14 ಆಸ್ಪತ್ರೆಗಳಲ್ಲಿ ಆರಂಭವಾಗಲಿದೆ ಡಿಎನ್‌ಬಿ ಕೋರ್ಸ್
ಬೆಂಗಳೂರು, ನವೆಂಬರ್ 21 : ಕರ್ನಾಟಕ ಸರ್ಕಾರ ರಾಜ್ಯದ 14 ಆಸ್ಪತ್ರೆಗಳಲ್ಲಿ ಡಿಎನ್‌ಬಿ ಕೋರ್ಸ್ ಆರಂಭಿಸಲು ನಿರ್ಧರಿಸಿದೆ. ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಈಗಾಗಲೇ ಈ ಕೋರ್ಸ್ ಆರಂಭಿಸಲಾಗಿದೆ.
ಕೇಂದ್ರ ಸರ್ಕಾರ ರಾಜ್ಯದ 10 ಜಿಲ್ಲೆಗಳ 14 ಆಸ್ಪತ್ರೆಗಳಲ್ಲಿ ಡಿಪ್ಲೊಮೆಟ್ ಆಫ್ ನ್ಯಾಷನಲ್ ಬೋರ್ಡ್ (ಡಿಎನ್‌ಬಿ) ಕೋರ್ಸ್ ಆರಂಭಿಸಲು ಒಪ್ಪಿಗೆ ನೀಡಿದೆ. 2018ರ ಜನವರಿಯಿಂದ ವಿವಿಧ ಜಿಲ್ಲೆಗಳಲ್ಲಿ ಕೋರ್ಸ್ ಪ್ರಾರಂಭಿಸಲಾಗುತ್ತದೆ.

ಎಂಬಿಬಿಎಸ್ ನಂತರ ಎಂಡಿ, ಎಂಎಸ್‌ಗೆ ಸಮನಾದ ಕೋರ್ಸ್ ಇದಾಗಿದೆ. ರಾಷ್ಟ್ರೀಯ ಆರೋಗ್ಯ ಯೋಜನೆ ಸಹಭಾಗಿತ್ವದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಈ ಕೋರ್ಸ್ ಅನ್ನು ಈಗಾಗಲೇ ಆರಂಭಿಸಿದೆ.
ಧಾರವಾಡ, ವಿಜಯಪುರ, ಚಿತ್ರದುರ್ಗ, ಬಳ್ಳಾರಿ, ಬಾಗಲಕೋಟೆ, ಕೋಲಾರ, ತುಮಕೂರು, ಕಲಬುರಗಿ ಜಿಲ್ಲೆಗಳ 14 ಆಸ್ಪತ್ರೆಗಳಲ್ಲಿ ಈ ಕೋರ್ಸ್ ಆರಂಭಿಸಲಾಗುತ್ತದೆ. 2018ರ ಜನವರಿಯಿಂದ ಕೋರ್ಸ್ ಆರಂಭಗೊಳ್ಳಲಿದೆ.
ಎಂಬಿಬಿಎಸ್ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಈ ಕೋರ್ಸಿಗೆ ಸೇರಬಹುದಾಗಿದ್ದು, ಪ್ರತಿ ವಿದ್ಯಾರ್ಥಿಗೆ ಮಾಸಿಕ 35 ಸಾವಿರ ಸ್ಟೈ ಫಂಡ್ ಸಿಗಲಿದೆ.












Click it and Unblock the Notifications