Get Updates
Get notified of breaking news, exclusive insights, and must-see stories!

ಮುಂದಿನ ಮಾರ್ಚ್ ವೇಳೆಗೆ ಬೆಂಗಳೂರು ಸ್ಮಾರ್ಟ್ ಸಿಟಿ, ಯೋಜನೆಯ ವೆಚ್ಚವೆಷ್ಟು ಗೊತ್ತೆ..?

ಬೆಂಗಳೂರು, ಡಿ. 28: ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೆತ್ತಿಕೊಂಡ 44 ಕಾಮಗಾರಿಗಳ ಪೈಕಿ 30 ಪೂರ್ಣಗೊಂಡಿದ್ದು, ಉಳಿದ 14 ಯೋಜನೆಗಳನ್ನು ಈ ಆರ್ಥಿಕ ವರ್ಷದ ಅಂತ್ಯದೊಳಗೆ ಪೂರ್ಣಗೊಳಿಸಲು ಸರ್ಕಾರ ಮುಂದಾಗಿದೆ.

ಬೆಂಗಳೂರು ಸ್ಮಾರ್ಟ್ ಸಿಟಿ ಕಾಮಗಾರಿ ಯೋಜನೆಗೆ ಒಟ್ಟು 1,000 ಕೋಟಿ ರೂಪಾಯಿ ವ್ಯಯಿಸಲಾಗುತ್ತಿದೆ. ಈ ಯೋಜನೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರರಗಳೆರಡು ಸಮಾನವಾಗಿ ಹಣ ವ್ಯಯಿಸುತ್ತಿವೆ. ಒಟ್ಟು 900 ಕೋಟಿ ರೂ.ಗೂ ಅಧಿಕ ಮೊತ್ತದ ಕಾಮಗಾರಿಗಳಿಗೆ ಸರ್ಕಾರ ಯೋಜನೆ ರೂಪಿಸಿದೆ. ಇದರಲ್ಲಿ ಟೆಂಡರ್‌ಶುರ್‌ನಿಂದ ಪಾರ್ಕ್ ಮರುಅಭಿವೃದ್ಧಿ, ಸ್ಮಾರ್ಟ್ ತಂತ್ರಜ್ಞಾನಗಳ ಪರಿಚಯ ಸೇರಿದಂತೆ ಹಲವು ಯೋಜನೆಗಳಿವೆ.

ಸರ್ಕಾರದ ಮಾಹಿತಿ ಪ್ರಕಾರ ಒಟ್ಟು 930 ಕೋಟಿ ರೂಪಾಯಿ ವಿವಿಧ ಯೋಜನೆಗಳಿಗೆ ವೆಚ್ಚವಾಗಲಿದ್ದು, ಆಡಳಿತಾತ್ಮಕ ವೆಚ್ಚಕ್ಕೆ 30 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ.

ಕೇಂದ್ರ, ರಾಜ್ಯ ಸರ್ಕಾರಗಳಿಂದ 1,000 ಕೋಟಿ ಬಿಡುಗಡೆ

ಕೇಂದ್ರ, ರಾಜ್ಯ ಸರ್ಕಾರಗಳಿಂದ 1,000 ಕೋಟಿ ಬಿಡುಗಡೆ

ಈ ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರವು 2018 - 19 ಮತ್ತು 2022-23 ರ ನಡುವೆ 804 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. 2018 - 2019 ರಲ್ಲಿ ರೂ 110 ಕೋಟಿ, 2019 - 2020 ರಲ್ಲಿ 100 ಕೋಟಿ ರೂಪಾಯಿ ಬಿಡುಗಡೆಯಾಗಿದೆ.

2020 - 2021 ರಲ್ಲಿ 184 ಕೋಟಿ ರೂಪಾಯಿ, 2021- 2022 ರಲ್ಲಿ 312 ಕೋಟಿ ಬಿಡುಗಡೆಯಾಗಿದ್ದರೇ 2022 - 23ರಲ್ಲಿ 98 ಕೋಟಿ ರೂಪಾಯಿ ಬಿಡುಗಡೆಯಾಗಲಿದೆ.

ಈ ವಿವರಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನ ಪರಿಷತ್ತಿನಲ್ಲಿ ಶಾಸಕ ಪಿ.ಆರ್.ರಮೇಶ್ ಮಾಡಿದ ಪ್ರಶ್ನೆಗೆ ಉತ್ತರಿಸಿದ್ದಾರೆ.

ಬೆಂಗಳೂರಿನ ಆಸ್ಪತ್ರೆಗಳಿಗೆ ವೈದ್ಯಕೀಯ ಉಪಕರಣಗಳ ಖರೀದಿ

ಬೆಂಗಳೂರಿನ ಆಸ್ಪತ್ರೆಗಳಿಗೆ ವೈದ್ಯಕೀಯ ಉಪಕರಣಗಳ ಖರೀದಿ

"ವಿಧಾನಸೌಧ, ವಿಕಾಸ ಸೌಧ ಮತ್ತು ಎಂಎಸ್ ಬಿಲ್ಡಿಂಗ್‌ನಲ್ಲಿ ಎಲ್‌ಇಡಿ ಲೈಟಿಂಗ್, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಸಾಮಾಗ್ರಿಗಳು, ವೈದ್ಯಕೀಯ ಆಸ್ಪತ್ರೆಗಳು ಮತ್ತು ರಾಜೀವ್ ಗಾಂಧಿ ಸಂಸ್ಥೆ, ಕಿದ್ವಾಯಿ ಸ್ಮಾರಕ ಸಂಸ್ಥೆ, ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಮತ್ತು ವಾಣಿ ವಿಲಾಸ ಆಸ್ಪತ್ರೆ ಮುಂತಾದ ಆಸ್ಪತ್ರೆಗಳಿಗೆ ವೈದ್ಯಕೀಯ ಉಪಕರಣಗಳನ್ನು ಪೂರೈಸುವುದು ಸೇರಿದಂತೆ ಹಲವು ಕೆಲಸಗಳು ಪೂರ್ಣಗೊಂಡಿವೆ" ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಅಲ್ಲದೆ, ಬಿಬಿಎಂಪಿ ಮತ್ತು ಬೆಂಗಳೂರು ನಗರ ಜಿಲ್ಲೆಗೆ ಡಿಜಿಟಲ್ ಆರೋಗ್ಯ ಮೂಲಸೌಕರ್ಯ, ಸಂಚಾರ ಪೊಲೀಸರಿಗೆ ಸ್ಮಾರ್ಟ್ ಟ್ರಾಫಿಕ್ ಯೋಜನೆಗಳು, ಶಿವಾಜಿನಗರ ಬಸ್ ಟರ್ಮಿನಲ್ ಪುನರಾಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಿನಿ ಹಾಲ್ ಮತ್ತು ಟೆಂಡರ್‌ಶುರ್ ರಸ್ತೆಗಳು ಪೂರ್ಣಗೊಂಡಿವೆ ಎಂದು ಮಾಹಿತಿ ನೀಡಿದ್ದಾರೆ.

2018 ರಲ್ಲಿ ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಸ್ಥಾಪನೆ

2018 ರಲ್ಲಿ ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಸ್ಥಾಪನೆ

"2018-19 ಮತ್ತು 2022-23 ರ ನಡುವೆ ಕೇಂದ್ರ ಮತ್ತು ರಾಜ್ಯವು 804 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಯೋಜನೆಗಳನ್ನು ಅನುಷ್ಠಾನಗೊಳಿಸಲು ನಾವು 2018 ರಲ್ಲಿ ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ (ಬೆನ್‌ಎಸ್‌ಸಿಎಲ್) ಅನ್ನು ಸ್ಥಾಪಿಸಿದ್ದೇವೆ.

ಸ್ಮಾರ್ಟ್ ಸಿಟಿ ಯೋಜನೆಗೆ ಸಂಬಂಧಿಸಿದಂತೆ ನಿರ್ದೇಶಕರ ಮಂಡಳಿಯು 25 ಸಭೆಗಳನ್ನು ನಡೆಸಿದೆ. ಸ್ಮಾರ್ಟ್ ಸಿಟಿ ಸಲಹಾ ವೇದಿಕೆ ಏಳು ಸಭೆಗಳನ್ನು ನಡೆಸಿದೆ. ಈ ಸಭೆಗಳಲ್ಲಿ ಮತ್ತು ರಾಜ್ಯ ಮಟ್ಟದ ಉನ್ನತಾಧಿಕಾರ ಚಾಲನಾ ಸಮಿತಿಯ ಸಭೆಗಳಲ್ಲಿ ಎಲ್ಲಾ ಉದ್ದೇಶಿತ ಕಾಮಗಾರಿಗಳ ಬಗ್ಗೆ ವಿವರವಾಗಿ ಚರ್ಚಿಸಲಾಗಿದೆ ಎಂದು ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.

ಈ ಯೋಜನೆಗಳಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿರುವ ಶಾಸಕ ರಮೇಶ್, ಬಿಡುಗಡೆ ಮಾಡಿರುವ ಹಣ ಲಪಟಾಯಿಸಲಾಗಿದೆ ಎಂದು ಆರೋಪಿಸಿದ್ದಾರೆ. ಜೊತೆಗೆ ಎಲ್ಲ ಕಾಮಗಾರಿಗಳ ಲೆಕ್ಕ ಪರಿಶೋಧನೆ ನಡೆಸುವಂತೆ ಒತ್ತಾಯಿಸಿದ್ದಾರೆ.

ಶಾಸಕ ರಮೇಶ್ ಅವರ ಆರೋಪಕ್ಕೆ ಪ್ರತಿಕ್ರಿಯೆ ನಿಡಿರುವ ಸಿಎಂ ಬೊಮ್ಮಾಯಿ ಅಕ್ರಮಗಳು ಕಂಡು ಬಂದಲ್ಲಿ ತನಿಖೆಗೆ ಆದೇಶಿಸುವುದಾಗಿ ಭರವಸೆ ನೀಡಿದ್ದಾರೆ.

ರಾಜ್ಯದ 7 ಕಡೆ 15,867 ಕೋಟಿ ರೂ. ಮೌಲ್ಯದ 916 ಯೋಜನೆಗಳು

ರಾಜ್ಯದ 7 ಕಡೆ 15,867 ಕೋಟಿ ರೂ. ಮೌಲ್ಯದ 916 ಯೋಜನೆಗಳು

ರಾಜ್ಯಸಭೆಗೆ ಕಿರಿಯ ನಗರ ವ್ಯವಹಾರಗಳ ಸಚಿವ ಕೌಶಲ್ ಕಿಶೋರ್ ಮಂಡಿಸಿದ ಪ್ರತ್ಯೇಕ ಅಂಕಿಅಂಶಗಳ ಪ್ರಕಾರ, ರಾಜ್ಯವು ಬೆಳಗಾವಿ, ಬೆಂಗಳೂರು, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಮಂಗಳೂರು ಮತ್ತು ಶಿವಮೊಗ್ಗದ ಏಳು ನಗರಗಳಲ್ಲಿ 15,867 ಕೋಟಿ ರೂಪಾಯಿ ಮೌಲ್ಯದ 916 ಯೋಜನೆಗಳನ್ನು ಕೈಗೆತ್ತಿಕೊಂಡಿದೆ.

ಎಲ್ಲಾ ಯೋಜನೆಗಳಲ್ಲಿ, ರಾಜ್ಯವು ಈಗಾಗಲೇ 9,893 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ 733 ಯೋಜನೆಗಳನ್ನು ಜಾರಿಗೊಳಿಸಿದೆ. ಜೊತೆಗೆ 5,974 ಕೋಟಿ ರೂಪಯಿ ಮೌಲ್ಯದ 183 ಯೋಜನೆಗಳು ಅನುಷ್ಠಾನದಲ್ಲಿವೆ ಎಂದು ಮಾಹಿತಿ ನೀಡಿದ್ದಾರೆ.

ಇನ್ನು, ಕೇಂದ್ರ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಬೆಂಗಳೂರು ಈವರೆಗೆ 719 ಕೋಟಿ ರೂಪಾಯಿ ಮೌಲ್ಯದ 35 ಯೋಜನೆಗಳನ್ನು ಪೂರ್ಣಗೊಳಿಸಿದೆ. ಬಸವರಾಜ ಬೊಮ್ಮಾಯಿ ಅವರು ಈಗಾಗಲೇ 30 ಯೋಜನೆಗಳು ಪೂರ್ಣಗೊಂಡಿವೆ ಮತ್ತು 357 ಕೋಟಿ ರೂಪಾಯಿ ಮೌಲ್ಯದ 15 ಯೋಜನೆಗಳು ನಡೆಯುತ್ತಿವೆ ಎಂದು ಮಾಹಿತಿ ನೀಡಿದ್ದಾರೆ.

(ಮಾಹಿತಿ ಕೃಪೆ- ಟೈಮ್ಸ್ ಆಫ್ ಇಂಡಿಯಾ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+