ಶಕ್ತಿ ಯೋಜನೆ: 4 ನಿಗಮಗಳಿಗೆ 'ಶೂನ್ಯ ಟಿಕೆಟ್' ವೆಚ್ಚದ ಹಣ ಬಿಡುಗಡೆ ಮಾಡಿ ಸರ್ಕಾರ ಆದೇಶ

ಬೆಂಗಳೂರು, ಆಗಸ್ಟ್ 21: ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವದ 'ಶಕ್ತಿ ಯೋಜನೆ'ಯಡಿ ರಾಜ್ಯಾದ್ಯಂತ ಮಹಿಳೆಯರಿಗೆ ನಾಲ್ಕು ನಿಗಮದ ಬಸ್‌ಗಳಲ್ಲಿ ಉಚಿತವಾಗಿ ಟಿಕೆಟ್ ನೀಡಲಾಗಿದೆ. ಈ ಸಂಬಂಧ ಸರ್ಕಾರ, BMTC, KSRTC, NWKRTC ಮತ್ತು KKRTC ನಿಗಮಗಳಿಗೆ ಉದ್ದೇಶಿತ ಅನುದಾನ ಬಿಡುಗಡೆ ಮಾಡಿ ಸೋಮವಾರ ಆದೇಶ ಹೊರಡಿಸಿದೆ.

ಜೂನ್ 11 ರಿಂದ ಜಾರಿಗೆ ಬಂದ 'ಶಕ್ತಿ ಯೋಜನೆ' (Shakti Scheme) ಮೂಲಕ ಕೋಟ್ಯಂತರ ಮಹಿಳೆಯರು ಉಚಿತವಾಗಿ ಸರ್ಕಾರಿ ಸಾರಿಗೆಯಲ್ಲಿ ಸಂಚರಿಸಿದ್ದಾರೆ. ಈ ಹಣವನ್ನು ಸರ್ಕಾರವೇ ಭರಿಸುವುದಾಗಿ ಹೇಳಿತ್ತು ಅದರಂತೆ ಜೂನ್ ಮತ್ತು ಜುಲೈ ತಿಂಗಳ ಹಣ ಬಿಡುಗಡೆ ಮಾಡಲಾಗಿದೆ.

Govt Released Money To 4 Transport Corporation June July Free Ticket Amount Under Shakti Scheme

ಜೂನ್ 11ರ ಮಧ್ಯಾಹ್ನದಿಂದ ಜೂನ್ 31ರ ವರೆಗೆ ಉಚಿತ ಪ್ರಮಾಣಕ್ಕೆ ಭರಿಸಲಾದ ಹಣವನ್ನು ಸರ್ಕಾರ ಬಿಡುಗಡೆ ಮಾಡಿದೆ. ಅಂದರೆ ಜೂನ್ ತಿಂಗಳ ಶಕ್ತಿ ಯೋಜನೆ ಹಣ ನಾಲ್ಕು ನಿಗಮಕ್ಕೆ ಒದಗಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಜೂನ್ ತಿಂಗಳ ಶಕ್ತಿ ಯೋಜನೆಯ ಹಣ 'ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ (KSRTC) 7364.90 ಲಕ್ಷ ರೂಪಾಯಿ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ (BMTC) 3416.07ಲಕ್ಷ ರೂಪಾಯಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ (NWKRTC) 5018.27 ಲಕ್ಷ ರೂಪಾಯಿ, ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ (KKRTC) 3133.75 ಲಕ್ಷ ರೂಪಾಯಿ ಹಣ ಬಿಡುಗಡೆ ಮಾಡಲಾಗಿದೆ.

ಜುಲೈ ತಿಂಗಳ ಹಣ ಬಿಡುಗಡೆ ಮಾಹಿತಿ

ನಾಲ್ಕು ಸಾರಿಗೆ ನಿಗಮದ ಬಸ್‌ಗಳಲ್ಲಿ ಮಹಿಳೆಯರಿಗೆ ಇವಿಎಂ ಯಂತ್ರದ ಮೂಲಕ ಶೂನ್ಯ ಟಿಕೆಟ್ ನೀಡಿರುತ್ತಾರೆ. ಅದೇ ರೀತಿ ನಾಲ್ಕು ನಿಗಮಗಳ ಅಧಕಾರಿಗಳು ಜುಲೈ ತಿಂಗಳಲ್ಲಿ ಮಾಡಲಾದ ವೆಚ್ಚದ 456,58,66,115 ಹಣ ಬಿಡುಗಡೆ ಮಾಡುವಂತೆ ಈಗಾಗಲೇ ಕೋರಿದ್ದಾರೆ.

ಅದಕ್ಕೆ ಪ್ರತಿಕ್ರಿಯಿಸಿರುವ ಸರ್ಕಾರ ಜುಲೈ ತಿಂಗಳಲ್ಲಿ KSRTC ನಿಗಮಕ್ಕೆ 11076.33 ಲಕ್ಷ ರೂಪಾಯಿ, BMTC ನಿಗಮಕ್ಕೆ 5131.42ಲಕ್ಷ ರೂಪಾಯಿ, NWKRTC ನಿಗಮಕ್ಕೆ 7651.45 ಲಕ್ಷ ರೂಪಾಯಿ ಹಾಗೂ KKRTC ನಿಗಮಕ್ಕೆ 5614.80 ಲಕ್ಷ ರೂಪಾಯಿ ಸೇರಿ ಕಳೆದ ತಿಂಗಳಲ್ಲಿ 29474.00 ಲಕ್ಷ ಹಣ ಬಿಡುಗಡೆ ಮಾಡಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+