಸದಾಕಾಲ ಜೀವಂತವಾಗಿರುತ್ತದೆ. ಸ್ವಾಮಿ ವಿವೇಕಾನಂದರು ಹೇಳಿದಂತೆ ಸಾಧಕನಿಗೆ ಸಾವು ಅಂತ್ಯವಲ್ಲ, ಸಾವಿನ ನಂತರವೂ ಬದುಕುವವನು ಸಾಧಕ. ಸುಬ್ಬಣ್ಣನವರು ತಮ್ಮ ಸಂಗೀತ ಹಾಗೂ ಸಾಧನೆಗಳ ಮೂಲಕ ಜನಮನದಲ್ಲಿ ಚಿರಸ್ಥಾಯಿಯಾಗಿ ಇರುತ್ತಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಂದಾಯ ಸಚಿವ ಆರ್. ಅಶೋಕ್, ಸಾಹಿತಿ ಚಂದ್ರಶೇಖರ ಕಂಬಾರ, ಕವಿ ಎಚ್. ಎಸ್. ವೆಂಕಟೇಶ ಮೂರ್ತಿ, ಲಹರಿ ವೇಲು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications