Holiday: ಅಕ್ಟೋಬರ್‌ನಲ್ಲಿ ಶಾಲಾ-ಕಾಲೇಜು, ಬ್ಯಾಂಕ್‌ಗಳಿಗೆ ಎಷ್ಟು ದಿನ ರಜೆ ಗೊತ್ತಾ? ಇಲ್ಲಿದೆ ಪಟ್ಟಿ
Holiday: ರಾಜ್ಯದಲ್ಲಿ ಹಲವು ಕಾರಣಾಂತರಗಳಿಂದ ಜಿಲ್ಲೆಗಳಲ್ಲಿ ವರ್ಷದ ಆರಂಭದಿಂದಲೂ ಶಾಲಾ-ಕಾಲೇಜುಗಳು, ಬ್ಯಾಂಕ್‌ಗಳಿಗೆ ಸಾಲು ರಜೆಗಳನ್ನೇ ಘೋಷಿಸಲಾಗಿದೆ. ಇನ್ನೂ ಇದೀಗ ಕೇವಲ ಒಂದು ದಿನ ಕಳೆದರೆ, ಸಾಕು ಅಕ್ಟೋಬರ್ ಎಂಟ್ರಿ ಕೊಡಲಿದೆ. ಈ ತಿಂಗಳಿನಲ್ಲಿ ಎಷ್ಟು ದಿನ ರಜೆಗಳು ಬರಲಿವೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಇದೀಗ ರಾಜ್ಯದಲ್ಲಿ ಸೆಪ್ಟೆಂಬರ್ 20ರಿಂದ ಶಾಲೆಗಳಿಗೆ ದಸರಾ ರಜೆ ಆರಂಭವಾಗಿದ್ದು, ಅಕ್ಟೋಬರ್ 7ಕ್ಕೆ ಅಂತ್ಯವಾಗಲಿದೆ. ಇದರ ಬೆನ್ನಲ್ಲೇ ಪ್ರತಿ ತಿಂಗಳಿನಂತೆ ಅಕ್ಟೋಬರ್‌ನಲ್ಲೂ ಸಾಲು ಸರ್ಕಾರಿ ರಜೆಗಳು ಬರಲಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಬ್ಯಾಂಕ್ ಉದ್ಯೋಗಿಗಳಿಗೆ ರಜೆ ಹಬ್ಬದೂಟವೇ ಸಿಕ್ಕಂತಾಗಲಿದೆ. ಹಾಗಾದ್ರೆ ಯಾವ್ಯಾವ ದಿನದಂದು ಯಾಕೆ ರಜೆ ಎನ್ನುವ ಪ್ರಶ್ನೆಗೆ ಉತ್ತರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಈಗಾಗಲೇ ಹಲವು ಜಿಲ್ಲೆಗಳಲ್ಲಿ ಸರ್ಕಾರಿ ರಜೆಗಳನ್ನು ಹೊರತುಪಡಿಸಿ, ಭಾರೀ ಮಳೆ, ವಿಶೇಷ ಕಾರ್ಯಕ್ರಮಗಳು ಸೇರಿದಂತೆ ಹಲವು ಕಾರಣಗಳಿಂದ ಶಾಲಾ-ಕಾಲೇಜುಗಳಿಗೆ ಸಾಲು ರಜೆಗಳನ್ನೇ ಘೋಷಣೆ ಮಾಡಲಾಗಿದೆ. ಇದೀಗ ಶಾಲಾ ವಿದ್ಯಾರ್ಥಿಗಳು ದಸರಾ ರಜೆಯಲ್ಲಿದ್ದಾರೆ. ಇನ್ನೂ ಕೆಲವೇ ದಿನಗಳಲ್ಲಿ ಈ ರಜೆ ಮುಗಿಯಲಿದ್ದು, ಶಾಲೆಗಳು ಆರಂಭವಾಗಲಿದೆ. ಇದರ ಬೆನ್ನಲ್ಲೇ ಮತ್ತೆ ಅಕ್ಟೋಬರ್‌ನಲ್ಲೂ ಸರ್ಕಾರಿ ರಜೆಗಳನ್ನು ಬರಲಿವೆ.
