Government Employees: ಹಳೆ ಪಿಂಚಣಿ ಯೋಜನೆ ಜಾರಿ: ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಸರ್ಕಾರಿ ನೌಕರರು
ಬೆಂಗಳೂರು: ಕರ್ನಾಟಕದಲ್ಲಿ ಹಳೆ ಪಿಂಚಣಿ ಜಾರಿ ಆಗಬೇಕು ಎಂಬುದು ಸರ್ಕಾರಿ ನೌಕಕರರ ಬಹು ದಿನಗಳ ಬೇಡಿಕೆ. 2004ರಲ್ಲಿ ಕೇಂದ್ರ ಸರ್ಕಾರ ಹಳೆ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ದೇಶದಾದ್ಯಂತ ಅನ್ವಯಿಸಿತು. ಅಂದಿನಿಂದಲೂ ಸರ್ಕಾರಿ ನೌಕರರು ಹಳೆ ಪಿಂಚಣಿ ಯೋಜನೆಯ ಮರು ಜಾರಿಗೆ ರಾಜ್ಯ ಸರ್ಕಾರಿ ನೌಕರರು ಒತ್ತಾಯಿಸುತ್ತಲೇ ಬಂದಿದ್ದಾರೆ. ಇನ್ನೂ ಸರ್ಕಾರಿಬ ನೌಕರರ ಬೇಡಿಕೆ ಮಣಿದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಳೆ ಪಿಂಚಣಿ ಮರು ಜಾರಿಯ ಭರವಸೆ ನೀಡಿದ್ದಾರೆ.
ಹಳೆ ಪಿಂಚನಿ ಯೋಜನೆ ಮರು ಜಾರಿ ಕುರಿತು ಗಂಭೀರ ಚಿಂತನೆ ನಡೆಸಿದ ಕಾಂಗ್ರೆಸ್ ಸರ್ಕಾರ ಸಾಧಕ, ಬಾಧಕಗಳನ್ನು ಪರಿಶೀಲಿಸಿ ಹಳೆ ಪಿಂಚಣಿ ಯೋಜನೆಯನ್ನ ಮರು ಜಾರಿಗೊಳಿಸುವುದಾಗಿ ಭರವಸೆ ನೀಡಿದೆ. ಇತ್ತ ಸರ್ಕಾರಿ ನೌಕರರ ಬಹುದಿನದ ಬೇಡಿಕೆಯಾಗಿರುವ ಹಳೆ ಪಿಂಚಣಿ ಯೋಜನೆ ಕುರಿತು ರಾಜ್ಯ ಸರಕಾರಿ ನೌಕರರು ಎನ್‌ಪಿಎಸ್ ರದ್ದುಪಡಿಸಿ ಹಳೆಯ ಪಿಂಚಣಿ ವ್ಯವಸ್ಥೆಯನ್ನೇ (ಒಪಿಎಸ್) ಮರು ಜಾರಿಗೊಳಿಸುವಂತೆ ಕೋರಿ ರಾಜ್ಯ ಸರಕಾರಿ ನೌಕರರ ಸಂಘವು ರಾಜ್ಯ ಸರಕಾರದ ಎನ್‌ಪಿಎಸ್ ಅಧ್ಯಯನ ಸಮಿತಿಗೆ ಮನವಿ ಸಲ್ಲಿಸಿದೆ.

ರಾಜ್ಯ ಸರಕಾರಿ ನೌಕರರ ಸಂಘವು ಎನ್‌ಪಿಎಸ್ ರದ್ದುಪಡಿಸಿ ಹಳೆಯ ಪಿಂಚಣಿ ಯೋಜನೆ ಮರು ಜಾರಿಗೊಳಿಸಲು ಒತ್ತಾಯಿಸಿದೆ. ಕೇಂದ್ರ ಹಾಗೂ ಇತರ ರಾಜ್ಯಗಳ ಉದಾಹರಣೆಗಳನ್ನು ನೀಡಿದೆ. ಸಮಿತಿ ಅಧ್ಯಕ್ಷರಾದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ನೇತೃತ್ವದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ಹಳೆಯ ಪಿಂಚಣಿ ಯೋಜನೆಯನ್ನೇ ಮರುಜಾರಿಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಲು ಪೂರಕವಾದ ದಾಖಲೆ, ಮಾಹಿತಿಯನ್ನು ಸಲ್ಲಿಸಿ ಮನವಿ ಮಾಡಿದ್ದಾರೆ.
ಎನ್‌ಪಿಎಸ್ ನೌಕರರಿಗೆ ನಿವೃತ್ತಿ ನಂತರ ಯಾವುದೇ ಆರ್ಥಿಕ ಭದ್ರತೆ ಇಲ್ಲದಿರುವುದರಿಂದ ಎನ್‌ಪಿಎಸ್ ಯೋಜನೆ ರದ್ದುಪಡಿಸಿ ಹಳೆಯ ಪಿಂಚಣಿ ಯೋಜನೆ ಮರುಜಾರಿಗೊಳಿಸಬೇಕು. ಹಾಲಿ ಎನ್‌ಪಿಎಸ್ ನೌಕರರ ವೇತನದಿಂದ ಕಟಾವಣೆ ಮಾಡುತ್ತಿರುವ ವಂತಿಗೆ ಮೊತ್ತ ನಿಲ್ಲಿಸಬೇಕು. ಈವರೆಗೆ ಎನ್‌ಪಿಎಸ್ ನೌಕರರಿಂದ ಕಟಾವಣೆಗೊಳಿಸಿರುವ ಎನ್‌ಪಿಎಸ್ ವಂತಿಗೆ ಮೊತ್ತವನ್ನು ಸಂಬಂಧಪಟ್ಟ ನೌಕರರ ಜಿಪಿಎಫ್ ಖಾತೆ ತೆರೆದು ಆ ಮೊತ್ತವನ್ನು ಅವರ ಖಾತೆಗೆ ಜಮೆಗೊಳಿಸಬೇಕು
ಸಂಘ ಸಲ್ಲಿಸಿದ ಮಾಹಿತಿ ಆಲಿಸಿದ ಸಮಿತಿಯು ಎನ್‌ಪಿಎಸ್ ಯೋಜನೆ ರದ್ದುಪಡಿಸಿ ಒಪಿಎಸ್ ಯೋಜನೆಯನ್ನು ರಾಜ್ಯದಲ್ಲಿ ಮರುಜಾರಿಗೊಳಿಸಲು ಪೂರಕವಾಗುವ ಸಮಗ್ರ ಶಿಫಾರಸು ವರದಿಯನ್ನು ಶೀಘ್ರವಾಗಿ ಸರಕಾರಕ್ಕೆ ಸಲ್ಲಿಸುವ ಭರವಸೆ ನೀಡಿದೆ. ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ಒಪಿಎಸ್ ಜಾರಿಗೊಳಿಸಲು ಕ್ರಮ ವಹಿಸಬೇಕು. ನೌಕರರಿಂದ ತೀವ್ರ ಒತ್ತಡವಿದ್ದು, ಹೋರಾಟದ ಹಾದಿ ತುಳಿಯುವ ಅನಿವಾರ್ಯತೆಗೆ ಸರಕಾರ ಅವಕಾಶ ನೀಡದೆ ಸ್ಪಂದಿಸುವಂತೆ ಮನವಿ ಮಾಡಲಾಗುವುದು ಎಂದು ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದ್ದಾರೆ.












Click it and Unblock the Notifications