ಮುಂಬರುವ ಅಕ್ಟೋಬರ್‌ನಲ್ಲಿ ಕರ್ನಾಟಕದಲ್ಲಿ ಹಬ್ಬಗಳ ಹಿನ್ನೆಲೆ 5 ದಿನ ಸರ್ಕಾರಿ ರಜೆ ಇರಲಿದೆ. ಬ್ಯಾಂಕ್‌ಗಳು 11 ದಿನ ಮುಚ್ಚಲ್ಪಡಲಿವೆ. ಇದೀಗ ಸದ್ಯ ರಾಜ್ಯದಲ್ಲಿ ಶಾಲಾ ಮಕ್ಕಳಿಗೆ ದಸರಾ ರಜೆ ನೀಡಲಾಗಿದ್ದು, ಈ ರಜಾ ಅವಧಿ ಅಕ್ಟೋಬರ್ 7ಕ್ಕೆ ಮುಕ್ತಾಯವಾಗಲಿದೆ. ಇನ್ನು ಅಕ್ಟೋಬರ್‌ನಲ್ಲಿ ದಸರಾ, ದೀಪಾವಳಿ ಹಬ್ಬಗಳಿವೆ. ರಾಜ್ಯದಲ್ಲಿ ಶಾಲಾ ಮಕ್ಕಳಿಗೆ ಅಕ್ಟೋಬರ್ 7ರ ವರೆಗೂ ದಸರಾ ರಜೆ ಇರಲಿದ್ದು, ಬಳಿಕ ದೀಪಾವಳಿಗೆ 2 ದಿನ, 3 ಭಾನುವಾರಗಳು ಸೇರಿ 12 ದಿನ ರಜೆ ಇರಲಿವೆ.
2025 ಅಕ್ಟೋಬರ್ ಸರ್ಕಾರಿ ರಜೆಗಳು
* ಅಕ್ಟೋಬರ್ 1 ಬುಧವಾರ: ಆಯುಧ ಪೂಜೆ
* ಅಕ್ಟೋಬರ್ 2 ಗುರುವಾರ: ಗಾಂಧಿ ಜಯಂತಿ, ದಸರಾ ವಿಜಯ ದಶಮಿ
* ಅಕ್ಟೋಬರ್ 7 ಮಂಗಳವಾರ: ಮಹರ್ಷಿ ವಾಲ್ಮೀಕಿ ಜಯಂತಿ
* ಅಕ್ಟೋಬರ್ 20 ಸೋಮವಾರ: ನರಕ ಚತುರ್ದಶಿ
* ಅಕ್ಟೋಬರ್ 22 ಬುಧವಾರ: ದೀಪಾವಳಿ
ಬ್ಯಾಂಕ್‌ಗಳಿಗೆ ಎಷ್ಟು ದಿನ ರಜೆ?
* ಅಕ್ಟೋಬರ್ 1: ಆಯುಧ ಪೂಜೆ
* ಅಕ್ಟೋಬರ್ 2: ಗಾಂಧಿ ಜಯಂತಿ, ದಸರಾ ವಿಜಯ ದಶಮಿ
* ಅಕ್ಟೋಬರ್ 5: ಭಾನುವಾರ
* ಅಕ್ಟೋಬರ್ 7: ಮಹರ್ಷಿ ವಾಲ್ಮೀಕಿ ಜಯಂತಿ
* ಅಕ್ಟೋಬರ್ 11: 2ನೇ ಶನಿವಾರ
* ಅಕ್ಟೋಬರ್ 12: ಭಾನುವಾರ
* ಅಕ್ಟೋಬರ್ 19: ಭಾನುವಾರ
* ಅಕ್ಟೋಬರ್ 20: ನರಕ ಚತುರ್ದಶಿ
* ಅಕ್ಟೋಬರ್ 22: ದೀಪಾವಳಿ
* ಅಕ್ಟೋಬರ್ 25: 4ನೇ ಶನಿವಾರ
* ಅಕ್ಟೋಬರ್ 26: ಭಾನುವಾರ
ಒಟ್ಟಿನಲ್ಲಿ ಹೇಳುವುದಾದರೆ, ಮುಂಬರುವ ಅಕ್ಟೋಬರ್‌ನಲ್ಲೂ ಸಹ ಶಾಲಾ-ಕಾಲೇಜುಗಳು ಹಾಗೂ ಬ್ಯಾಂಕ್‌ಗಳಿಗೆ ಸಾಲು ರಜೆಗಳೇ ಸಿಗಲಿವೆ. ಇನ್ನುಳಿದಂತೆ ಸ್ಥಳೀಯ ರಜೆಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು, ಜಿಲ್ಲಾಧಿಕಾರಿಗಳ ನಿರ್ಧಾರಕ್ಕೆ ಬಿಡಲಾಗುತ್ತದೆ. ಯಾಕಂದ್ರೆ ಸ್ಥಳೀಯವಾಗಿ ಏನೇ ಆದ್ರೂ ಮೊದಲು ಗೊತ್ತಾಗುವುದು ಅವರಿಗೆ ಮಾತ್ರ..












Click it and Unblock the Notifications